Home ಬೆಂಗಳೂರು ನಗರ ಮೊಬೈಲ್‌ ಆ್ಯಪಲ್ಲೇ ಬಿಎಂಟಿಸಿ ಬಸ್‌ ಪಾಸ್‌

ಮೊಬೈಲ್‌ ಆ್ಯಪಲ್ಲೇ ಬಿಎಂಟಿಸಿ ಬಸ್‌ ಪಾಸ್‌

86
0
BMTC

ಬೆಂಗಳೂರು:

ಇನ್ನು ಮುಂದೆ ಪಾಸ್‌ ಖರೀದಿಸುವ ಬದಲಾಗಿ ಮೊಬೈಲ್‌ ಫೋನ್‌ನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣಿಸುವುದಕ್ಕೆ ಬಿಎಂಟಿಸಿ ಅವಕಾಶ ಕಲ್ಪಿಸಿದೆ.

ನಗರದ ಖಾಸಗಿ ಸಂಸ್ಥೆ ಟುಮೊಕ್‌ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್‌ ಆ್ಯಪ್‌ ಪರಿಚಯಿಸುತ್ತಿರುವ ಬಿಎಂಟಿಸಿ, ಸ್ಮಾರ್ಟ್‌ಫೋನ್‌ಗಳಲ್ಲೇ ಟುಮೊಕ್‌ ಸಂಸ್ಥೆಯ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ದಿನದ ಮತ್ತು ವಾರದ ಹಾಗೂ ಮಾಸಿಕ ಪಾಸುಗಳನ್ನು ಪಡೆಯಲು ಅವಕಾಶ ನೀಡಿದೆ. ಅಲ್ಲದೆ, ಮೊಬೈಲ್‌ ಆ್ಯಪ್‌ನನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್‌ ಟಿಕೆಟ್‌ ಮಿಷನ್‌ನಲ್ಲಿ ಸ್ಕಾ್ಯನ್‌ ಮಾಡಿ ಪ್ರಯಾಣಿಬಹುದಾಗಿದೆ. ಇದರಿಂದ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್‌ ಖರೀದಿಸುವ ಅಗತ್ಯವಿಲ್ಲವಾಗಲಿದೆ.

ಆರಂಭದಲ್ಲಿ ಎಲ್ಲ ವೋಲ್ವೋ ಬಸ್‌ಗಳು ಹಾಗೂ ಸುಮಾರು 200 ಸಾಮಾನ್ಯ ಬಸ್‌ಗಳಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಸೂರ್ಯಸೇನ್‌ ಮಾಹಿತಿ ನೀಡಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಂಟಿಸಿ: “Tummoc ಸಹಯೋಗದೊಂದಿಗೆ BMTC ಯು ಶೀಘ್ರದಲ್ಲಿಯೇ ಪ್ರಯಾಣಿಕರಿಗೆ ಎಲ್ಲಾ ವಿಧವಾದ‌ ಪಾಸುಗಳನ್ನು ಮೊಬೈಲ್ ಪಾಸ್‌ಗಳನ್ನಾಗಿ ನೀಡಲು ಪ್ರಾರಂಭಿಸಲಿದೆ, ಜೊತೆಗೆ ಈ ತಿಂಗಳೊಳಗೆ ಎಲ್ಲಾ AC ಸೇವೆಗಳಲ್ಲಿ ಹೆಚ್ಚು ಸುಸಜ್ಜಿತ ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಿಡುಗಡೆ ಮಾಡಲಿದೆ. ಈ ಕ್ರಮವು ಪ್ರಯಾಣಿಕರಿಗೆ ಟಿಟಿಎಂಸಿ ಮತ್ತು ಬಸ್ ನಿಲ್ದಾಣಗಳಲ್ಲಿ ಪಾಸ್‌ಗಳಿಗಾಗಿ ಅರ್ಜಿ ಸಲ್ಲಿಸುವ ಸಮಯವನ್ನು ಉಳಿಸಲು ಸಹಕಾರಿಯಾಗಲಿದೆ.”

LEAVE A REPLY

Please enter your comment!
Please enter your name here