Home ಬೆಂಗಳೂರು ನಗರ ಡಿಜಿಟಲ್ ಟಿಕೇಟಿಂಗ್ ವ್ಯವಸ್ಥೆಯೊಂದಿಗೆ ಬಿ.ಎಂ.ಟಿ.ಸಿ ಬಸ್ಸುಗಳ ಕಾರ್ಯಾಚರಣೆ

ಡಿಜಿಟಲ್ ಟಿಕೇಟಿಂಗ್ ವ್ಯವಸ್ಥೆಯೊಂದಿಗೆ ಬಿ.ಎಂ.ಟಿ.ಸಿ ಬಸ್ಸುಗಳ ಕಾರ್ಯಾಚರಣೆ

81
0

ಬೆಂಗಳೂರು:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ 4500 ಸಾರಿಗೆಗಳನ್ನು ಆಚರಣೆಗೊಳಿಸಲಿದ್ದು, ಸಾರಿಗೆ ಸೇವೆಗಳನ್ನು ಬೆಳಿಗ್ಗೆ 5.00 ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೆ ಕಾರ್ಯಾಚರಿಸಲಿವೆ.

ಬೆಂಗಳೂರು ನಗರ ಮತ್ತು ಹೊರ ವಲಯದ ಸಾರ್ವಜನಿಕ ಪ್ರಯಾಣಿಕರಿಗೆ 4500 ಬಸ್ಸುಗಳನ್ನು ಕಾರ್ಯಾಚರಿಸಲಾಗುವುದು. ಪ್ರಯಾಣಿಕರ ದಟ್ಟಣೆಗನುಗುಣವಾಗಿ ಸಾರಿಗೆ ಸೇವೆಗಳನ್ನು ಹೆಚ್ಚಿಸಲಾಗುವುದು.

ಡಿಜಿಟಲ್ ಟಿಕೇಟಿಂಗ್ (QR code based) ವ್ಯವಸ್ಥೆಯನ್ನು ಎಲ್ಲಾ ಬಸ್ಸುಗಳಲ್ಲಿ ಒದಸಲಾಗಿದೆ.

ಚಾಲನಾ ಸಿಬ್ಬಂದಿಗಳ ನಿಯೋಜನೆ ಮತ್ತು ಹೊಣೆಗಾರಿಕೆ:

ಎಲ್ಲಾ ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಚಾಲನಾ ಸಿಬ್ಬಂದಿಗಳು ಮುಖಗವಸು (Face mask) ನ್ನು ಕಡ್ಡಾಯವಾಗಿ ಧರಿಸುವುದು. ಚಾಲನಾ ಸಿಬ್ಬಂದಿಗಳು ಆಗಿಂದಾಗ್ಗೆ ಸ್ಯಾನಿಟೈಸರ್‍ನ್ನು ಬಳಸಿ, ಶುಚಿತ್ವವನ್ನು ಕಾಪಾಡುವುದು. ಬಸ್ಸುಗಳಲ್ಲಿ ಒಟ್ಟು ಆಸನಗಳ ಸಾಮಥ್ರ್ಯದಷ್ಟು ಪ್ರಯಾಣಿಕರನ್ನು ಪ್ರಯಾಣಿಸಲು ಅನುಮತಿಸುವುದು. ನಿಗಧಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವುದು/ಇಳಿಸುವುದು.

ಸಾರ್ವಜನಿಕ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಕ್ರಮಗಳು:

ಪ್ರಯಾಣಿಕರು ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಕಡ್ಡಾಯವಾಗಿ ಮುಖಗವಸು (Face mask) ನ್ನು ಧರಿಸುವುದು.

ಮುಖಗವಸು (Face mask) ಧರಿಸದ ಪ್ರಯಾಣಿಕರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಯಾವದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ (Queue system) ಬಸ್ಸನ್ನು ಹತ್ತುವುದು/ಇಳಿಯುವುದು.

ಪ್ರಯಾಣಿಕರ ಆಸನಗಳು ಭರ್ತಿಯಾಗಿದ್ದಲ್ಲಿ, ಬಸ್ಸನ್ನು ಹತ್ತಬಾರದು. ಮುಂದಿನ ಬಸ್ಸಿಗಾಗಿ ಕಾಯುವುದು. ಜ್ವರ ಹಾಗೂ ಇತರೆ ಖಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಬಾರದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here