ಬೀದರ, ಜುಲೈ 20: ಬೀದರ್‌ನಲ್ಲಿರುವ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಹಿನ್ನೆಲೆ, ಸ್ಥಳದಲ್ಲಿ ಭಾರೀ ಸುರಕ್ಷತಾ ತಪಾಸಣೆ ನಡೆಯುತ್ತಿದೆ. ಪೊಲೀಸರು ಮಾಹಿತಿ ನೀಡಿದಂತೆ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡಿವೆ.
ಈ ಇಮೇಲ್‌ನಲ್ಲಿ ಸ್ಫೋಟಕ ಬಾಂಬ್ ಇಡಲಾಗಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದ್ದು, ಇದನ್ನೆ ಹಿನ್ನಲೆಯಲ್ಲಿ ಗುರುದ್ವಾರದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆ ಇದೇ ತರಹದ ಮತ್ತೊಂದು ಬೆದರಿಕೆ ಇಮೇಲ್ ಬಂದಿದ್ದು, ಇದು ನಿರಂತರ ಬೆದರಿಕೆಗಳ ಶಂಕೆಗೆ ಕಾರಣವಾಗಿದೆ.

ಬೀದರ್‌ನ ಈ ಗುರುದ್ವಾರವು ಅಮೃತಸರದ ಗುರುದ್ವಾರ ಶೈಲಿಯ ಲಂಗರ್ ವ್ಯವಸ್ಥೆ ಹೊಂದಿದ್ದು, ದಿನಕ್ಕೂ ಹತ್ತಾರು ಭಕ್ತರು ಭೇಟಿ ನೀಡುವ ಪ್ರಮುಖ ಧಾರ್ಮಿಕ ತಾಣವಾಗಿದೆ. ಇಂತಹ ಮಹತ್ವದ ತಾಣಕ್ಕೆ ಬಂದಿರುವ ಬೆದರಿಕೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
ಪೊಲೀಸರು ತಿಳಿಸಿದ್ದಾರೆ, ಇಮೇಲ್ ಕಳಿಸಿದ ಮೂಲವನ್ನು ಪತ್ತೆ ಹಚ್ಚಲು ತನಿಖೆ ಆರಂಭವಾಗಿದೆ. ಇದುವರೆಗೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲವಾದರೂ, ಶೋಧ ಕಾರ್ಯ ಮುಂದುವರೆದಿದೆ.

ಸಾರ್ವಜನಿಕರಲ್ಲಿ ಆತಂಕವಿಲ್ಲದೆ ವರ್ತಿಸಲು ಪೊಲೀಸ್ ಇಲಾಖೆ ಮನವಿ ಮಾಡಿದ್ದು, ಸ್ಥಳದಲ್ಲಿ ಯಾವುದೇ ಅಪಾಯವಿಲ್ಲದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.