Home ಬೆಂಗಳೂರು ನಗರ ಬೆಂಗಳೂರಿಂದ ಹೊರಟ ವಿಮಾನಕ್ಕೆ ಅಯೋಧ್ಯೆ ಏರ್ಪೋರ್ಟ್ ನಲ್ಲಿ ತುರ್ತು ಲ್ಯಾಂಡಿಂಗ್‌: ಬಾಂಬ್ ಬೆದರಿಕೆ

ಬೆಂಗಳೂರಿಂದ ಹೊರಟ ವಿಮಾನಕ್ಕೆ ಅಯೋಧ್ಯೆ ಏರ್ಪೋರ್ಟ್ ನಲ್ಲಿ ತುರ್ತು ಲ್ಯಾಂಡಿಂಗ್‌: ಬಾಂಬ್ ಬೆದರಿಕೆ

3
0

ಬೆಂಗಳೂರು/ಅಯೋಧ್ಯೆ: ಬೆಂಗಳೂರಿಂದ ಹೊರಟ ವಿಮಾನಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆ, ಅಯೋಧ್ಯೆ ಏರ್ಪೋರ್ಟ್ ನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಗಿದೆ.

ವಿಮಾನದಲ್ಲಿ ಪರಿಶೀಲನೆ ಬಳಿಕ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆ ಹುಸಿಬಾಂಬ್‌ ಎಂದು ಅಯೋಧ್ಯೆ ಏರ್‌ಪೋರ್ಟ್ ನಿರ್ದೇಶಕ ವಿನೋದ್ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಟು ಅಯೋಧ್ಯೆಗೆ 173 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಕಾಶ ಏರ್‌ಲೈನ್ಸ್​ಗೆ ಹುಸಿಬಾಂಬ್​ ಬೆದರಿಕೆ ಬಂದಿದೆ. ತಕ್ಷಣ ತುರ್ತು ಭೂಸ್ಪರ್ಶ ಮಾಡಿ ಒಟ್ಟು ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

ಅಯೋಧ್ಯೆ ಏರ್‌ಪೋರ್ಟ್ ನಿರ್ದೇಶಕ ವಿನೋದ್ ಕುಮಾರ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬೆಂಗಳೂರು ಟು ಅಯೋಧ್ಯೆ ನಡುವೆ ಸಂಚರಿಸುವ ಆಕಾಶ ಏರ್‌ಲೈನ್ಸ್​ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಮಧ್ಯಾಹ್ನ 1:30ರ ಸುಮಾರಿಗೆ ಬಾಂಬ್ ಬೆದರಿಕೆ ಕರೆ ಮಾಹಿತಿ ಬಂದ ತಕ್ಷಣ ಎಮರ್ಜೆನ್ಸಿ ಲ್ಯಾಂಡಿಂಗ್​ಗೆ ಆದೇಶಿಸಲಾಯಿತು ಎಂದಿದ್ದಾರೆ.

LEAVE A REPLY

Please enter your comment!
Please enter your name here