Home Uncategorized Boycott Chinese Goods: ಚೀನಾದಿಂದ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಏಕೆ ಅನುಮತಿ ನೀಡುತ್ತಿದೆ? ಕೇಜ್ರಿವಾಲ್...

Boycott Chinese Goods: ಚೀನಾದಿಂದ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಏಕೆ ಅನುಮತಿ ನೀಡುತ್ತಿದೆ? ಕೇಜ್ರಿವಾಲ್ ಪ್ರಶ್ನೆ

18
0

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಇತ್ತೀಚೆಗೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಚೀನಾದ ವಸ್ತುಗಳನ್ನು ಬಹಿಷ್ಕರಿಸುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜನರಿಗೆ ಮನವಿ ಮಾಡಿದ್ದಾರೆ. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಚಕಮಕಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಗಡಿಯಲ್ಲಿ ಚೀನಾದ ಆಕ್ರಮಣ ಹೆಚ್ಚುತ್ತಿದೆ, ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಾ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಚೀನಾಗೆ ಬುದ್ಧಿ ಕಲಿಸಲು ಚೀನಾ ವಸ್ತುಗಳನ್ನು ಬಹಿಷ್ಕರಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.

ಎಎಪಿ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯನ್ನು ಉದ್ದೇಶಿಸಿ ಕೇಜ್ರಿವಾಲ್ ಮಾತನಾಡಿ, ಗಡಿಯಲ್ಲಿ ಚೀನಾದ ಆಕ್ರಮಣ ಹೆಚ್ಚುತ್ತಿದೆ. ಕಳೆದ ಕೆಲವು ವರ್ಷಗಳಿಂದ ಚೀನಾ ನಮಗೆ ಬೆದರಿಕೆ ಹಾಕುತ್ತಿದೆ, ಅಲ್ಲಿ ನಮ್ಮ ಸೈನಿಕರು ಚೀನಿಯರೊಂದಿಗೆ ಕೆಚ್ಚೆದೆಯಿಂದ ಹೋರಾಡುತ್ತಿದ್ದಾರೆ ಮತ್ತು ಕೆಲವು ಸೈನಿಕರು ಕಳೆದ ವರ್ಷ ಗಾಲ್ವಾನ್‌ನಲ್ಲಿ ಪ್ರಾಣ ತ್ಯಾಗ ಮಾಡಿದ್ದರು. ಇದರೊಂದಿಗೆ ಚೀನಾದೊಂದಿಗಿನ ವ್ಯಾಪಾರದ ಮೇಲಿನ ನಿಷೇಧದ ಬಗ್ಗೆ ಅವರು ತಮ್ಮ ನಿಲುವನ್ನು ಪುನರುಚ್ಚರಿಸಿದರು.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಸಿಎಂ ಕೇಜ್ರಿವಾಲ್ ಮಾತನಾಡಿ, ಚೀನಾವನ್ನು ಶಿಕ್ಷಿಸುವ ಬದಲು ಮೋದಿ ಸರ್ಕಾರವು ನೆರೆಯ ದೇಶದಿಂದ ಹೆಚ್ಚಿನ ಪ್ರಮಾಣದ ಆಮದುಗಳಿಗೆ ಅವಕಾಶ ನೀಡುತ್ತಿದೆ.

ಮತ್ತಷ್ಟು ಓದಿ: ಇದು ನೆಹರೂ ಭಾರತವಲ್ಲ: ರಾಹುಲ್ ಗಾಂಧಿಯ ಚೀನಾ ಬೆದರಿಕೆ ಕುರಿತ ಹೇಳಿಕೆಗೆ ಬಿಜೆಪಿ ತಿರುಗೇಟು

ಇಂತಹ ಪರಿಸ್ಥಿತಿಯಲ್ಲಿ ನಾವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ಹಣಕಾಸು ವರ್ಷದಲ್ಲಿ 2020-21ರಲ್ಲಿ ಚೀನಾದಿಂದ 65 ಬಿಲಿಯನ್ ಡಾಲರ್ ಆಮದು ಮಾಡಿಕೊಂಡಿದ್ದರೆ, 2021-22ರಲ್ಲಿ ಭಾರತ ಚೀನಾದಿಂದ 95 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ ಎಂದು ಸಿಎಂ ಹೇಳಿದರು. ಅಂತಹ ಪರಿಸ್ಥಿತಿಯಲ್ಲಿ, ನಾವು 95 ಬಿಲಿಯನ್ ಡಾಲರ್ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವ ದಿನ ಹತ್ತಿರ ಬಂದಿದೆ, ಚೀನಾ ಇದರಿಂದ ಪಾಠ ಕಲಿಯುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಾಗ್ದಾಳಿ ನಡೆಸಿದ ಅವರು, ದೇಶದ ಸೈನಿಕರ ಬಗ್ಗೆ ಸ್ವಲ್ಪ ಗೌರವ ತೋರಿಸಲು ಕೇಂದ್ರವನ್ನು ಕೇಳಿಕೊಂಡರು. ಕೇಜ್ರಿವಾಲ್, ನಿಮಗೆ ನಮ್ಮ ಸೈನಿಕರ ಬಗ್ಗೆ ಗೌರವವಿಲ್ಲವೇ? ಸ್ವಲ್ಪ ಧೈರ್ಯವನ್ನು ತೋರಿಸಿ ಭಾರತ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಚೀನಾಕ್ಕೆ ತನ್ನ ಸ್ಥಿತಿ ತಿಳಿಯುತ್ತದೆ.

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ದೇಶವಾಸಿಗಳಿಗೆ ಮನವಿ ಮಾಡಿದ ಅವರು, ಚೀನಾ ಉತ್ಪನ್ನಗಳು ಅಗ್ಗವಾಗಿವೆ, ಚೀನಾದ ಉತ್ಪನ್ನಗಳು ಅಗ್ಗವಾಗಿದ್ದರೂ ನಮಗೆ ಬೇಡ. ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಖರೀದಿಸಲು ನಾವು ಸಿದ್ಧರಿದ್ದೇವೆ, ಅದಕ್ಕೆ ದುಪ್ಪಟ್ಟು ಬೆಲೆಯನ್ನು ನೀಡಬೇಕಾಗಿದ್ದರೂ ಕೂಡ ಎಂದರು.

ಮತ್ತಷ್ಟು ಓದಿ: ಚೀನಾ ಯುದ್ಧಕ್ಕೆ ಅಣಿಯಾಗುತ್ತಿದೆ, ಇಲ್ಲಿ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ: ರಾಹುಲ್ ಗಾಂಧಿ

ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗಕ್ಕಾಗಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಮಾತನಾಡಿದ ಅವರು, ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗದಿಂದ ಜನರು ಬೇಸತ್ತಿದ್ದಾರೆ.

ಹಣದುಬ್ಬರವನ್ನು ನಿಯಂತ್ರಿಸಬಹುದು ಮತ್ತು ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ದೆಹಲಿಯ ಎಎಪಿ ಸರ್ಕಾರ ತೋರಿಸಿದೆ. ದೆಹಲಿಯ ಹಣದುಬ್ಬರವು ಭಾರತದಲ್ಲಿ ಅತ್ಯಂತ ಕಡಿಮೆ ಅಂದರೆ ಶೇ. 4.7 ಆಗಿದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

LEAVE A REPLY

Please enter your comment!
Please enter your name here