ತುಮಕೂರು;- ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಹೆಲ್ಮೆಟ್ ಧರಿಸಿ ಬುಲೇಟ್ ರೈಡ್ ಮಾಡಿದ್ದಾರೆ. ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಕಡ್ಡಾಯ ಕುರಿತು ಜಾಗೃತಿ ಮೂಡಿಸಲು ಡಾ ರಂಗನಾಥ್ ಮುಂದಾಗಿದ್ದಾರೆ.
ಪೊಲೀಸರು,ವಕೀಲರು,ಸಾರ್ವಜನಿಕರ ಜೊತೆ ಬುಲೇಟ್ ರೈಡ್ ಮಾಡಿ ಬೈಕ್ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು. ಕುಣಿಗಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಲೆಟ್ ನಲ್ಲಿ ಶಾಸಕ ರಂಗನಾಥ್ ಅವರು ರೌಂಡ್ಸ್ ಮಾಡಿದ್ದಾರೆ. ರೌಂಡ್ಸ್ ಮುಖಾಂತರ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಶಾಸಕರು ಮುಂದಾಗಿದ್ದಾರೆ.
ಉಚಿತವಾಗಿ ವಾಹನ ಸವಾರರಿಗೆ150ಕ್ಕೂ ಹೆಚ್ಚು ಹೆಲ್ಮೆಟ್ ವಿತರಣೆ ಮಾಡಿ ಶಾಸಕರು ಅರಿವು ಮೂಡಿಸಿದ್ದಾರೆ. ಪೊಲೀಸರು, ಪುರಸಭೆ ಅಧಿಕಾರಿಗಳು, ಸಾರ್ವಜನಿಕರಿಂದ ಶಾಸಕ ಡಾ.ರಂಗನಾಥ್ ಗೆ ಸಾಥ್ ನೀಡಿದ್ದಾರೆ.
The post Breaking; ಹೆಲ್ಮೆಟ್ ಧರಿಸಿ ಬುಲೇಟ್ ರೈಡ್ ಮಾಡಿದ ಶಾಸಕ ಡಾ.ರಂಗನಾಥ್ appeared first on Ain Live News.