 
        ನವದೆಹಲಿ: ಕರ್ನಾಟಕ ಸರ್ಕಾರದಿಂದ ಮುಂದಿನ 15 ದಿನಗಳವರೆಗೆ ಪ್ರತಿದಿನ ತಲಾ 2,600 ಕ್ಯೂಸೆಕ್ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿ ನೀರಿಲ್ಲದೇ ರೈತರು ಗೋಳಾಡುತ್ತಿದ್ದಾರೆ. ಬರದ ನಡುವೆಯೂ ಕಾವೇರಿ ಕೊಳ್ಳದ ರೈತರು ಹಾಗೂ ಸಾರ್ವಜನಿ ಕರಿಗೆ ಹೊರೆಯಾಗುವಂತೆ ಕರ್ನಾಟಕದಿಂದ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಆದೇಶ ಹೊರಡಿಸಿದೆ.
ನವೆಂಬರ್ ಒಂದಕ್ಕೆ ಗುಡ್ ನ್ಯೂಸ್ ಕೊಡಲಿರುವ ರಾಕಿಭಾಯ್ : ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ
ನವದೆಹಲಿಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸೋಮವಾರ ನಡೆಸಿದ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಹಾಗೂ ತಮಿಳುನಾಡು ವಾದವನ್ನು ಆಲಿಸಿದ ಸಿಡಬ್ಲ್ಯೂಆರ್ಸಿ ಕರ್ನಾಟಕದ ಕಾವೇರಿ ನದಿಯಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 2,600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದೆ. ಈ ಮೂಲಕ ಸಂಕಷ್ಟದಲ್ಲಿದ್ದ ಕರ್ನಾಟಕ ಜನತೆಗೆ ಪುನಃ ಸಿಡಬ್ಲ್ಯೂಆರ್ಸಿ ಶಾಕ್ ನೀಡಿದೆ.
The post Breaking News: ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್: ತಮಿಳುನಾಡಿಗೆ 15 ದಿನ ನೀರು ಬಿಡಲು CWRC ಸೂಚನೆ..! appeared first on Ain Live News.

 
         
        