ನೆಲಮಂಗಲ:- ಗ್ರಾಮಾಂತರ ಪೊಲೀಸರು ಕಾರ್ಯಚರಣೆ ನಡೆಸಿ, ಜನರಿಗೆ ಗಾಂಜಾ ಇನ್ನಿತರ ಮಾದಕವಸ್ತು ಮಾರಾಟ ಮಾಡುತಿದ್ದ ಯುವಕನನ್ನು ಬಂಧಿಸಲಾಗಿದೆ.
ನೆಲಮಂಗಲ ಇಸ್ಲಾಂಪುರದ ನಿವಾಸಿ ಸಲ್ಮಾನ್ ಪಾಷಾ (28) ಬಂಧಿತ ಆರೋಪಿ. ಬಂಧಿತನಿಂದ 5 ಗ್ರಾಂ ಎಮ್.ಡಿ.ಎಮ್, ಐದು ಕೆಜಿ ಗಾಂಜಾ, ಚಾಕು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಸಲ್ಮಾನ್ ಈ ಹಿಂದೆ ರಾಬರಿ ಕೇಸ್ ನಲ್ಲಿ ಜೈಲಿಗೂ ಹೋಗಿಬಂದಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಗ್ರಾಮಾಂತರ ಪೊಲೀಸರ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ
The post Breaking News; ನೆಲಮಂಗಲ: ಗಾಂಜಾ ಪೆಡ್ಲರ್ ಬಂಧನ appeared first on Ain Live News.