ನವದೆಹಲಿ : ಕೇಂದ್ರ ಚುನಾವಣಾ ಆಯೋಗ ಇಂದು ಪಂಚರಾಜ್ಯಗಳ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದೆ. ಹೌದು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಘೋಷಣೆ ಮಾಡಿದ್ದಾರೆ. ತೆಲಂಗಾಣ, ಛತ್ತೀಸ್ಗಢ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಿಜೋರಾಂ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಲಾಗಿದೆ.
ಮಧ್ಯಪ್ರದೇಶ ಹಾಗೂ ಮಿಜೋರಾಂನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದೆ, ಛತ್ತೀಸ್ಗಢದಲ್ಲಿ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ, ರಾಜಸ್ಥಾನದಲ್ಲಿ ನವೆಂಬರ್ 23ರಂದು ಹಾಗೂ ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಫಲಿತಾಂಶ ಹೊರಬರಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
ಪಂಚ ರಾಜ್ಯದ ವಿಧಾನ ಸಭಾ ಚುನಾವಣೆಗೆ ಪುರುಷ ಮತದಾರರ ಸಂಖ್ಯೆ 8.24 ಕೋಟಿ ಮಹಿಳಾ ಮತದಾರರ ಸಂಖ್ಯೆ 7.88 ಕೋಟಿಯಷ್ಟಿದೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರ ಸಂಖ್ಯೆ 60 ಲಕ್ಷವಿದೆ. ಅವರ ವಯಸ್ಸು 18 ರಿಂದ 19 ವರ್ಷಗಳು. 18 ವರ್ಷ ಪೂರ್ಣಗೊಳ್ಳಲಿರುವ 15.39 ಲಕ್ಷ ಮತದಾರರಿದ್ದು, ಮುಂಗಡ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಛತ್ತೀಸ್ಗಢ:
ಛತ್ತೀಸ್ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಹಂತ 1: ನವೆಂಬರ್ 7, 2023
ಎರಡನೇ ಹಂತ: ನವೆಂಬರ್ 17, 2023
ರಾಜಸ್ಥಾನ:
– ರಾಜಸ್ಥಾನದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
– ದಿನಾಂಕ: ನವೆಂಬರ್ 23, 2023
ಮಧ್ಯಪ್ರದೇಶ:
ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ದಿನಾಂಕ: ನವೆಂಬರ್ 17, 2023
ತೆಲಂಗಾಣ:
– ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ದಿನಾಂಕ: ನವೆಂಬರ್ 30, 2023
ಮಿಜೋರಾಂ:
– ಮಿಜೋರಾಂ ತನ್ನ ರಾಜ್ಯ ಚುನಾವಣೆಗೆ ಒಂದೇ ಹಂತದಲ್ಲಿ ಸಾಕ್ಷಿಯಾಗಲಿದೆ.
– ದಿನಾಂಕ: ನವೆಂಬರ್ 7, 2023
The post BREAKING NEWS: : ಪಂಚರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್..! ಫುಲ್ ಡಿಟೈಲ್ಸ್ ಇಲ್ಲಿದೆ appeared first on Ain Live News.