Home Uncategorized Breaking News; ಸಾಲಬಾಧೆ- ಕಚೇರಿಯಲ್ಲೇ ಉದ್ಯಮಿ ನೇಣಿಗೆ ಶರಣು

Breaking News; ಸಾಲಬಾಧೆ- ಕಚೇರಿಯಲ್ಲೇ ಉದ್ಯಮಿ ನೇಣಿಗೆ ಶರಣು

24
0

ಹುಬ್ಬಳ್ಳಿ;- ಸಾಲಬಾಧೆಯಿಂದ ಬೇಸತ್ತ ಉದ್ಯಮಿಯೊಬ್ಬರು ತಮ್ಮ ಕಾರ್ಖಾನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗೋಕುಲ ರಸ್ತೆಯ ಕೈಗಾರಿಕಾ ವಲಯದಲ್ಲಿ ನಡೆದಿದೆ.

ಶ್ರೀನಿಧಿ ಸ್ಟೀಲ್ ವರ್ಕ್ ಮಾಲೀಕ ರವಿ ಮುರಗೋಡ (45) ಮೃತ ದುರ್ದೈವಿ. ಖಾಸಗಿ ಬ್ಯಾಂಕ್ ಸೇರಿ ಇತರೆಡೆ ಸಾಲ ಮಾಡಿದ್ದಾರೆ ಎನ್ನಲಾಗಿದ್ದು, ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post Breaking News; ಸಾಲಬಾಧೆ- ಕಚೇರಿಯಲ್ಲೇ ಉದ್ಯಮಿ ನೇಣಿಗೆ ಶರಣು appeared first on Ain Live News.

LEAVE A REPLY

Please enter your comment!
Please enter your name here