Home Uncategorized Breaking News; ಹುಲಿ ಉಗುರು ಪೆಂಡೆಂಟ್ ಧರಿಸಿ ಶೋಕಿ ಮಾಡೋರಿಗೆ ಬಿಗ್ ಶಾಕ್ – ಇನ್ಮುಂದೆ...

Breaking News; ಹುಲಿ ಉಗುರು ಪೆಂಡೆಂಟ್ ಧರಿಸಿ ಶೋಕಿ ಮಾಡೋರಿಗೆ ಬಿಗ್ ಶಾಕ್ – ಇನ್ಮುಂದೆ ಟಫ್ ರೂಲ್ಸ್ ಜಾರಿ

22
0

ಬೆಂಗಳೂರು;- ಹುಲಿ ಉಗುರು ಪೆಂಡೆಂಟ್ ಧರಿಸಿ ಶೋಕಿ ಮಾಡೋರಿಗೆ ಅರಣ್ಯ ಇಲಾಖೆ ಬಿಗ್ ಶಾಕ್ ನೀಡಿದೆ. ಇನ್ಮೇಲೆ ಅರಣ್ಯ ಇಲಾಖೆ ಮತ್ತಷ್ಟು ಟಫ್ ರೂಲ್ಸ್ ತರುತ್ತಿದೆ. ಒಂದು ವೇಳೆ ರೂಲ್ಸ್ ಬ್ರೇಕ್ ಮಾಡಿದ್ರೆ ಲಾಕ್ ಆಗೋದು ಪಕ್ಕಾ ಆಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಕಾನೂನಿನ ನಿಯಮಗಳು ಮತ್ತಷ್ಟು ಕಠಿಣ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಒಂದು ವಾರದೊಳಗೆ ಸಮಗ್ರ ವರದಿ ಸಿದ್ದಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ವರದಿ ರೆಡಿಯಾಗಲಿದೆ.

ಇನ್ಮೇಲೆ ರಫ್ & ಟಫ್ ರೂಲ್ಸ್ ಜಾರಿಗೆ ಅರಣ್ಯ ಇಲಾಖೆ ಸಿದ್ದತೆ ನಡೆಸಿದ್ದು, ಇಷ್ಟು ದಿನ ವನ್ಯಜೀವಿ ವಸ್ತುಗಳ ನಿಷೇಧ ಕಾಯ್ದೆಯ ನಿಯಮಗಳು ಸಮರ್ಪಕವಾಗಿ ಅನುಷ್ಠಾನವಾಗಿರಲಿಲ್ಲ. ಆದ್ರೆ ಎಲ್ಲೆಡೆ ಹುಲಿ ಚರ್ಮ, ಉಗುರು,ಕೊರಳಿನಲ್ಲಿ ಹಾಕಿಕೊಂಡು ಶೋಕಿ ಮಾಡುತ್ತಿದ್ದಾರೆ. ಹೀಗಾಗಿ ನಿಯಮಗಳನ್ನು ಕಠಿಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಇನ್ಮೇಲೆ ಹುಲಿ ಉಗುರು ಬಳಸುತ್ತಿರುವ ಮೇಲೆ ಹದ್ದಿನ ಕಣ್ಣು ಇಡಲು ಇಲಾಖೆ ನಿರ್ಧಾರ ಮಾಡಿದ್ದು, ಹುಲಿ ಉಗುರು ಬಳುಸುತ್ತಿರುವ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

The post Breaking News; ಹುಲಿ ಉಗುರು ಪೆಂಡೆಂಟ್ ಧರಿಸಿ ಶೋಕಿ ಮಾಡೋರಿಗೆ ಬಿಗ್ ಶಾಕ್ – ಇನ್ಮುಂದೆ ಟಫ್ ರೂಲ್ಸ್ ಜಾರಿ appeared first on Ain Live News.

LEAVE A REPLY

Please enter your comment!
Please enter your name here