Home Uncategorized Bridal Makeup Tips: ನಿಮ್ಮ ವಿವಾಹದ ದಿನ ರಾಣಿಯಂತೆ ಕಾಣಲು ಈ ಮೇಕ್ಅಪ್ ಟಿಪ್ಸ್ ಟ್ರೈ...

Bridal Makeup Tips: ನಿಮ್ಮ ವಿವಾಹದ ದಿನ ರಾಣಿಯಂತೆ ಕಾಣಲು ಈ ಮೇಕ್ಅಪ್ ಟಿಪ್ಸ್ ಟ್ರೈ ಮಾಡಿ

20
0

ಮದುವೆ ಪ್ರತಿಯೊಂದು ಹೆಣ್ಣಿನ ಕನಸಿನ ದಿನವಾಗಿರುತ್ತದೆ. ಆ ದಿನದ ಆಕೆ ಹೇಗೆ ಕಾಣಿಸುತ್ತಾಳೆ ಎಂಬುದು ಮುಖ್ಯವಾಗಿರುತ್ತದೆ. ಆದ್ದರಿಂದ ನಿಮ್ಮ ವಿಶೇಷ ದಿನದಂದು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಲು ಈ ಕೆಳಗಿನ ಸಿಂಪಲ್ ಟಿಪ್ಸ್ ಪಾಲಿಸಿ. ನಿಮ್ಮ ಮದುವೆಯಂದು ನೀವು ಕೇಂದ್ರ ಬಿಂದುವಾಗಿರುವುದರಿಂದ ಎಲ್ಲರ ಗಮನ ನಿಮ್ಮ ಕಡೆ ಇರುತ್ತದೆ. ಆದ್ದರಿಂದ ನಿಮ್ಮ ಮೇಕಪ್ ಲುಕ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.

1. ತ್ವಚೆಯ ರಕ್ಷಣೆ:

ಮದುವೆಯ ದಿನದಂದು ಗ್ರ್ಯಾಂಡ್ ಆಗಿ ಮೇಕ್ಅಪ್ ಮಾಡುವುದರಿಂದ ಸಾಕಷ್ಟು ಕೆಮಿಕಲ್ ನಿಮ್ಮ ಮುಖದ ಮೇಲೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನಿಮ್ಮ ಚರ್ಮ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಮೇಕ್ಅಪ್ ಹಚ್ಚುವ ಮುನ್ನ ಚರ್ಮದ ಮೇಲೆ ಪೋಷಣೆಯ ಮಾಯಿಶ್ಚರೈಸರ್ ನಂತರ ಸೆರಂ ಹಚ್ಚುವುದು ಅಗತ್ಯವಾಗಿದೆ.

2. ಸರಿಯಾದ ಕನ್ಸೀಲರ್ ಆಯ್ಕೆ ಮಾಡಿ:

ಕನ್ಸೀಲರ್ ಗಳನ್ನು ನಿಮ್ಮ ಕಣ್ಣಿನ ಡಾರ್ಕ್​ ಸರ್ಕಲ್ ಹಾಗೂ ತುಟಿಯ ಮೇಲ್ಭಾಗ ಕಪ್ಪಾಗಿದ್ದರೆ ಅದನ್ನು ಮರೆ ಮಾಚಲು ಬಳಸಲಾಗುತ್ತದೆ. ಆದ್ದರಿಂದ ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಕನ್ಸೀಲರ್ ಆಯ್ಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇಲ್ಲದಿದ್ದರೆ ನಿಮ್ಮ ಮೇಕ್ಅಪ್ ಕೆಡುವ ಸಾಧ್ಯತೆ ಹೆಚ್ಚಿದೆ.

3. ಫೌಂಡೇಶನ್ ಕ್ರೀಮ್ ಆಯ್ಕೆಯಲ್ಲಿಯೂ ಜಾಗೃತಿ ವಹಿಸಿ:

ಪ್ರತಿಯೊಬ್ಬರ ಚರ್ಮದ ಬಣ್ಣ ವಿಭಿನ್ನವಾಗಿರುತ್ತದೆ. ಆದ್ದರಿಂದ ನಿಮ್ಮ ತ್ವಚೆಗೆ ಸರಿಹೊಂದುವ ಅಂದರೆ ನಿಮ್ಮ ತ್ವಚೆಯ ಬಣ್ಣಕ್ಕೆ ಸರಿಯಾಗಿ ಹೋಲಿಕೆಯಾಗುವ ಫೌಂಡೇಶನ್ ಕ್ರೀಮ್ ಆಯ್ಕೆ ಮಾಡುವುದು ಅತ್ಯಂತ ಅಗತ್ಯವಾಗಿದೆ.

ಇದನ್ನೂ ಓದಿ: ನಿಮ್ಮ ಮದುವೆಯಂದು ಕೇಶರಾಶಿಯ ಸೌಂದರ್ಯಕ್ಕಾಗಿ ಈ ಸಲಹೆ ಪಾಲಿಸಿ

4. ನಿಮ್ಮ ದೇಹದ ಮೇಲೂ ಮೇಕ್ಅಪ್ ಬಳಸಿ:

ಹೆಚ್ಚಾಗಿ ಮುಖದ ಸೌಂದರ್ಯಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಆದರೆ ಕೈ ಮತ್ತು ಕುತ್ತಿಗೆಯ ಭಾಗವನ್ನು ನಿರ್ಲಕ್ಷ್ಯಿಸಲಾಗುತ್ತದೆ. ನೀವೂ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮುಖ ಮತ್ತು ಕೈ, ಕುತ್ತಿಗೆಯ ಬಣ್ಣದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಆದ್ದರಿಂದ ನಿಮ್ಮ ಮುಖದಂತೆಯೇ ಕೈ, ಕುತ್ತಿಗೆ ಸುಂದರವಾಗಿ ಕಾಣಲು ನಿಮ್ಮ ದೇಹದ ಮೇಲೂ ಮೇಕ್ಅಪ್ ಬಳಸುವುದು ಅತ್ಯಂತ ಅಗತ್ಯವಾಗಿದೆ.

ಇದನ್ನೂ ಓದಿ: ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಈ ಟ್ರೇಂಡಿ ಸೀರೆಗಳು

5.ಆರಾಮದಾಯಕವಾದ ಲಿಪ್ ಸ್ಟಿಕ್ ಆಯ್ಕೆ ಮಾಡಿ:

ವಧುವಿನ ಮೇಕಪ್ ವಿಚಾರದಲ್ಲಿ ಲಿಪ್ ಶೇಡ್ ಬಹಳ ಮುಖ್ಯ. ಆದ್ದರಿಂದ ದೀರ್ಘಾವಧಿಯ ಮತ್ತು ಮ್ಯಾಟ್ ಲಿಪ್ ಸ್ಟಿಕ್ ಆಯ್ಕೆ ಮಾಡಿ. ಗಾಢ ಕೆಂಪು ತುಟಿಯ ಬಣ್ಣ ವಧುವಿನ ಮೇಕ್ಅಪ್ ಗೆ ಉತ್ತಮ ಆಯ್ಕೆಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

LEAVE A REPLY

Please enter your comment!
Please enter your name here