ಬೆಂಗಳೂರು ಪೂರ್ವ ಭಾಗದಲ್ಲಿ ‘ಬ್ರಿಗೇಡ್ ಬೆಲ್ವೆಡೆರ್’ ಆರಂಭ: ₹1,100 ಕೋಟಿ ಆದಾಯ ಗುರಿಯೊಂದಿಗೆ ಪ್ರೀಮಿಯಂ ವಸತಿ ಯೋಜನೆ
ಬೆಂಗಳೂರು: ಬ್ರಿಗೇಡ್ ಗ್ರೂಪ್ ತನ್ನ ಹೊಸ ವಸತಿ ಯೋಜನೆ ‘ಬ್ರಿಗೇಡ್ ಲ್ಯೂಮಿನಾ’ಯನ್ನು ಉತ್ತರ-ಪಶ್ಚಿಮ ಬೆಂಗಳೂರಿನಲ್ಲಿ ಆರಂಭಿಸಿದೆ. ಈ ಯೋಜನೆ ಸುಮಾರು ₹700 ಕೋಟಿ ಆದಾಯ ಸಾಮರ್ಥ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.
ತುಮಕೂರು ಮುಖ್ಯ ರಸ್ತೆಯಲ್ಲಿರುವ 4.11 ಎಕರೆ ಪ್ರದೇಶದಲ್ಲಿ ಈ ಯೋಜನೆ ರೂಪುಗೊಂಡಿದ್ದು, ಪರಿಸರ ಸ್ನೇಹಿ ನೆಟ್-ಜೀರೋ ಕಾರ್ಬನ್ ಅಭಿವೃದ್ಧಿಯ ಮಾದರಿಯಾಗಿ ಪರಿಚಯಿಸಲಾಗಿದೆ. ಈ ಯೋಜನೆಯಲ್ಲಿ 2 ಹಾಗೂ 3 ಬಿಎಚ್ಕೆ ಮನೆಗಳು ಲಭ್ಯವಿದ್ದು, ಸುಮಾರು 1,100 ರಿಂದ 1,800 ಚದರ ಅಡಿ ವಿಸ್ತೀರ್ಣ ಹೊಂದಿವೆ. ಮನೆಗಳನ್ನು ವಿಶಾಲ ಡೆಕ್ಗಳು, ಸಾಕಷ್ಟು ನೈಸರ್ಗಿಕ ಬೆಳಕು ಮತ್ತು ಸುಂದರ ದೃಶ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಬ್ರಿಗೇಡ್ ಲ್ಯೂಮಿನಾ ಯೋಜನೆ ನಮಮ ಮೆಟ್ರೋ ಗ್ರೀನ್ ಲೈನ್ನ ಮಂಜುನಾಥನಗರ ಮೆಟ್ರೋ ನಿಲ್ದಾಣದಿಂದ ಕೇವಲ ಐದು ನಿಮಿಷದ ನಡೆ ದೂರದಲ್ಲಿದ್ದು, ಪ್ರಮುಖ ಐಟಿ ಹಬ್ಗಳು, ಶಾಲೆಗಳು ಮತ್ತು ಆಸ್ಪತ್ರೆಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಜೊತೆಗೆ ಪ್ರಮುಖ ಶಾಪಿಂಗ್ ಮಾಲ್ಗಳು ಮತ್ತು ವಾಣಿಜ್ಯ ಕೇಂದ್ರಗಳಿಗೆ ಸಮೀಪದಲ್ಲಿದೆ.
ಬ್ರಿಗೇಡ್ ಎಂಟರ್ಪ್ರೈಸಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರಾ ಶಂಕರ್ ಮಾತನಾಡಿ, ಉತ್ತರ-ಪಶ್ಚಿಮ ಬೆಂಗಳೂರು ಪ್ರದೇಶದಲ್ಲಿ ಪ್ರೀಮಿಯಂ ವಸತಿ ಯೋಜನೆಗಳ ಕೊರತೆ ಇದ್ದು, ಈ ಯೋಜನೆ ಅದನ್ನು ಪೂರೈಸಲಿದೆ ಎಂದರು. ಮೆಟ್ರೋ ಸಂಪರ್ಕ ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು.
ಈ ಯೋಜನೆಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆ, ಸುಧಾರಿತ ನೀರು ನಿರ್ವಹಣಾ ವ್ಯವಸ್ಥೆ ಮತ್ತು ಜೀರೋ-ವೇಸ್ಟ್ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ದೀರ್ಘಾವಧಿಯ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ.
ಅಮೆನಿಟೀಸ್ನಲ್ಲಿ 15,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಕ್ಲಬ್ಹೌಸ್, ಫುಟ್ಸಲ್ ಕೋರ್ಟ್, ಬಾಸ್ಕೆಟ್ಬಾಲ್ ಅಭ್ಯಾಸ ಕೋರ್ಟ್, ಪಿಕಲ್ಬಾಲ್ ಕೋರ್ಟ್, ಈಜುಕೊಳ ಹಾಗೂ ಜಕೂಜಿ, ಮಕ್ಕಳ ಆಟದ ಪ್ರದೇಶ, ಪೆಟ್ ಪಾರ್ಕ್ ಮತ್ತು ಔಟ್ಡೋರ್ ಜಿಮ್ ಒಳಗೊಂಡಿವೆ.
ಈ ಯೋಜನೆಯ ಮೂಲಕ ಬ್ರಿಗೇಡ್ ಗ್ರೂಪ್ ಬೆಂಗಳೂರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಸಸ್ಥಿರ ಅಭಿವೃದ್ಧಿಯತ್ತ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.
