Home ಬೆಂಗಳೂರು ನಗರ Bruhat Bengaluru Mahanagara Palike (Amendment) Bill passed in the Legislative Assembly |...

Bruhat Bengaluru Mahanagara Palike (Amendment) Bill passed in the Legislative Assembly | ವಿಧಾನಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ತಿದ್ದುಪಡಿ)ವಿಧೇಯಕ ಅಂಗೀಕಾರ

74
0
BBMP building

ಬೆಂಗಳೂರು, ಮಾರ್ಚ್‌ 19(ಕರ್ನಾಟಕ ವಾರ್ತೆ): 2025ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಪ್ರಸ್ತಾವವನ್ನು ಅಂಗೀಕರಿಸಬೇಕೆಂದು ಉಪಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವರಾದ ಕೆ.ಹೆಚ್. ಪಾಟೀಲ್ ಅವರು ಇಂದು ವಿಧಾನಸಭೆಯ ಅಧಿವೇಶನದಲ್ಲಿ ಮಂಡಿಸಿದರು.

ಈ ವಿಧೇಯಕವು ಯಾವುದೇ ಬೀದಿಯನ್ನು ಸಾರ್ವಜನಿಕ ಬೀದಿ ಎಂದು ಘೋಷಿಸಲು, ಬಿಬಿಎಂಪಿ ಪ್ರದೇಶದಲ್ಲಿರುವ ಖಾಸಗಿ ಬೀದಿಗಳ ಅಭಿವೃದ್ಧಿಯನ್ನು ಖಚಿತಪಡಿಸಿವುದು. ಭಾರತ ಸಂವಿಧಾನದ 243ಎಕ್ಸ್ ಅನುಚ್ಛೇದದ ಅನುಸಾರ ಶುಲ್ಕ, ಲೆವಿ ಅಥವಾ ದಂಡದ ದರಗಳನ್ನು ನಿಗದಿಪಡಿಸುವುದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪಾಲಿಕೆಯು ತೀರ್ಮಾನ ಕೈಗೊಳ್ಳುವುದನ್ನು ಸಾಧ್ಯವಾಗಿಸುವುದು. ಗರಿಷ್ಟಮಿತಿಯನ್ನು ಕಡಿಮೆಗೊಳಿಸುವುದು ಮತ್ತು ಕಟ್ಟಡ ಲೈಸನ್ಸ್, ಪ್ರಾರಂಭ ಪ್ರಮಾಣ ಪತ್ರ ಮತ್ತು ಸ್ವಾಧೀನ ಪ್ರಮಾಣ ಪತ್ರಗಳಿಗಾಗಿ ಪರಿಶೀಲನಾ ಶುಲ್ಕದೊಂದಿಗೆ ಅನುರೂಪವಾದ ಶುಲ್ಕವನ್ನು ತರುವುದು. ನಿವಾಸಿ ಕಟ್ಟಡ ಅನುಮತಿಗಾಗಿ, ಸಂದಾಯ ಮಾಡಬೇಕಾದ ಶುಲ್ಕದರದ ಮೇಲಿನ ಗರಿಷ್ಟ ಮಿತಿಯನ್ನು ಕಡಿಮೆಗೊಳಿಸುವುದು, ಅನಧಿಕೃತ ನಿರ್ಮಾಣವನ್ನು ತಡೆಗಟ್ಟುವುದು ಮತ್ತು ಅನಧಿಕೃತ ಕಟ್ಟಡ ಅಥವಾ ಅದರ ಭಾಗವನ್ನು ಬಳಸುವುದರಿಂದ ಮಾಲೀಕ ಅಥವಾ ಇತರ ವ್ಯಕ್ತಿಯನ್ನು ನಿರ್ಬಂಧಿಸುವುದು, ಇದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕವಾದ ಕೆಲವು ಅನುಷಂಗಿಕ ತಿದ್ದುಪಡಿಗಳನ್ನು ಸಹ ಮಾಡುವುದಕ್ಕೆ ಈ ವಿಧೇಯಕ ಎಂದು ಸದನಕ್ಕೆ ಸಚಿವರು ಮಾಹಿತಿ ನೀಡಿದರು.

ನಂತರ ವಿಧೇಯಕ ಅಂಗೀಕಾರವಾಯಿತು.

LEAVE A REPLY

Please enter your comment!
Please enter your name here