ಬೆಂಗಳೂರು:
ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯಿರುವ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬ ಮಕ್ಕಳಲ್ಲೂ ಯೋಗದ ಅರಿವು ಮೂಡಿಸುವ ಕೆಲಸ ಮಾಡಬೇಕು. ಭಾರತವನ್ನು ಭವ್ಯ ಭಾರತವನ್ನಾಗಿ ಮಾಡುವ ಕನಸು ನನಸಾಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪ್ರಶಾಂತಿ ಕುಟೀರಂ ಎಸ್ ವ್ಯಾಸ ಸ್ವಾಯತ್ತ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವ 24th International Conference of Frontiers and Yoga Research and Its Application (INCOFYRA) ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
Also Read: Karnataka CM Bommai launches health and wellness app AAYU
ಮನಸ್ಸಿನ ಏಕಾಗ್ರತೆಗೆ ಯೋಗ ಮತ್ತು ಧ್ಯಾನ ಪೂರಕವಾಗಿವೆ. ಯೋಗದಿಂದ ಮನಸ್ಸಿನ ಸಮಚಿತ್ತತೆಯನ್ನು ಪಡೆಯುವವರು ಸೃಷ್ಟಿಯ ಭಾಗವಾಗಿ ಮೋಕ್ಷವನ್ನು ಪಡೆಯುತ್ತಾರೆ. ಈಗ ಮನುಷ್ಯ ಸಂಪತ್ತು ಹಾಗೂ ಹಣ ಗಳಿಕೆಯನ್ನು ಗುರಿಯಾಗಿಸಿಕೊಂಡಿದ್ದಾನೆ. ಈ ರೀತಿಯ ಚಿಂತನೆ ಬದಲಾಗಿ ಮಾನವನ ಒಳಿತನ್ನುಗುರಿಯಾಗಿಸಿಕೊಂಡರೆ, ವಿಶ್ವವೇ ಒಂದು ಸುಂದರ ತಾಣವಾಗುತ್ತದೆ. ಮನುಷ್ಯನಿಗೆ ಯೋಚನಾಶಕ್ತಿ ಅಭೂತಪೂರ್ವವಾಗಿದೆ. ಮನುಕುಲಕ್ಕೆ ಒಗ್ಗಿಕೊಳ್ಳುವಿಕೆಯ ಗುಣವಿದೆ. ಮನುಷ್ಯನೊಳಗೆ ಎಲ್ಲ ಸಮಸ್ಯೆಗಳಿಗೆ ಉತ್ತರವಿದೆ. ನಮ್ಮ ದೇಹದೊಳಗಿನ ಎಲ್ಲ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಮನಸ್ಸು ಹಾಗೂ ದೇಹವನ್ನು ಸದೃಢಗೊಳಿಸಲು ಯೋಗ ಸಹಕರಿಸುತ್ತದೆ. ತನ್ನ ಮೇಲೆ ನಿಯಂತ್ರಣಹೊಂದಿರುವವನೇ ನಿಜವಾದ ಯೋಗಿ. ಯೋಗಿಯಾದವರು ಮಾತ್ರ ಯುಗಪುರುಷರಾಗಲು ಸಾಧ್ಯ.
ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಆತ್ಮ ಶಾಶ್ವತವಾಗಿರುವಂಥದ್ದು. ತೃಪ್ತಿಕರವಾದ ಜೀವನವನ್ನು ನಡೆಸಲು ಆರೋಗ್ಯಕರ ದೇಹ ಮತ್ತು ಮನಸ್ಸು ಆಗತ್ಯ. ಮನುಷ್ಯ ತನ್ನ ಬಾಲ್ಯದಲ್ಲಿರುವ ಮುಗ್ಧತೆಯನ್ನು ಕೊನೆಯವರೆಗೆ ಇರಿಸಿಕೊಳ್ಳಬೇಕು. ಯೋಗಗುರುಗಳ ಕಣ್ಣುಗಳಲ್ಲಿ ಕಾಂತಿಯಿರುತ್ತದೆ. ಯೋಗದಿಂದ ಜೀವನದಲ್ಲಿ ಪರಿಪೂರ್ಣತೆ ಸಾಧಿಸುವ ಮುಗ್ಧತೆಯನ್ನು ಕಾಯ್ದುಕೊಳ್ಳಬಹುದು. ದೇವರು ನೀಡಿದ್ದನ್ನು ಯೋಗದಿಂದ ನಿರಂತರವಾಗಿ ಕಾಪಾಡಿಕೊಳ್ಳಬಹುದು. ದೇಹದ ಮೆಟಬಾಲಿಸಂಗಾಗಿ ಯೋಗ ಅವಶ್ಯಕ. ಯಾರ ಬದುಕಿನಲ್ಲಿ ನಗುವಿರುತ್ತದೋ, ಅಂತಹವರು ಆನಂದದಿಂದ ಅರ್ಥಪೂರ್ಣವಾಗಿ ಬದುಕುತ್ತಾರೆ. ಜೀವನದ ಸಣ್ಣ ಸಣ್ಣ ಖುಷಿಗಳ ಆನಂದವನ್ನು ಪಡೆಯಬೇಕು. ಮನಸ್ಸನ್ನು ನಿಗ್ರಹಿಸಿ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ಎಂ ಕೃಷ್ಣಪ್ಪ, ಎಸ್ ವ್ಯಾಸ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಚ್ ಆರ್ ನಾಗೇಂದ್ರ, ಕುಲ ಸಚಿವ ಪ್ರೊ.ಎಂಕೆ ಶ್ರೀಧರ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ ಮತ್ತು ಇತರರು ಉಪಸ್ಥಿತರಿದ್ದರು.
— CM of Karnataka (@CMofKarnataka) May 29, 2022
2/2
ವ್ಯಾಸ ವಿಶ್ವವಿದ್ಯಾಲಯ ಭವಿಷ್ಯದ ನಾಸ ವನ್ನು ನಿರ್ಮಿಸುತ್ತಿದೆ. ಆರೋಗ್ಯಕರ ಮನಸ್ಸು ಮತ್ತು ದೇಹ ಮಾತ್ರ ವೈಜ್ಞಾನಿಕ ಚಿಂತನೆ ಮಾಡಲು ಸಾಧ್ಯ. ಆಧ್ಯಾತ್ಮ ವೈಜ್ಞಾನಿಕ ಚಿಂತನೆಗೆ ದಾರಿಮಾಡಿಕೊಡುತ್ತದೆ. ಯೋಗ ಒಂದು ವಿಜ್ಞಾನ. ಈ ವಿಜ್ಞಾನವನ್ನು ಅಧ್ಯಯನ ಮಾಡಿ, ಅರ್ಥೈಸಿಕೊಂಡು, ದಾಖಲಿಸಿ, ಬೋಧಿಸುವ ಕೆಲಸವನ್ನು ವಿಶ್ವವಿದ್ಯಾಲಯದ ಮುಖ್ಯಸ್ಥರು ಮಾಡುತ್ತಿರುವುದು ಶ್ಲಾಘನೀಯ. ಯೋಗದ ಮೂಲಕ ನಮ್ಮನ್ನು ನಾವೇ ಮರೆತು ಸಾತ್ವಿಕತೆ ಅರಿವು ಮೂಡಿಸುವ ಕೇಂದ್ರವಾಗಿದೆ. ಈ ಕೇಂದ್ರದ ಎಲ್ಲ ಯೋಜನೆಗಳಿಗೆ ಸರ್ಕಾರದ ಸಹಕಾರ ಇರಲಿದೆ ಎಂದು ತಿಳಿಸಿದರು.
ಭಾರತ ದೇಶದ ಮೌಲ್ಯ, ಸಂಸ್ಕೃತಿ, ಪರಂಪರೆಗಳು ಅಮೂಲ್ಯವಾದವು. ಭಾರತದ ಅಂತರ್ಗತ ಶಕ್ತಿಯನ್ನು ಇಡೀ ಜಗತ್ತಿಗೆ ತಿಳಿಹೇಳಲು ಚಿಂತನೆಯಿಂದ ಪ್ರಧಾನಿಮೋದಿಯವರು ಯೋಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ್ದಾರೆ. ಆಯುಷ್ ಇಲಾಖೆ ಸ್ಥಾಪಿಸಿ ಯೋಗದ ಅರಿವು ಮೂಡಿಸುತ್ತಿರುವ ಪ್ರಧಾನಿಯವರ ಕಾರ್ಯ ಶ್ಲಾಘನೀಯವಾದುದು. ಇಂತಹ ಮುತ್ಸದ್ದಿ ನಾಯಕನ ನೇತೃತ್ವದಲ್ಲಿ ಯೋಗವನ್ನು ಮುಂದುವರೆಸೋಣ. ಬರುವ ವರ್ಷದಿಂದ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ನೀಡಲು ವಿಶೇಷ ಕಾರ್ಯಕ್ರಮವನ್ನು ಸರ್ಕಾರ ರೂಪಿಸಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಂ ಕೃಷ್ಣಪ್ಪ, ಎಸ್ ವ್ಯಾಸ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಚ್ ಆರ್ ನಾಗೇಂದ್ರ, ಕುಲ ಸಚಿವ ಪ್ರೊ.ಎಂಕೆ ಶ್ರೀಧರ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ ಮತ್ತು ಇತರರು ಉಪಸ್ಥಿತರಿದ್ದರು.