Home ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ಹತ್ತಿರ ಕಾರು ಮತ್ತು ಬಸ್‌ ಡಿಕ್ಕಿ ; ಕಾರು ಹೊತ್ತುರಿದ ಪರಿಣಾಮ ಇಬ್ಬರು ಸಜೀವ...

ಚಿಕ್ಕಬಳ್ಳಾಪುರ ಹತ್ತಿರ ಕಾರು ಮತ್ತು ಬಸ್‌ ಡಿಕ್ಕಿ ; ಕಾರು ಹೊತ್ತುರಿದ ಪರಿಣಾಮ ಇಬ್ಬರು ಸಜೀವ ದಹನ

7
0

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗೇಟ್ ಬಳಿ ಭೀಕರ ಅವಘಡ ಸಂಭವಿಸಿದೆ. ಕಾರಿಗೆ ಖಾಸಗಿ ಬಸ್‌ ಡಿಕ್ಕಿಯಾಗಿದ್ದು, ಕಾರು ಹೊತ್ತುರಿದ ಪರಿಣಾಮ ಇಬ್ಬರು ಸಜೀವ ದಹನವಾಗಿದ್ದಾರೆ.

ಕಾರಿನಲ್ಲಿ 5 ಮಂದಿ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಮೂವರು ಗಾಯಗೊಂಡಿದ್ದಾರೆ.ಕಾರು ಆಂಧ್ರ ಪ್ರದೇಶದ ಕಡಪ ಮೂಲದ ಚಾಲಕ ಧನಂಜಯ್ ರೆಡ್ಡಿ (34) ಹಾಗೂ ತಾಯಿ ಕಲಾವತಿ (54) ಮೃತರು. ಮೂರು ವರ್ಷದ ಮಾನ್ವಿತ ಹಾಗೂ ಶೋಭಾ ಸೇರಿದಂತೆ ಉಮಾದೇವಿ ಎಂಬವರು ಗಾಯಗೊಂಡಿದ್ದು, ಅವರನ್ನು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಸಹ ರಸ್ತೆ ಬದಿ ಹಳ್ಳದಲ್ಲಿ ಪಲ್ಟಿಯಾಗಿ ವಾಲಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ. ಸ್ಥಳಕ್ಕೆ ಆಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರಿನ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here