Home Uncategorized Cat Bite: ಕೈ ಬೆರಳಿಗೆ ಕಚ್ಚಿದ ಸಾಕಿದ ಬೆಕ್ಕು, 15 ಆಪರೇಷನ್ ಮಾಡಿದ್ರೂ ಉಳಿಯಲಿಲ್ಲ ಜೀವ

Cat Bite: ಕೈ ಬೆರಳಿಗೆ ಕಚ್ಚಿದ ಸಾಕಿದ ಬೆಕ್ಕು, 15 ಆಪರೇಷನ್ ಮಾಡಿದ್ರೂ ಉಳಿಯಲಿಲ್ಲ ಜೀವ

53
0

ನಾಯಿ ಮಾತ್ರವಲ್ಲ ಬೆಕ್ಕು ಕಚ್ಚಿದರೂ(cat bite) ಸಹ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು. ಬೆಕ್ಕು ತಾನೆ? ಕಚ್ಚಿದರೆ ಏನಾಗುವುದಿಲ್ಲ ಎಂಬ ನಿರ್ಲಕ್ಷ್ಯ ಮಾಡಬಾರದು. ಆರಂಭದಲ್ಲಿ ಚಿಕಿತ್ಸೆ ಪಡೆಯಲಿಲ್ಲ ಅಂದ್ರೆ ಹೇಗೆಲ್ಲ ಸಾವು ಬರಹುದು ಎಂದು ಊಹಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಸುದ್ದಿ ಉದಾಹರಣೆ. ಬೆಕ್ಕು ಕಚ್ಚಿದ ನಾಲ್ಕು ವರ್ಷದ ಬಳಿಕ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಅಚ್ಚರಿ ಅನ್ನಿಸಿದರೂ ಸತ್ಯ.

ಇದನ್ನೂ ಓದಿ: ಖ್ಯಾತ ಯೂಟ್ಯೂಬರ್​ನ ಇಬ್ಬರು ಪತ್ನಿಯರು ಒಂದೇ ಬಾರಿಗೆ ಪ್ರೆಗ್ನೆಂಟ್, ಅದು ಹೇಗೆ ಸಾಧ್ಯವೆಂದು ಅಚ್ಚರಿಗೊಂಡ ಜನ

ಹೌದು.. ಬೆಕ್ಕು (Cat) ಕಚ್ಚಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಬೆಕ್ಕಿನಿಂದ ಕಚ್ಚಿಸಿಕೊಂಡಿದ್ದ ವ್ಯಕ್ತಿ, ಎಲ್ಲಾ ಚಿಕಿತ್ಸೆ ಪಡೆದುಕೊಂಡರೂ ಸಹ ಕೊನೆಗೂ ಬದುಕುಳಿಯಲಿಲ್ಲ. ಈ ಘಟನೆ ಡೆನ್ಮಾರ್ಕ್‌ನಲ್ಲಿ ನಡೆದಿದ್ದು, 33 ವರ್ಷದ ಹೆನ್ರಿಕ್ ಬೆಕ್ಕು ಕಡಿತದಿಂದ ಮೃತಪಟ್ಟ ವ್ಯಕ್ತಿ.

ಅಲ್ಲಿನ ಮಾಧ್ಯಮ ವರದಿಗಳ ಪ್ರಕಾರ, ಸುಮಾರು ನಾಲ್ಕು ವರ್ಷಗಳ ಹಿಂದೆ ಅಂದ್ರೆ 2018ರಲ್ಲಿ ಹೆನ್ರಿಚ್ ಅವರಿಗೆ ಮನೆಯಲ್ಲಿ  ಸಾಕಿದ್ದ ಬೆಕ್ಕು ಬೆರಳಿಗೆ ಕಚ್ಚಿತ್ತು. ಆರಂಭದಲ್ಲಿ ಬೆಕ್ಕು ಕಚ್ಚಿದಕ್ಕೆ  ಯಾವುದೇ ಚಿಕಿತ್ಸೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಬಳಿಕ ಹಂತ-ಹಂತವಾಗಿ ಬೆರಳು ನೋವು ಕಾಣಿಸಿಕೊಂಡಿದೆ. ತದನಂತರ ಹೆನ್ರಿಕ್, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಆದರೂ ಸಹ ನೋವು ಕಡೆಮೆಯಾಗದೇ ಮತ್ತಷ್ಟು ಬೇರೆ ಬೇರೆ ತೊಂದರೆಗಳು ಕಾಡಲರಂಭಿಸಿದ್ದವು. ನಂತರ ಅವರು ಆಸ್ಪತ್ರೆಗೆ ದಾಖಲಾದರು. ನಿಧಾನವಾಗಿ ಆ ಬೆರಳಿಗೆ ಇನ್ನಷ್ಟು ಸಮಸ್ಯೆಗಳು ಬರತೊಡಗಿದವು. ಅಂತಿಮವಾಗಿ ಊದಿಕೊಂಡಿದ್ದ ಬೆರಳನ್ನು ಕತ್ತರಿಸಬೇಕಾಯಿತು. ಆದರೆ ಇಷ್ಟೆಲ್ಲಾ ಮಾಡಿದರೂ ವಿಷ ಕಡಿಮೆಯಾಗಲಿಲ್ಲ. ಬದಲಿಗೆ ವಿಷ ಹೆನ್ರಿಚ್​ನ ದೇಹದ ತುಂಬೆಲ್ಲ ಪಸರಿಸಿದೆ.

ಊದಿಕೊಂಡಿದ್ದ ಬೆರಳು ಕತ್ತರಿಸಿದ ಬಳಿಕ ಅವರ ಇಡೀ ಕೈ ಊದಿಕೊಂಡಿತು.ಇದರಿಂದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದ ಅವರಿಗೆ ಸುಮಾರು 15 ಆಪರೇಷನ್‌ಗಳನ್ನು ಸಹ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೇ ಹೆನ್ರಿಚ್ ಬೆಕ್ಕು ಕಚ್ಚಿ ನಾಲ್ಕು ವರ್ಷದ ಬಳಿಕ ಕೊನೆಯುಸೆರೆಳೆದಿದ್ದಾರೆ.

ಬ್ಯಾಕ್ಟೀರಿಯಾದಿಂದ ಸೋಂಕು ಆಗಿತ್ತು. ಅದನ್ನು ಕ್ರಮೇಣ ನಿಯಂತ್ರಿಸಲಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮೃತ ಹೆನ್ರಿಕ್​ನ  ತಾಯಿ ಅಲ್ಲಿನ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಚಿಕಿತ್ಸೆ ಕೊಡಿಸಿದರ ಹೊರತಾಗಿಯೂ ಹೆನ್ರಿಚ್​ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ರೋಗನಿರೋಧಕ ಶಕ್ತಿ, ನ್ಯುಮೋನಿಯಾ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಬೆಕ್ಕು ಸರಿಯಾಗಿ ರಕ್ತನಾಳಕ್ಕೆ ಕಚ್ಚಿದ್ದು, ರಂಧ್ರ ಬಿದ್ದಿದೆ. ಬಳಿಕ ಬ್ಯಾಕ್ಟೀರಿಯಾದಿಂದ ಸೋಂಕು ಆಗಿದೆ. ಆ ಬ್ಯಾಕ್ಟೀರಿಯಾ ಸೋಂಕು ರಕ್ತನಾಳದ ಮೂಲಕ ದೇಹ  ಪ್ರವೇಶಿಸಿದೆ. ಬಳಿಕ ಸೋಂಕು ದೇಹದ ತುಂಬ ಹರಡಿದೆ ಎಂದಿದ್ದಾರೆ.

 

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here