ಬೆಂಗಳೂರು: ಬೆಂಗಳೂರಿನ ನಿವಾಸಿಗಳಿಗೆ ಸ್ವಲ್ಪ ನೆಮ್ಮದಿ — ಜಲಮಂಡಳಿ (BWSSB) ಮೂರು ದಿನಗಳ ಕಾಲ ನಡೆದ ತುರ್ತು ನಿರ್ವಹಣಾ ಕಾಮಗಾರಿಯನ್ನು ಒಂದು ದಿನ ಮುಂಚಿತವಾಗಿ ಪೂರ್ಣಗೊಳಿಸಿ ಇಂದು ಬೆಳಿಗ್ಗೆಯಿಂದಲೇ ಕಾವೇರಿ ನೀರು ಸರಬರಾಜು ಮರು ಪ್ರಾರಂಭಿಸಿದೆ.
ಮೂಲತಃ ಸೆಪ್ಟೆಂಬರ್ 17ರವರೆಗೆ ಕಾಮಗಾರಿ ನಿಗದಿಯಾಗಿದ್ದರೂ, ಜಲಮಂಡಳಿಯ ಸಿಬ್ಬಂದಿಗಳು ಹಗಲು-ರಾತ್ರಿ ದುಡಿಯುವುದರ ಮೂಲಕ ಯೋಜಿತ ಹಂತಗಳನ್ನು ಮುಗಿಸಿ ನೀರು ಸರಬರಾಜು ಮರು ಪ್ರಾರಂಭಿಸುವಲ್ಲಿ ಯಶಸ್ವಿಯಾದರು.
“ಕಾವೇರಿ ನೀರು ಸರಬರಾಜಿನ ಎಲ್ಲಾ ಹಂತಗಳ ನಿರ್ವಹಣಾ ಕಾಮಗಾರಿಗಳನ್ನು ಯೋಜನೆಯಂತೆ ಕೈಗೆತ್ತಿಕೊಳ್ಳಲಾಯಿತು. ಕಾರ್ಯಭಾರ ದೊಡ್ಡದಿದ್ದರೂ ನಮ್ಮ ಸಿಬ್ಬಂದಿ ಶ್ರಮದಿಂದ ಒಂದು ದಿನ ಮುಂಚಿತವಾಗಿ ಮುಗಿಸಿ ಸಾರ್ವಜನಿಕರಿಗೆ ಹೆಚ್ಚುವರಿ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ,” ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಈ ನಿರ್ಧಾರದಿಂದ ನೀರಿಗಾಗಿ ಟ್ಯಾಂಕರ್‌ಗಳ ಮೆರೆಗೆ ಅವಲಂಬಿತರಾಗಿದ್ದ ಹಲವಾರು ಪ್ರದೇಶಗಳಿಗೆ ನೆಮ್ಮದಿ ದೊರೆತಿದೆ.