ಬೆಂಗಳೂರು:
ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಅಂತಾರಾಷ್ಟ್ರೀಯ ಕುಖ್ಯಾತ ಡ್ರಗ್ ಪೆಡ್ಲರ್ ಸಮೇತ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ, 5 ಲಕ್ಷ ಬೆಲೆಬಾಳುವ 100 ಗ್ರಾಂ ಎಂಡಿಎಂಎ ಮತ್ತು ತಲಾ ಒಂದು ಕಾರು, ದ್ವಿಚಕ್ರ ವಾಹನ ಮತ್ತು ನಗದು ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
CCB drive against drugs continues..3 peddlers arrested, including an African drug peddler.. Ecstasy drugs seized..
— Sandeep Patil IPS (@ips_patil) December 24, 2020
ನೈಜೀರಿಯಾ ದೇಶದ ಉಡೆಉಡೆಉಜಾ (33), ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿ ಪ್ರಸೂನ್ ಕೆ (27) ಮತ್ತು ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ಆನಂದ್ ಚಂದ್ರನ್ ಕೆ.ವಿ. (27) ಬಂಧಿತ ಆರೋಪಿಗಳು.
ಆರೋಪಿಗಳಿಂದ 5 ಲಕ್ಷ ರೂ.ಮೌಲ್ಯದ 100 ಗ್ರಾಂ ಎಂಡಿಎಂಎ ಮತ್ತು ಒಂದು ಕಾರು, ಒಂದು ದ್ವಿಚಕ್ರ ವಾಹನ, 3 ಮೊಬೈಲ್ ಫೋನ್, 5000 ರೂ.ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. UNI