ಬೆಂಗಳೂರು:
ಸರ್ಕಾರವು ರೆಮ್ಡಿಸಿವಿರ್ ಮತ್ತು ಆಕ್ಸಿಜನ್ ಪೂರೈಕೆ ಸಂಬಂಧಿತ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ವಾಣಿಜ್ಯ ಮಂತ್ರಿಗಳಾದ ಪಿಯೂಷ್ ಗೋಯಲ್ ರಿಂದ ರಾಜ್ಯ ಸರ್ಕಾರದ ಆಕ್ಸಿಜನ್ ಅಗತ್ಯತೆಗಳಿಗೆ ಸಮರ್ಪಕ ಸ್ಪಂದನೆ ದೊರಕಿದೆ’ ಎಂದು ತಿಳಿಸಿದ ಸಂಸದ ತೇಜಸ್ವೀ ಸೂರ್ಯ ರವರು ಗೋಯಲ್ ರ ಸಮಯೋಚಿತ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಜೆ.ಎಸ್.ಡಬ್ಲ್ಯೂ ಸಂಸ್ಥೆಯ ಚೇರ್ಮನ್& ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸಜ್ಜನ್ ಜಿಂದಾಲ್ ರೊಂದಿಗೆ ಬೆಂಗಳೂರು ನಗರಕ್ಕೆ ಅಗತ್ಯವಿರುವ ಆಕ್ಸಿಜನ್ ಪೂರೈಸಲು ಮನವಿ ಮಾಡಿರುವುದಾಗಿ ತಿಳಿಸಿರುವ ಸಂಸದರು, ಕೋವಿಡ್-19 ಸೋಂಕಿತರ ಸಂಖ್ಯೆ ಒಮ್ಮೆಗೇ ವೃದ್ಧಿಗೊಂಡಿರುವುದರಿಂದ ಆಕ್ಸಿಜನ್ ಕುರಿತು ಗೊಂದಲಗಳು ನಿರ್ಮಾಣವಾಗಿದ್ದು, ಜೆ.ಎಸ್.ಡಬ್ಲ್ಯೂ ಸಂಸ್ಥೆಯು ಹೆಚ್ಚುವರಿ 40 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಲು ಒಪ್ಪಿಗೆ ಸೂಚಿಸಿರುವ ಕುರಿತು ವಿವರಿಸಿದರು.
” ಸರ್ಕಾರವು ಬೆಂಗಳೂರು ಮತ್ತು ಕರ್ನಾಟಕದ ಇತರೆಡೆಯ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸೂಕ್ತ ಕ್ರಮ ಕೈಗೊಂಡಿದ್ದು, ಬೆಂಗಳೂರು ನಗರಕ್ಕೆ 7,500 ಆಕ್ಸಿಜನ್ ಸಿಲಿಂಡರ್ ಪೂರೈಸಲು ಒಪ್ಪಿಗೆ ನೀಡಿರುವ ಶ್ರೀ ಪಿಯೂಷ್ ಗೋಯಲ್ ಹಾಗೂ ನಿರಂತರ ಪೂರೈಕೆಗೆ ಸಹಕಾರ ನೀಡಿರುವ ಜಿಂದಾಲ್ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ವಿವರಿಸಿದರು.