Home ಸಿನಿಮಾ ಬಿಗ್ ಬಾಸ್ ಮನೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್‌ʼಗೆ...

ಬಿಗ್ ಬಾಸ್ ಮನೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್‌ʼಗೆ ಅಪ್ಲೈ

44
0

ಬೆಂಗಳೂರು: ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಮುಂದಾಗಿದ್ದಾರೆ. ವಿಚ್ಚೇಧನ ನೀಡುವಂತೆ ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಪ್ರೀತಿಸಿ, ಅಲ್ಲಿಂದ ವಾಪಸ್ಸು ಬಂದ ನಂತರ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಿದ್ದರು ಎನ್ನುವುದಕ್ಕೆ ಅವರೇ ಮಾಡಿಕೊಂಡಿದ್ದ ಹಲವಾರು ರೀಲ್ಸ್ ಸಾಕ್ಷಿಯಾಗಿದ್ದವು.

ಆದರೆ, ಏಕಾಏಕಿ ಇಬ್ಬರೂ ನಿನ್ನೆಯಷ್ಟೇ ಡಿವೋರ್ಸ್‌ಗಾಗಿ ಅರ್ಜಿ ಸಲಿಸಿದ್ದಾರೆ. ಡಿವೋರ್ಸ್ ಕಾರಣ ತಿಳಿದುಕೊಂಡಿಲ್ಲ. ಆದರೆ, ಇಂದು ಇಬ್ಬರೂ ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ಗೆ ಹಾಜರಾಗಿದ್ದರು. ಇಬ್ಬರೂ ಒಪ್ಪಿಗೆಯ ಮೇರೆಗೆ ಅರ್ಜಿ ಸಲ್ಲಿಸಿದ್ದರು.

ಮೈಸೂರು ಯುವ ದಸರಾದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು ದೊಡ್ಡ ವಿವಾದವಾಗಿತ್ತು. ನಂತರ ಎಲ್ಲರೂ ಇವರ ಬೆಂಬಲಕ್ಕೆ ನಿಂತು ವಿಷಯವನ್ನು ತಣ್ಣಗಾಗಿಸಿದ್ದರು. ನಂತರ ಮೈಸೂರಲ್ಲಿ ಈ ಜೋಡಿ ಅದ್ಧೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟಿತ್ತು.

ಬಿಗ್‌ಬಾಸ್ ಸೀಸನ್ 5ರಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಾಣಿಸಿಕೊಂಡು ಎಲ್ಲರ ಮನೆ ಮಾತಾಗಿದ್ದರು. ಈ ರಿಯಾಲಿಟಿ ಶೋನಿಂದಲೇ ಇವರ ಪ್ರೀತಿ ಶುರುವಾಗಿತ್ತು. 2019ರ ಮೈಸೂರು ಯುವ ದಸರಾ ವೇದಿಕೆಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪ್ರಪೋಸ್ ಮಾಡಲು ದಸರಾ ವೇದಿಕೆ ಬಳಸಿಕೊಂಡಿರುವುದಕ್ಕೆ ಭಾರಿ ವಿವಾದವಾಗಿತ್ತು.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಂಸಾರದಲ್ಲಿ ಅಷ್ಟಾಗಿ ಏನೂ ಸರಿ ಇಲ್ಲವಂತೆ. ಹೀಗಾಗಿ ಈ ಇಬ್ಬರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ.

LEAVE A REPLY

Please enter your comment!
Please enter your name here