ಬೆಂಗಳೂರು:
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘ(ಕವಿಪವಿ ಕೂಟ)ದ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಸೊನ್ನದ ಹಾಗೂ ಉಪಾಧ್ಯಕ್ಷರಾಗಿ ಲಿಂಗರಾಜ್ ಬಡಿಗೇರ್ ಮತ್ತು ಸುಶೀಲಾ ಡೋಣೂರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸಂಜೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಸಾಕ್ಷ್ಯ ಚಿತ್ರ ನಿರ್ದೇಶಕರಾಗಿರುವ ಚಂದ್ರಕಾಂತ ಸೊನ್ನದ ಅವರನ್ನು ಅಧ್ಯಕ್ಷರಾಗಿ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ನ ಕನ್ನಡಪ್ರಭ.ಕಾಮ್ ಚೀಫ್ ಕಂಟೆಂಟ್ ಎಡಿಟರ್ ಲಿಂಗರಾಜ್ ಬಡಿಗೇರ್ ಹಾಗೂ ಪ್ರಜಾವಾಣಿ ಹಿರಿಯ ಪತ್ರಕರ್ತೆ ಸುಶೀಲಾ ಡೋಣೂರ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಖಾಸಗಿ ಕಂಪನಿಯಲ್ಲಿ ಪಿಆರ್ ಒ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಶಿರಿಯಣ್ಣವರ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡಿ ಬೆಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿರುವ ಹಿರಿಯರು ಸೇರಿಕೊಂಡು 1991ರಲ್ಲಿ ಈ ಸಂಘಟನೆ ಸ್ಥಾಪಿಸಲಾಯಿತು. ಹಲವು ಸಮಾಜಮುಖಿ ಕಾರ್ಯಗಳು ಸೇರಿದಂತೆ ತಮ್ಮ ವಿಭಾಗದ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿರುವ ಕವಿಪವಿ ಈಗ ಸುಮಾರು 300 ಜನ ಪತ್ರಕರ್ತರ ಸಂಘಟನೆಯಾಗಿ ಬೆಳೆದು ನಿಂತಿದೆ.
ಅವಿರೋಧವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು
ಚಂದ್ರಕಾಂತ ಸೊನ್ನದ-ಅಧ್ಯಕ್ಷರು
ಲಿಂಗರಾಜ್ ಬಡಿಗೇರ-ಉಪಾಧ್ಯಕ್ಷರು
ಸುಶೀಲಾ ಡೋಣೂರ-ಉಪಾಧ್ಯಕ್ಷರು
ಅನಿಲ ಬಾಸೂರ -ಖಜಾಂಚಿ
ಪ್ರವೀಣ್ ಶಿರಿಯಣ್ಣವರ-ಪ್ರಧಾನ ಕಾರ್ಯದರ್ಶಿ
ರವಿ ಎಸ್-ಕಾರ್ಯದರ್ಶಿ
ಮಂಜುನಾಥ ಭದ್ರಶೆಟ್ಟಿ-ಕಾರ್ಯದರ್ಶಿ
ಸದಸ್ಯರು
ಮುತ್ತುರಾಜ್ ಸುಳ್ಳದ
ವಿನಾಯಕ ವಿಮೆಯ