ಬೆಂಗಳೂರು:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮೂಲಕ ಯಶಸ್ವಿಯಾಗಿದ್ದು, ಇಸ್ರೋ ತಂಡಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, “ಭಾರತದ ISRO ಮತ್ತೊಮ್ಮೆ ಸಾಧನೆ ಮಾಡಿದೆ. ಚಂದ್ರಯಾನ 3 ರ ಯಶಸ್ವಿ ಮಿಷನ್ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮತ್ತೊಂದು ಯಶಸನ್ನು ಗುರುತಿಸುತ್ತದೆ. ಈ ಮಿಷನ್ ನ ಯಶಸ್ವಿಯಲ್ಲಿ ಭಾಗಿಯಾದ ಇಸ್ರೋದ ವಿಜ್ಞಾನಿಗಳು ಸೇರಿದಂತೆ ಪ್ರತಿಯೊಬ್ಬರಿಗೂ, ಇಡೀ ತಂಡಕ್ಕೆ ಅವರ ಸಮರ್ಪಣೆ ಮತ್ತು ನಾವೀನ್ಯತೆಗಾಗಿ ಅಭಿನಂದನೆಗಳು!” ಎಂದಿದ್ದಾರೆ.
"🌌 ಭಾರತದ ISRO ಮತ್ತೊಮ್ಮೆ ಸಾಧನೆ ಮಾಡಿದೆ! 🛰️ ಚಂದ್ರಯಾನ 3 ರ ಯಶಸ್ವಿ ಮಿಷನ್ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮತ್ತೊಂದು ಯಶಸನ್ನು ಗುರುತಿಸುತ್ತದೆ. 🌕🇮🇳 ಇಡೀ ತಂಡಕ್ಕೆ ಅವರ ಸಮರ್ಪಣೆ ಮತ್ತು ನಾವೀನ್ಯತೆಗಾಗಿ ಅಭಿನಂದನೆಗಳು! 🚀 #Chandrayana3 #ISRO #SpaceExcellence"
— Thaawarchand Gehlot (@TCGEHLOT) August 23, 2023
ಅಲ್ಲದೆ, ವಿಶ್ವದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವಕ ನಮನಗಳು. ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ.