ಬೆಂಗಳೂರು:
ಕಳೆದ ಮಾರ್ಚ್ ನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ವೇಳೆ ರೌಡಿ ಶೀಟರ್ ಫೈಟರ್ ರವಿ ಎದುರು ಪ್ರಧಾನಿ ನರೇಂದ್ರ ಮೋದಿ ಕೈ ಮುಗಿದು ನಿಂತ ಫೋಟೋಗಳು ವೈರಲ್ ಆಗಿತ್ತು. ಪ್ರಧಾನಿ ಅವರನ್ನು ಸ್ವಾಗತಿಸಲು ರೌಡಿ ಶೀಟರ್‌ಗೆ ಅವಕಾಶ ನೀಡಿದ್ದಕ್ಕಾಗಿ ಕರ್ನಾಟಕ ಕಾಂಗ್ರೆಸ್ ಘಟಕವು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು.
ಇದೀಗ ಚನ್ನಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ರೌಡಿ ಶೀಟರ್, ಡಬಲ್ ಮರ್ಡರ್ ಆರೋಪಿ ಎನ್ನಲಾದ ಮುದ್ದು ಕೃಷ್ಣ ಆಲಿಯಾಸ್ ಮುದ್ದು ಪ್ರಧಾನಿ ಮೋದಿ ಅವರಿಗೆ ಸನ್ಮಾನ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.
ರೌಡಿಶೀಟರ್ ಗಳು, ಕೊಲೆ ಆರೋಪಿಗಳು ಪ್ರಧಾನಿಯೊಂದಿಗೆ ವೇದಿಕೆ ಏರುವ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ.
ರೌಡಿಶೀಟರ್ ಗಳು, ಕೊಲೆ ಆರೋಪಿಗಳು ಪ್ರಧಾನಿಯೊಂದಿಗೆ ವೇದಿಕೆ ಏರುವ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ.
— Karnataka Congress (@INCKarnataka) April 30, 2023
ಇಲ್ಲಿ ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡುತ್ತಿರುವುದು ರೌಡಿಶೀಟರ್, ಡಬಲ್ ಮರ್ಡರ್ ಆರೋಪಿ ಮುದ್ದು ಕೃಷ್ಣ ಅಲಿಯಾಸ್ ಮುದ್ದು.
ಮೋದಿಯವರ ಕಿರೀಟಕ್ಕೆ ಬಿಜೆಪಿಯ ಮತ್ತೊಬ್ಬ ರೌಡಿಶೀಟರ್ ಗರಿ ಸೇರ್ಪಡೆ. #RowdySheetBJP pic.twitter.com/dnyPfZvic7
ಇಲ್ಲಿ ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡುತ್ತಿರುವುದು ರೌಡಿಶೀಟರ್, ಡಬಲ್ ಮರ್ಡರ್ ಆರೋಪಿ ಮುದ್ದು ಕೃಷ್ಣ ಅಲಿಯಾಸ್ ಮುದ್ದು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ರೌಡಿಶೀಟರ್ ಗಳು, ಕೊಲೆ ಆರೋಪಿಗಳು ಪ್ರಧಾನಿಯೊಂದಿಗೆ ವೇದಿಕೆ ಏರುವ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ. ಇಲ್ಲಿ ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡುತ್ತಿರುವುದು ರೌಡಿಶೀಟರ್, ಡಬಲ್ ಮರ್ಡರ್ ಆರೋಪಿ ಮುದ್ದು ಕೃಷ್ಣ ಅಲಿಯಾಸ್ ಮುದ್ದು. ಮೋದಿಯವರ ಕಿರೀಟಕ್ಕೆ ಬಿಜೆಪಿಯ ಮತ್ತೊಬ್ಬ ರೌಡಿಶೀಟರ್ ಗರಿ ಸೇರ್ಪಡೆ ಎಂದು ಹೇಳಿದೆ.