Home Uncategorized Channapattana; 10 ರೂ. ನೋಟು ತೆಗೆದುಕೊಳ್ಳಲು ಹೋಗಿ 1 ಲಕ್ಷ ಕಳೆದುಕೊಂಡ ವ್ಯಕ್ತಿ

Channapattana; 10 ರೂ. ನೋಟು ತೆಗೆದುಕೊಳ್ಳಲು ಹೋಗಿ 1 ಲಕ್ಷ ಕಳೆದುಕೊಂಡ ವ್ಯಕ್ತಿ

47
0

ರಾಮನಗರ ;- ವ್ಯಕ್ತಿಯೊಬ್ಬರು 10 ರೂ. ನೋಟು ತೆಗೆದುಕೊಳ್ಳಲು ಹೋಗಿ 1 ಲಕ್ಷ ಕಳೆದುಕೊಂಡ ಘಟನೆ ಚನ್ನಪಟ್ಟಣದ ಕೆನರಾ ಬ್ಯಾಂಕ್ ಬಳಿ ಜರುಗಿದೆ.

ರಾಘವೇಂದ್ರ ಹಣ ಕಳೆದುಕೊಂಡವರು. ರಾಘವೇಂದ್ರ ಅವರು ಕೆನರಾ ಬ್ಯಾಂಕ್​ನಿಂದ 1 ಲಕ್ಷ ರೂ. ಹಣ ಡ್ರಾಮಾಡಿಕೊಂಡು ಹೊರಗೆ ಬಂದಿದ್ದಾರೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ರಸ್ತೆಗೆ 10 ರೂ. ನೋಟು ಬಿಸಾಡಿ ಹಣ ಬಿದ್ದಿದ್ದೆ ಎಂದು ಹೇಳಿದ್ದಾನೆ.

ರಾಘವೇಂದ್ರ ಅವರು 1 ಲಕ್ಷ ರೂ. ಹಣವಿದ್ದ ಕವರ್​​ ಅನ್ನು​ ಬೈಕ್ ಮೇಲೆ ಇಟ್ಟು 10 ರೂ. ಎತ್ತಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಕ್ಷಣಾರ್ಧದಲ್ಲೇ 1 ಲಕ್ಷ ರೂ. ಹಣವಿದ್ದ ಕವರ್ ಎಗರಿಸಿ ಪರಾರಿಯಾಗಿದ್ದಾನೆ. ಆರೋಪಿ ಹಣ ತೆಗೆದುಕೊಂಡು ಹೋಗುತ್ತಿರುವುದನ್ನು ಮಹಿಳೆಯೊಬ್ಬರು ಕಂಡು ಕೈಸನ್ನೆ ಮಾಡಿ “ಯಾರೋ ನಿನ್ನ ಬ್ಯಾಗ್ ಎತ್ತಿಕೊಂಡು ಹೋಗುತ್ತಿದ್ದಾರೆ ನೋಡಿ ಎಂದು” ರಾಘವೇಂದ್ರ ಅವರಿಗೆ ಎಚ್ಚರಿಸಲು ಪ್ರಯತ್ನ ಪಟ್ಟರು.

ಆದರೆ ರಾಘವೇಂದ್ರ ಅವರಿಗೆ ಮಹಿಳೆಯ ಕೈಸನ್ನೆ ಭಾಷೆ ಅರ್ಥವಾಗದೆ ಎಚ್ಚೆತ್ತುಕೊಳ್ಳಲಿಲ್ಲ. ಖತರ್ನಾಕ್ ಕಳ್ಳನ ಕೈಚಳಕ ಬ್ಯಾಂಕ್ ಮುಂದಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

The post Channapattana; 10 ರೂ. ನೋಟು ತೆಗೆದುಕೊಳ್ಳಲು ಹೋಗಿ 1 ಲಕ್ಷ ಕಳೆದುಕೊಂಡ ವ್ಯಕ್ತಿ appeared first on Ain Live News.

LEAVE A REPLY

Please enter your comment!
Please enter your name here