Home Uncategorized Chicken Curry; ಡಾಬಾ ಸ್ಟೈಲ್‌ ಚಿಕ್ಕನ್ ಕರಿ, ಹೀಗೆ ಮಾಡಿದ್ರೆ ಸಖತ್ ಟೇಸ್ಟಿ

Chicken Curry; ಡಾಬಾ ಸ್ಟೈಲ್‌ ಚಿಕ್ಕನ್ ಕರಿ, ಹೀಗೆ ಮಾಡಿದ್ರೆ ಸಖತ್ ಟೇಸ್ಟಿ

20
0

ಡಾಬಾ ಸ್ಟೈಲ್‌ನ ಅಡುಗೆ ಇಷ್ಟಪಡುವುದಾದರೆ ಇಲ್ಲಿದೆ ನೋಡಿ ಖಾರವಾದ ಚಿಕನ್ ರೆಸಿಪಿ. ಈ ಖಾರ ಚಿಕನ್‌ ಗ್ರೇವಿ ತಿನ್ನಲು ತುಂಬಾ ರುಚಿಕರವಾಗಿದ್ದು, ಇದನ್ನು ಮಾಡುವ ಸ್ಟೆಪ್‌ ಬೈ ಸ್ಟೆಪ್‌ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿ

ಅರ್ಧ ಕೆಜಿ ಚಿಕನ್
1/4 ಚಮಚ ಚಕ್ಕೆ
2 ಲವಂಗ
1 ಈರುಳ್ಳಿ (ಕತ್ತರಿಸಿದ್ದು)
ಅರ್ಧ ಚಮಚ ಶುಂಠಿ ಪೇಸ್ಟ್
ಅರ್ಧ ಚಮಚ ಕೊತ್ತಂಬರಿ ಪುಡಿ
1 ಚಮಚ ಜೀರಿಗೆ ಪುಡಿ
5 ಬಾದಾಮಿ
ಸ್ವಲ್ಪ ಕರಿಬೇವು
2 ಚಮಚ ಸನ್‌ಫ್ಲವರ್ ಆಯಿಲ್
1 ಸಾಧಾರಣ ಗಾತ್ರದ ಟೊಮೆಟೊ
ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟ್
ಒಂದೂವರೆ ಚಮಚ ಕಾಳು ಮೆಣಸಿನ ಪುಡಿ
1 ಚಮಚ ಹಾಲು

ಚಿಕನ್‌ ಮಿಕ್ಸ್ ಮಾಡಿ ಇಡಲು

2 ಚಮಚ ಮೊಸರು
ಅರ್ಧ ಚಮಚ ಅರಿಶಿಣ ಪುಡಿ
ಅರ್ಧ ಚಮಚ ಖಾರದ ಪುಡಿ
ಅರ್ಧ ಚಮಚ ಉಪ್ಪು

ಡಾಬಾ ಸ್ಟೈಲ್‌ ಚಿಕನ್ ಮಾಡುವ ವಿಧಾನ:
ಸ್ಟೆಪ್‌ 1
ಚಿಕನ್‌ ಅನ್ನು ಮೊಸರು, ಅರಿಶಿಣ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ 1 ಗಂಟೆ ಇಡಿ. ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿ ಹೆಚ್ಚು.

ಸ್ಟೆಪ್‌ 2
ಈಗ ನೀರಿನಲ್ಲಿ ನೆನೆ ಹಾಕಿದ ಬಾದಾಮಿಯನ್ನುಹಾಲು ಹಾಕಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಎರಡು ಭಾಗ ಮಾಡಿ. ಈಗ ಪ್ಯಾನ್‌ ತೆಗೆದು ಎಣ್ಣೆ ಬಿಸಿ ಮಾಡಿ, ಎಣ್ಣೆ ಕಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

ಸ್ಟೆಪ್‌ 3
ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ, ನಂತರ ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ, ನಂತರ ಟೊಮೆಟೊ ಹಾಕಿ.

ಸ್ಟೆಪ್‌ 4
ಈ ಮಿಶ್ರಣದಿಂದ ಎಣ್ಣೆ ಬಿಟ್ಟು ಮೇಲೆ ತೇಲಲಾರಂಭಿಸಿದಾಗ ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣವನ್ನು ಪೇಸ್ಟ್ ಮಾಡಿ ಒಂದು ಬೌಲ್‌ನಲ್ಲಿಡಿ. ಈಗ ಅದೇ ಪ್ಯಾನ್‌ಗೆ 1 ಚಮಚ ಎಣ್ಣೆ ಹಾಕಿ ಚಕ್ಕೆ, ಲವಂಗ ಹಾಕಿ, ಮಿಕ್ಸ್ ಮಾಡಿಟ್ಟ ಚಿಕನ್ ಹಾಕಿ 5-6 ನಿಮಿಷ ಬೇಯಿಸಿ.

ಸ್ಟೆಪ್‌ 5
ಈಗ ಬಾದಾಮಿ ಅರ್ಧ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಬೇಯಿಸಿ, ಈಗ ರುಬ್ಬಿದ ಮಿಶ್ರಣ ಹಾಕಿ, ನಂತರ ಸ್ವಲ್ಪ ನೀರು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ, ಬೇಯುವಾಗ ಮಧ್ಯ ಮಧ್ಯ ಸೌಟ್‌ನಿಂದ ಆಡಿಸಿ ಹಾಗೂ ಉಪ್ಪು ಸರಿಯಾಗಿದೆಯೇ ನೋಡಿ.

ಸ್ಟೆಪ್ 6
ಈಗ ರೆಡಿಯಾದ ಚಿಕನ್‌ ಅನ್ನು ನಿಂಬೆ ತುಂಡುಗಳನ್ನು ಇಟ್ಟು, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ಡಾಬಾ ಸ್ಟೈಲ್‌ ಸ್ಪೈಸಿ ಚಿಕನ್‌ ರೆಡಿ.

The post Chicken Curry; ಡಾಬಾ ಸ್ಟೈಲ್‌ ಚಿಕ್ಕನ್ ಕರಿ, ಹೀಗೆ ಮಾಡಿದ್ರೆ ಸಖತ್ ಟೇಸ್ಟಿ appeared first on Ain Live News.

LEAVE A REPLY

Please enter your comment!
Please enter your name here