Home ಬೆಂಗಳೂರು ನಗರ ‘ಮೇಕ್ ಇನ್ ಇಂಡಿಯಾ’ ಸಿಂಹ ಲಾಂಛನ ಮುಖ್ಯಮಂತ್ರಿಗಳಿಂದ ಬಿಡುಗಡೆ

‘ಮೇಕ್ ಇನ್ ಇಂಡಿಯಾ’ ಸಿಂಹ ಲಾಂಛನ ಮುಖ್ಯಮಂತ್ರಿಗಳಿಂದ ಬಿಡುಗಡೆ

433
0

ಬೆಂಗಳೂರು:

ಬೆಂಗಳೂರು ನಗರವನ್ನು ವಿಶ್ವಮಟ್ಟಕ್ಕೇರಿಸಲು ಪಣ ‘ಮೇಕ್ ಇನ್ ಇಂಡಿಯಾ’ಸಿಂಹ ಲಾಂಛನವನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದಾರೆ.

‘ಮೇಕ್ ಇನ್ ಇಂಡಿಯಾ’ ಸಿಂಹ ಪ್ರತಿಮೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಂಡ್ಸರ್ ಚೌಕದಲ್ಲಿ ಘರ್ಜಿಸುವ ಸಿಂಹದ ಪ್ರತಿಮೆಯನ್ನು ಇರಿಸಿದೆ. ಇದು ಮುಖ್ಯಮಂತ್ರಿಯ ಅಧಿಕೃತ ನಿವಾಸದಿಂದ ಕೂಗಳತೆ ದೂರದಲ್ಲಿದೆ.

ಈ ಪ್ರತಿಮೆಯು 1,140 ಕೆಜಿ ತೂಕವಿದ್ದು, ಫೈಬರ್ ಬೋಲ್ಸ್ಟರ್ಡ್ ಪ್ಲಾಸ್ಟಿಕ್‌ನಿಂದ ತಯಾರಿಸಲ್ಪಟ್ಟಿದೆ. ಇದು 23 ಅಡಿ ಉದ್ದ, 4.5 ಅಡಿ ಉದ್ದವಿದೆ. ಗಾಜಿಯಾಬಾದ್‌ನಲ್ಲಿ ಕೆತ್ತಿ ಬೆಂಗಳೂರಿಗೆ ಸಾಗಿಸಲಾಗಿದೆ. ಇದರ ತಯಾರಿ, ಸಾಗಾಟ ವೆಚ್ಚ ಸೇರಿ 5.76 ಲಕ್ಷ ರೂಪಾಯಿಗಳನ್ನು ಬಿಬಿಎಂಪಿ ಪಾವತಿಸಿದೆ.

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾವಾಗಿದ್ದು, ಭಾರತದಲ್ಲಿಯೇ ವಸ್ತುಗಳನ್ನು ತಯಾರಿಸಿ ಸಾಧ್ಯವಾದಷ್ಟು ಹೊರದೇಶಗಳಿಗೆ ರಫ್ತು ಮಾಡುವ ಶಕ್ತಿಯನ್ನು ಹೊಂದುವುದಾಗಿದೆ.

Screenshot 169
Screenshot 170
Screenshot 171

LEAVE A REPLY

Please enter your comment!
Please enter your name here