Home ಬೆಂಗಳೂರು ನಗರ Siddaramaiah’s contribution to drug mafia: ಡ್ರಗ್‌ ಮಾಫಿಯಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ: ಪ್ರತಿಪಕ್ಷ ನಾಯಕ...

Siddaramaiah’s contribution to drug mafia: ಡ್ರಗ್‌ ಮಾಫಿಯಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ, ಅಕ್ಟೋಬರ್‌ ವೇಳೆಗೆ ಸಿಎಂ ಬದಲಾವಣೆ ಖಚಿತ

15
0
Chief Minister Siddaramaiah's contribution to drug mafia: Opposition leader R. Ashoka, CM change is certain by October

ಮೈಸೂರು: ಮೈಸೂರಿನಲ್ಲಿ ಡ್ರಗ್‌ ಮಾಫಿಯಾ ತಲೆ ಎತ್ತಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಡ್ರಗ್‌ ಮಾಫಿಯಾ ತಲೆ ಎತ್ತಿದೆ. ಇವರನ್ನು ಯತೀಂದ್ರ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಸಿದ್ದಾರೆ. ಮೈಸೂರಿನಲ್ಲಿ ಮಾದಕ ವಸ್ತುಗಳ ಫ್ಯಾಕ್ಟರಿಯೇ ಇರುವಾಗ ಗೃಹ ಇಲಾಖೆ ಏನು ಮಾಡುತ್ತಿದೆ? ಸರ್ಕಾರ ಇದುವರೆಗೂ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಮಾಲೀಕ ಯಾರು? ಜಮೀನು ಕೊಟ್ಟವರು ಯಾರು? ನೂರಾರು ಕೋಟಿಯ ದಂಧೆಗೆ ಅವಕಾಶ ನೀಡಿದವರು ಯಾರು? ಸರ್ಕಾರ ಈ ವಿಚಾರದಲ್ಲಿ ಮೈ ಮರೆತಿದೆ. ಇದೇ ಸಿದ್ದರಾಮಯ್ಯನವರ ಕೊಡುಗೆ ಎಂದರು.

ಜೆಡಿಎಸ್‌ನಿಂದ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಆದರೆ ಕಾಂಗ್ರೆಸ್‌ನಲ್ಲೇ ಇದ್ದ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿಲ್ಲ. ಆದ್ದರಿಂದಲೇ ಖರ್ಗೆ ಸಿಎಂ ಆಗದಿರುವ ಬಗ್ಗೆ ಹೇಳಿದ್ದಾರೆ. ಈಗಲಾದರೂ ನನ್ನನ್ನು ಸಿಎಂ ಮಾಡಿ ಋಣ ತೀರಿಸಿ ಎಂದು ಅವರು ಹೇಳಿದ್ದಾರೆ. ಸಚಿವ ರಾಜಣ್ಣ ಈಗಾಗಲೇ ಕ್ರಾಂತಿಯ ಬಗ್ಗೆ ಹೇಳಿದ್ದಾರೆ. ಖರ್ಗೆಯವರಯು ಸರಿಯಾದ ಸಮಯಕ್ಕೆ ಮಾವಿನ ಹಣ್ಣಿಗೆ ಕಲ್ಲು ಹೊಡೆದಿದ್ದಾರೆ. ಅಕ್ಟೋಬರ್‌ ವೇಳೆಗೆ ಸಿಎಂ ಬದಲಾವಣೆ ಖಚಿತ ಎಂದರು.

ಎಸ್‌.ಎಂ.ಕೃಷ್ಣ ಸತ್ತ ನಂತರ ಅವರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತಾಡುತ್ತಿದ್ದಾರೆ. ಎಸ್‌.ಎಂ.ಕೃಷ್ಣ ಐಟಿ ಬಿಟಿಗೆ ನೋಡಿದ ಕೊಡುಗೆಯಿಂದಲೇ ಇಷ್ಟು ಆದಾಯ ರಾಜ್ಯಕ್ಕೆ ಬರುತ್ತಿದೆ. ನಾನು ಜ್ಯೋತಿಷ್ಯ ಹೇಳಲ್ಲ. ಆದರೆ ಖಚಿತವಾಗಿ ಒಪ್ಪಂದ ಆಗಿದೆ ಎಂದು ಶಾಸಕರೇ ಹೇಳಿದ್ದಾರೆ. ಎಲ್ಲ ಜಿಲ್ಲೆಗಳ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ಅವರಿಗೆ ದೇವರೇ ಗತಿ. ಯಾವ ದೇವರು ವರ ನೀಡುತ್ತಾರೆ ಎಂದು ಅವರು ನೋಡಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲ್ಲ. ಸಿದ್ದರಾಮಯ್ಯ ಮೈಸೂರಿನಲ್ಲಿ ಒಂದೇ ಒಂದು ಕೆರೆ ಕಟ್ಟಿಸಿಲ್ಲ. ಆದರೂ ಅವರನ್ನು ಮಹಾರಾಜರಿಗೆ ಹೋಲಿಕೆ ಮಾಡುತ್ತಾರೆ. ಶಾಸಕರ ಜೊತೆ ಇವರು ಅಭಿವೃದ್ಧಿ ಬಗ್ಗೆ ಚರ್ಚೆಯೇ ಮಾಡಲ್ಲ ಎಂದರು.

ಧರ್ಮಸ್ಥಳದಲ್ಲಿ ಆಗಿರುವ ಮರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಪ್ರಗತಿಪರ ಸಂಘಟನೆಗಳಿಗೆ ಅವರ ಪರವಾದ ವರದಿಯನ್ನೇ ಎಸ್‌ಐಟಿ ನೀಡಬೇಕು ಎಂದು ಬಯಸುತ್ತಾರೆ. ತಪ್ಪಿತಸ್ಥರು ಯಾರೆಂದು ಗೊತ್ತಾಗಲಿ. ಅದಕ್ಕೆ ಮುನ್ನವೇ ಕೆಟ್ಟ ಸುದ್ದಿಗಳನ್ನು ಹರಡುವುದು ಬೇಡ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದು ಬೇಡ ಎಂದರು.

LEAVE A REPLY

Please enter your comment!
Please enter your name here