Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಕರ್ನಾಟಕದಲ್ಲಿ ನಕ್ಸಲಿಯ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆ…
  • ಕರ್ನಾಟಕ
  • ಬೆಂಗಳೂರು ನಗರ

ಕರ್ನಾಟಕದಲ್ಲಿ ನಕ್ಸಲಿಯ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆ…

The Bengaluru Live December 30, 2024 10:52 PM 1 minute read
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕೆಂದು ಸರ್ಕಾರವು ಬಯಸುತ್ತದೆ.

ಈ ಮಧ್ಯೆ ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯು ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ನನ್ನನ್ನು ಭೇಟಿ ಮಾಡಿರುತ್ತಾರೆ.

ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ.

ಆದರೆ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ.

ನಕ್ಸಲೀಯ ಚಟುವಟಿಕೆಗಳು ಕರ್ನಾಟಕದಲ್ಲಿ ಎಂದೂ ನೆರೆಯ ರಾಜ್ಯಗಳಂತೆ ವಿಪರೀತ ಪ್ರಮಾಣದಲ್ಲಿ ನಡೆದಿಲ್ಲ. ಆದರೆ, ಮಲೆನಾಡಿನಲ್ಲಿ ಎರಡು ದಶಕಗಳಿಂದ ಆಗಾಗ್ಗೆ ನಕ್ಸಲೀಯ ಚಟುವಟಿಕೆಗಳು ಕಾಣುತ್ತಲಿವೆ ಮತ್ತು ಆ ಕಾರಣದಿಂದ ಹಿಂಸೆ ಹಾಗೂ ಸಾವು-ನೋವುಗಳು ಸಂಭವಿಸಿವೆ.

ಹಲವಾರು ಅಮಾಯಕರ, ಪೊಲೀಸರ ಮತ್ತು ನಕ್ಸಲೀಯ ಚಟುವಟಿಕೆಗಳಲ್ಲಿ ಇದ್ದವರ ಜೀವಹಾನಿಯೂ ಆಗಿದೆ. ಆದರೆ, ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು ತಮ್ಮ ಜೀವವನ್ನೂ ತೆತ್ತುಕೊಳ್ಳುತ್ತಾರೆ, ಇತರರ ಜೀವಹಾನಿಗೂ ಕಾರಣವಾಗುತ್ತಾರೆ. ಇದು ನೋವಿನ ವಿಚಾರವಾದರೂ, ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರ್ಕಾರ ಸುಮ್ಮನೇ ಕೂರುವುದು ಸಾಧ್ಯವಿಲ್ಲ.

ಕರ್ನಾಟಕದ ಎಲ್ಲ ನಕ್ಸಲೀಯರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ.

ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾದ್ದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರ್ಕಾರವು ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಸರಳೀಕರಣಗೊಳಿಸಿ, ಸಮಪರ್ಕವಾಗಿ ಜಾರಿ ಮಾಡಲಾಗುವುದೆಂದು ಭರವಸೆ ನೀಡುತ್ತೇನೆ.

ನಕ್ಸಲೀಯರ ಶರಣಾಗತಿ ನೀತಿಯನ್ವಯ ಹಂತ ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು ಹಾಗೂ ಆಯುಧಗಳನ್ನು ಸರ್ಕಾರಕ್ಕೆ ಅದ್ಯಾರ್ಪಣೆ ಮಾಡುವ ನಕ್ಸಲೀಯರಿಗೆ ಪ್ರೋತ್ಸಾಹ ಧನ, ಕೌಶಲ್ಯ ತರಬೇತಿಗಳು ನೀಡುವುದಲ್ಲದೆ ಅವರುಗಳ ಪುನರ್ವಸತಿಗೂ ಸಹ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮವಹಿಸಲಾಗುವುದು.

ಅವರ ಮೇಲಿನ ಮೊಕದ್ದಮೆ / ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದೆ ಹಾಗೂ ಅವರಿಗೆ ಕಾನೂನಿನ ನೆರವು ಸಹ ನೀಡಲಾಗುವುದು.

ಈಗಾಗಲೇ ಶರಣಾಗತರಾದ ನಕ್ಸಲೀಯರ ಅಗತ್ಯಗಳನ್ನು ಸಹ ಗುರುತಿಸಿ ಅವರಿಗೂ ಸಹ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ.

ಅದೇ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ಯಾರೇ ಆದರೂ, ಅವರ ವಿರುದ್ಧ ಕಠಿಣವಾದ ಕಾನೂನು ಕ್ರಮವನ್ನು ನಮ್ಮ ಸರ್ಕಾರವು ತೆಗೆದುಕೊಳ್ಳಲಿದೆ ಎಂದೂ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಬಯಸುತ್ತೇನೆ.

— ಮುಖ್ಯಮಂತ್ರಿ ಸಿದ್ದರಾಮಯ್ಯ

About the Author

The Bengaluru Live

Administrator

Visit Website View All Posts

Post navigation

Previous: ರೈತರಿಂದ, ರೈತರಿಗಾಗಿ, ರೈತರ ಒಳಿತಿನ ಮೇಳಗಳು ಇಂದಿನ ಅಗತ್ಯ; ಅವರೆ ಮೇಳ ಇದಕ್ಕೆ ಮಾದರಿ: ಡಿಸಿಎಂ ಡಿ. ಕೆ. ಶಿವಕುಮಾರ್
Next: ಆಡಳಿತಾಂಗದಲ್ಲಿ IAS-IPS-IRS-IFS ಅಧಿಕಾರಿಗಳ ಜವಾಬ್ದಾರಿ ಹೆಚ್ಚು: ಸಿ.ಎಂ.ಸಿದ್ದರಾಮಯ್ಯ

Related Stories

ಮಳೆ ಸುರಿಯುತ್ತಿರುವ ರಸ್ತೆಯಲ್ಲಿ ವಾಹನಗಳ ಪಕ್ಕದಲ್ಲಿ ಕೊಡೆ ಹಿಡಿದು ಸಾಗುತ್ತಿರುವ ವ್ಯಕ್ತಿ
  • ಕರ್ನಾಟಕ
  • ಬೆಂಗಳೂರು

ಬೆಂಗಳೂರು ಹವಾಮಾನ: ಇಂದು ಹಗುರ ಮಳೆ ಸಾಧ್ಯತೆ, ಸೋಮವಾರ-ಮಂಗಳವಾರ ಒಣ ಹವೆ; ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ

The Bengaluru Live November 8, 2026 2:38 PM
ಅರ್ಚಕರು ಆರತಿ ಬೆಳಗುತ್ತಿರುವಾಗ ಹಾಸನಾಂಬೆ ದೇವರ ಮುಂದೆ ಕೈಮುಗಿದು ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಪತ್ನಿ ಉಷಾ
  • ಕರ್ನಾಟಕ
  • ರಾಜಕೀಯ

ಪೆಟ್ರೋಲ್‌ನಲ್ಲಿ ಎಥೆನಾಲ್: ಹೊಣೆಯಿಂದ ನುಣುಚಿಕೊಳ್ಳಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದ ಸಿಎಂ ಶಿವಕುಮಾರ್; ರಾಜ್ಯದ 67 ಕಡೆ ಮಾದರಿ ಪರೀಕ್ಷೆ

The Bengaluru Live November 8, 2026 1:59 PM
ಹಳದಿ ಇಂಧನ ಮಾದರಿ ಇರುವ ಪ್ರಯೋಗಾಲಯದ ಫ್ಲಾಸ್ಕ್ ಹಿಡಿದಿರುವ ಕೈಗವಸು ಧರಿಸಿದ ಕೈ
  • ಕರ್ನಾಟಕ

ಇ20 ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವವರು ಯಾರು? ಕರ್ನಾಟಕದ 56 ಮಾದರಿಗಳು ಮಾನದಂಡದಲ್ಲಿವೆ ಎಂದ ಇಂಡಿಯನ್ ಆಯಿಲ್; ಶೇ 31.2ರವರೆಗೆ ಎಥೆನಾಲ್ ಪತ್ತೆ ಎಂದಿದ್ದ ರಾಜ್ಯ

The Bengaluru Live November 8, 2026 1:14 PM

Latest Post

ಬೆಂಗಳೂರು ಹವಾಮಾನ: ಇಂದು ಹಗುರ ಮಳೆ ಸಾಧ್ಯತೆ, ಸೋಮವಾರ-ಮಂಗಳವಾರ ಒಣ ಹವೆ; ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ ಮಳೆ ಸುರಿಯುತ್ತಿರುವ ರಸ್ತೆಯಲ್ಲಿ ವಾಹನಗಳ ಪಕ್ಕದಲ್ಲಿ ಕೊಡೆ ಹಿಡಿದು ಸಾಗುತ್ತಿರುವ ವ್ಯಕ್ತಿ
  • ಕರ್ನಾಟಕ
  • ಬೆಂಗಳೂರು

ಬೆಂಗಳೂರು ಹವಾಮಾನ: ಇಂದು ಹಗುರ ಮಳೆ ಸಾಧ್ಯತೆ, ಸೋಮವಾರ-ಮಂಗಳವಾರ ಒಣ ಹವೆ; ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ

November 8, 2026 2:38 PM
ಪೆಟ್ರೋಲ್‌ನಲ್ಲಿ ಎಥೆನಾಲ್: ಹೊಣೆಯಿಂದ ನುಣುಚಿಕೊಳ್ಳಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದ ಸಿಎಂ ಶಿವಕುಮಾರ್; ರಾಜ್ಯದ 67 ಕಡೆ ಮಾದರಿ ಪರೀಕ್ಷೆ ಅರ್ಚಕರು ಆರತಿ ಬೆಳಗುತ್ತಿರುವಾಗ ಹಾಸನಾಂಬೆ ದೇವರ ಮುಂದೆ ಕೈಮುಗಿದು ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಪತ್ನಿ ಉಷಾ
  • ಕರ್ನಾಟಕ
  • ರಾಜಕೀಯ

ಪೆಟ್ರೋಲ್‌ನಲ್ಲಿ ಎಥೆನಾಲ್: ಹೊಣೆಯಿಂದ ನುಣುಚಿಕೊಳ್ಳಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದ ಸಿಎಂ ಶಿವಕುಮಾರ್; ರಾಜ್ಯದ 67 ಕಡೆ ಮಾದರಿ ಪರೀಕ್ಷೆ

November 8, 2026 1:59 PM
ಇ20 ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವವರು ಯಾರು? ಕರ್ನಾಟಕದ 56 ಮಾದರಿಗಳು ಮಾನದಂಡದಲ್ಲಿವೆ ಎಂದ ಇಂಡಿಯನ್ ಆಯಿಲ್; ಶೇ 31.2ರವರೆಗೆ ಎಥೆನಾಲ್ ಪತ್ತೆ ಎಂದಿದ್ದ ರಾಜ್ಯ ಹಳದಿ ಇಂಧನ ಮಾದರಿ ಇರುವ ಪ್ರಯೋಗಾಲಯದ ಫ್ಲಾಸ್ಕ್ ಹಿಡಿದಿರುವ ಕೈಗವಸು ಧರಿಸಿದ ಕೈ
  • ಕರ್ನಾಟಕ

ಇ20 ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವವರು ಯಾರು? ಕರ್ನಾಟಕದ 56 ಮಾದರಿಗಳು ಮಾನದಂಡದಲ್ಲಿವೆ ಎಂದ ಇಂಡಿಯನ್ ಆಯಿಲ್; ಶೇ 31.2ರವರೆಗೆ ಎಥೆನಾಲ್ ಪತ್ತೆ ಎಂದಿದ್ದ ರಾಜ್ಯ

November 8, 2026 1:14 PM
ಎಫ್‌ಎಸ್‌ಎಸ್‌ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ ತಪಾಸಣೆಯ ವೇಳೆ ರಸಗುಲ್ಲಾ ಪಾತ್ರೆಗಳನ್ನು ಪರಿಶೀಲಿಸುತ್ತಿರುವ ಆಹಾರ ಸುರಕ್ಷತಾ ಅಧಿಕಾರಿ
  • ಆರೋಗ್ಯ
  • ರಾಷ್ಟ್ರೀಯ

ಎಫ್‌ಎಸ್‌ಎಸ್‌ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ

November 8, 2026 1:11 PM
ಶೇ 20ರ ಎಥೆನಾಲ್ ಮಿಶ್ರಣ ಸಮರ್ಥಿಸಿದ ಪ್ರಹ್ಲಾದ್ ಜೋಶಿ; ಇ20 ವಿರುದ್ಧ ಕಾಂಗ್ರೆಸ್ ವಿರೋಧ ‘ರೈತ ವಿರೋಧಿ’ ಎಂದು ಟೀಕೆ ಎಥೆನಾಲ್ ಮಿಶ್ರಣ ಕುರಿತು ವಿಡಿಯೊದಲ್ಲಿ ಮಾತನಾಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
  • ಕರ್ನಾಟಕ
  • ರಾಜಕೀಯ

ಶೇ 20ರ ಎಥೆನಾಲ್ ಮಿಶ್ರಣ ಸಮರ್ಥಿಸಿದ ಪ್ರಹ್ಲಾದ್ ಜೋಶಿ; ಇ20 ವಿರುದ್ಧ ಕಾಂಗ್ರೆಸ್ ವಿರೋಧ ‘ರೈತ ವಿರೋಧಿ’ ಎಂದು ಟೀಕೆ

November 8, 2026 12:07 PM
ಎಚ್‌ಎಸ್‌ಆರ್ ಲೇಔಟ್ 14ನೇ ಮುಖ್ಯರಸ್ತೆ: ವೈಟ್ ಟಾಪಿಂಗ್ ಕಾಮಗಾರಿಗಾಗಿ ಒಂದು ಬದಿ 60 ದಿನ ಬಂದ್; ಬದಲಿ ಮಾರ್ಗಗಳ ವಿವರ ಎಚ್‌ಎಸ್‌ಆರ್ ಲೇಔಟ್‌ನ 14ನೇ ಮುಖ್ಯರಸ್ತೆಯಲ್ಲಿ ನಿರ್ಬಂಧಿತ ದಿಕ್ಕು ಮತ್ತು ಅಗರ ಜಂಕ್ಷನ್, ವೆಂಕಟಾಪುರ ಮುಖ್ಯರಸ್ತೆ ಮೂಲಕ ಬದಲಿ ಮಾರ್ಗಗಳನ್ನು ತೋರಿಸುವ ಬೆಂಗಳೂರು ಸಂಚಾರ ಪೊಲೀಸರ ನಕ್ಷೆ
  • ಬೆಂಗಳೂರು

ಎಚ್‌ಎಸ್‌ಆರ್ ಲೇಔಟ್ 14ನೇ ಮುಖ್ಯರಸ್ತೆ: ವೈಟ್ ಟಾಪಿಂಗ್ ಕಾಮಗಾರಿಗಾಗಿ ಒಂದು ಬದಿ 60 ದಿನ ಬಂದ್; ಬದಲಿ ಮಾರ್ಗಗಳ ವಿವರ

November 8, 2026 12:03 PM

ನೀವು ತಪ್ಪಿಸಿಕೊಂಡಿರಬಹುದು

ಮಳೆ ಸುರಿಯುತ್ತಿರುವ ರಸ್ತೆಯಲ್ಲಿ ವಾಹನಗಳ ಪಕ್ಕದಲ್ಲಿ ಕೊಡೆ ಹಿಡಿದು ಸಾಗುತ್ತಿರುವ ವ್ಯಕ್ತಿ
  • ಕರ್ನಾಟಕ
  • ಬೆಂಗಳೂರು

ಬೆಂಗಳೂರು ಹವಾಮಾನ: ಇಂದು ಹಗುರ ಮಳೆ ಸಾಧ್ಯತೆ, ಸೋಮವಾರ-ಮಂಗಳವಾರ ಒಣ ಹವೆ; ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ

The Bengaluru Live November 8, 2026 2:38 PM
ಅರ್ಚಕರು ಆರತಿ ಬೆಳಗುತ್ತಿರುವಾಗ ಹಾಸನಾಂಬೆ ದೇವರ ಮುಂದೆ ಕೈಮುಗಿದು ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಪತ್ನಿ ಉಷಾ
  • ಕರ್ನಾಟಕ
  • ರಾಜಕೀಯ

ಪೆಟ್ರೋಲ್‌ನಲ್ಲಿ ಎಥೆನಾಲ್: ಹೊಣೆಯಿಂದ ನುಣುಚಿಕೊಳ್ಳಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದ ಸಿಎಂ ಶಿವಕುಮಾರ್; ರಾಜ್ಯದ 67 ಕಡೆ ಮಾದರಿ ಪರೀಕ್ಷೆ

The Bengaluru Live November 8, 2026 1:59 PM
ಹಳದಿ ಇಂಧನ ಮಾದರಿ ಇರುವ ಪ್ರಯೋಗಾಲಯದ ಫ್ಲಾಸ್ಕ್ ಹಿಡಿದಿರುವ ಕೈಗವಸು ಧರಿಸಿದ ಕೈ
  • ಕರ್ನಾಟಕ

ಇ20 ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವವರು ಯಾರು? ಕರ್ನಾಟಕದ 56 ಮಾದರಿಗಳು ಮಾನದಂಡದಲ್ಲಿವೆ ಎಂದ ಇಂಡಿಯನ್ ಆಯಿಲ್; ಶೇ 31.2ರವರೆಗೆ ಎಥೆನಾಲ್ ಪತ್ತೆ ಎಂದಿದ್ದ ರಾಜ್ಯ

The Bengaluru Live November 8, 2026 1:14 PM
ತಪಾಸಣೆಯ ವೇಳೆ ರಸಗುಲ್ಲಾ ಪಾತ್ರೆಗಳನ್ನು ಪರಿಶೀಲಿಸುತ್ತಿರುವ ಆಹಾರ ಸುರಕ್ಷತಾ ಅಧಿಕಾರಿ
  • ಆರೋಗ್ಯ
  • ರಾಷ್ಟ್ರೀಯ

ಎಫ್‌ಎಸ್‌ಎಸ್‌ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ

The Bengaluru Live November 8, 2026 1:11 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರು ಹವಾಮಾನ: ಇಂದು ಹಗುರ ಮಳೆ ಸಾಧ್ಯತೆ, ಸೋಮವಾರ-ಮಂಗಳವಾರ ಒಣ ಹವೆ; ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ
  • ಪೆಟ್ರೋಲ್‌ನಲ್ಲಿ ಎಥೆನಾಲ್: ಹೊಣೆಯಿಂದ ನುಣುಚಿಕೊಳ್ಳಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದ ಸಿಎಂ ಶಿವಕುಮಾರ್; ರಾಜ್ಯದ 67 ಕಡೆ ಮಾದರಿ ಪರೀಕ್ಷೆ
  • ಇ20 ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವವರು ಯಾರು? ಕರ್ನಾಟಕದ 56 ಮಾದರಿಗಳು ಮಾನದಂಡದಲ್ಲಿವೆ ಎಂದ ಇಂಡಿಯನ್ ಆಯಿಲ್; ಶೇ 31.2ರವರೆಗೆ ಎಥೆನಾಲ್ ಪತ್ತೆ ಎಂದಿದ್ದ ರಾಜ್ಯ
  • ಎಫ್‌ಎಸ್‌ಎಸ್‌ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ
©Copyright 2025 The Bengaluru Live All rights reserved. | MoreNews by AF themes.