ಪ್ರಧಾನಿ ಸೇರಿ ಗಣ್ಯರಿಂದ ಹುಟ್ಟುಹಬ್ಬದ ಶುಭಾಶಯ
ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು 78ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರಿಗೆ ಪ್ರಧಾನಿ ಸೇರಿ ಹಲವು ಗಣ್ಯರು ಶುಭ ಕೋರಿದ್ದಾರೆ.
ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಪ್ರಾರ್ಥಿಸುತ್ತೇನೆ ಎಂದು ಯಡಿಯೂರಪ್ಪ ಅವರ ಮಗ, ಸಂಸದ ಬಿವೈ ರಾಘವೇಂದ್ರ ಶುಭಾಶಯ ಕೋರಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿ, ಮುಖ್ಯಮಂತ್ರಿ ಯಡಿಯೂರಪ್ಪಜಿಯವರಿಗೆ ಶುಭಾಶಯಗಳು. ಯಡಿಯೂರಪ್ಪ ಅವರು ನಮ್ಮ ಪಕ್ಷದ ಅಪಾರ ಅನುಭವಿ ನಾಯಕರಾಗಿದ್ದು, ತಮ್ಮ ಜೀವನವನ್ನು ರೈತರ ಕಲ್ಯಾಣ ಮತ್ತು ಬಡವರ ಸಬಲೀಕರಣಕ್ಕೆ ವ್ಯಯಿಸಿದ್ದಾರೆ. ಅವರ ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಶುಭ ಕೋರಿದ್ದಾರೆ.
Greetings to Karnataka CM @BSYBJP Ji on his birthday. Yediyurappa Ji is one of our most experienced leaders, who has devoted his life towards the welfare of farmers and empowering the poor. Praying for his long and healthy life.
— Narendra Modi (@narendramodi) February 27, 2021
Birthday greetings to the Chief Minister of Karnataka, Shri @BSYBJP ji.
— Amit Shah (@AmitShah) February 27, 2021
His dedication towards the welfare of the poor and farmers of Karnataka is commendable.
May God bless him with a long and healthy life.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಾಮಾಜಿಕ ಜಾಲಣಗಳ ಮೂಲಕ ಹುಟ್ಟುಹಬ್ಬದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ರಾಜಕೀಯ ಪಕ್ಷಗಳ ನಾಯಕರು, ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ. ಛಲ, ಸಂಕಲ್ಪ ಶಕ್ತಿ ಮತ್ತು ಹೋರಾಟದ ಮೂಲಕವೇ ಗುರುತಿಸಿಕೊಂಡಿರುವ ಅಭಿವೃದ್ಧಿಯ ಹರಿಕಾರ, ರೈತಬಂಧು, ರಾಜ್ಯದ ಮುಖ್ಯಮಂತ್ರಿ ಹಾಗೂ ಪೂಜ್ಯ ತಂದೆಯವರಾದ ಬಿ. ಎಸ್. ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ನಮ್ಮ ನೆಚ್ಚಿನ ನಾಯಕ, ರೈತಬಂಧು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದಂದು ಹಾರ್ದಿಕ ಶುಭಾಶಯಗಳು. ನಾಡಿನ ಸಮಗ್ರ ಅಭಿವೃದ್ಧಿ, ಸುದೀರ್ಘ ಸಾರ್ವಜನಿಕ ಸೇವೆಗಾಗಿ ಭಗವಂತನ ಶುಭಾಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುವುದಾಗಿ ಡಿಸಿಎಂ ಅಶ್ವತ್ಥ ನಾರಾಯಣ ಟ್ವೀಟ್ ಮಾಡಿದ್ದಾರೆ.
ನಮ್ಮ ನೆಚ್ಚಿನ ನಾಯಕ, ರೈತಬಂಧು, ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದಂದು ನನ್ನ ಹಾರ್ದಿಕ ಶುಭಾಶಯಗಳು.
— Dr. Ashwathnarayan C. N. (@drashwathcn) February 27, 2021
ನಾಡಿನ ಸಮಗ್ರ ಅಭಿವೃದ್ಧಿ, ಸುದೀರ್ಘ ಸಾರ್ವಜನಿಕ ಸೇವೆಗಾಗಿ ಭಗವಂತನ ಶುಭಾಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸುತ್ತೇನೆ.@BSYBJP pic.twitter.com/n6674Fy0Sn
ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. ತಮ್ಮ ನಾಯಕತ್ವ ಮತ್ತು ಕರ್ನಾಟಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ನಿಮ್ಮ ಬದ್ಧತೆಗೆ ಧನ್ಯವಾದಗಳು! ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. ತಮ್ಮ ನಾಯಕತ್ವ ಮತ್ತು ಕರ್ನಾಟಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ನಿಮ್ಮ ಬದ್ಧತೆಗೆ ಧನ್ಯವಾದಗಳು! #BSY @BSYBJP @CMofKarnataka pic.twitter.com/5bkjs4oFzz
— Dr Sudhakar K (@mla_sudhakar) February 26, 2021