ಚಿಕ್ಕಬಳ್ಳಾಪುರ: ಮ್ಯಾಂಡಾಸ್ ಚಂಡಮಾರುತದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ತುಂತುತು ಮಳೆ, ಶೀತ ಗಾಳಿ, ಮಂಜು, ತಂಪಾದ ಹವಾಗುಣಕ್ಕೆ ಬೆಳೆದಿದ್ದ ಹೂಗಳು ಕೊಳೆಯುತ್ತವೆ ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹೂಗಳ ಬೆಲೆ ದಿಡೀರ್ ಇಳಿಕೆಯಾಗಿದೆ. ಇದರ ಜೊತೆಗೆ ಕೈಗೆ ಬಂದಿದ್ದ ರಾಗಿ ಬೆಳೆ ಜಮೀನಿನಲ್ಲಿಯೇ ಮೊಳಕೆಯೊಡೆಯಲು ಆರಂಭಿಸಿದ್ದು ಅದನ್ನೇ ನಂಬಿಕೊಂಡಿದ್ದ ರೈತರ ಪರದಾಟ ಹೇಳತೀರದು.
ಮಾರುಕಟ್ಟೆಯಲ್ಲಿ. ಹೂ ಬೆಳೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದ ರೈತರು, ಹೂ ಗಳನ್ನೆ ನಂಬಿಕೊಂಡು ಜೀವನ ಸಾಗಿಸುತ್ತಾರೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಳೆಯ ನೀರು ಹೂಗಳಲ್ಲಿ ಸೇರಿಕೊಂಡು ಹೂಗಳು ಕೊಳೆಯುತ್ತಿವೆ. ಕಳೆದ ನಾಲ್ಕೈದು ದಿನಗಳ ಹಿಂದೆ ಕೆ.ಜಿ ಹೂ ಗಳ ಬೆಲೆ 100 ರೂಪಾಯಿಯಿಂದ 300 ರೂಪಾಯಿ ಇದ್ದ ಹೂಗಳ ಬೆಲೆ ಇದೀಗ ಕೆ.ಜಿ ರೋಜ್ ಹೂ ಗೆ 40 ರೂಪಾಯಿ, ಸೇವಂತಿ ಹೂ 20 ರೂಪಾಯಿ, ಚೆಂಡು ಹೂ ಗೆ10 ರೂಪಾಯಿ ಆಗಿದೆ.
ಇಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಈ ಭಾರಿ ಸುಮಾರು 39 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹುಲುಸಾಗಿ ರಾಗಿ ಬೆಳೆಯಾಲಾಗಿತ್ತು. ಇನ್ನೇನು ವಾರ ಕಳೆದಿದ್ದರೆ ರಾಗಿ ಕಟಾವು ಮಾಡಿ ರಾಗಿಯನ್ನು ಮನೆ ತುಂಬಿಸಿಕೊಳ್ಳಬೇಕಾಗಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿದ ತುಂತುರು ಮಳೆ, ಗಾಳಿಗೆ ರಾಗಿ ನೆಲಕಚ್ಚಿದ್ದು. ರಾಗಿ ಗೊನೆಗಳು ಮೊಳಕೆಯೊಡೆಯುತ್ತಿದೆ.
ಇದನ್ನೂ ಓದಿ:Cyclone Alert: ಮಾಂಡೌಸ್ ಚಂಡಮಾರುತದ ಅಬ್ಬರದ ಬೆನ್ನಲ್ಲೇ ಮತ್ತೊಂದು ಸೈಕ್ಲೋನ್ ಭೀತಿ; ಹವಾಮಾನ ಇಲಾಖೆ ಅಲರ್ಟ್
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ, ರೈತರು ವರ್ಷವಿಡಿ ಕಷ್ಟ ಪಟ್ಟು ಬೆಳೆದ ಹೂ, ಹಣ್ಣು, ತರಕಾರಿಗಳಿಗೆ ಬೆಲೆ ಕುಸಿತವಾಗಿದ್ದರೆ ಇತ್ತ ಜಿಲ್ಲೆಯಾದ್ಯಂತ ರಾಗಿ ಫಸಲು ಮ್ಯಾಂಡಾಸ್ ಚಂಡಮಾರುತಕ್ಕೆ
ತತ್ತರಿಸಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
