ಶಿವಮೊಗ್ಗ: ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳಿಂದ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರು ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿ ಸಿಐಡಿ ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್ʼಶೀಟ್ ಅನ್ನು ಶಿವಮೊಗ್ಗ ಕೋರ್ಟ್ಗೆ ಸಲ್ಲಿಸಿದ್ದಾರೆ.
ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಆರೋಪ ಪಟ್ಟಿಯಲ್ಲಿ ನಿಗಮದ ಹಗರಣದಲ್ಲಿ ಒಂದಷ್ಟು ಹಣವನ್ನು ಚಂದ್ರಶೇಖರ್ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಚಂದ್ರಶೇಖರ್ ಅವರನ್ನು ಗೋವಾ ಮತ್ತು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಪದ್ಮನಾಭ್ ಮತ್ತು ಪರಶುರಾಮ್ ಒತ್ತಡ ಹಾಕಿದ್ದರು. ನೀನು ಹಣವನ್ನು ಪಡೆದುಕೊಂಡಿದ್ದಿ. ಪ್ರಕರಣ ಬೆಳಕಿಗೆ ಬಂದರೆ ನೀನೊಬ್ಬನೇ ಜೈಲಿಗೆ ಹೋಗಬೇಕಾಗುತ್ತದೆ. ನಿನ್ನ ವಿರುದ್ಧ ನಾವೇ ದೂರು ಕೊಡುತ್ತೇನೆ ಎಂದು ಭಯಬೀಳಿಸಿದ್ದರು.
ಜೈಲಿಗೆ ಹೋಗಬಹುದು ಎಂಬ ಭಯಕ್ಕೆ ಬಿದ್ದು ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. 300 ಪುಟಗಳ ದೋಷಾರೋಪ ಪಟ್ಟಿಗೆ ಚಂದ್ರಶೇಖರ್ ಪತ್ನಿ ಮತ್ತು ನಿಗಮದ ಅಧಿಕಾರಿಗಳನ್ನು ಎಸ್ ಐಟಿ ಸಾಕ್ಷ್ಯವನ್ನಾಗಿ ಮಾಡಿದೆ. ಈ ಪ್ರಕರಣದಲ್ಲೂ ನಾಗೇಂದ್ರ ಅವರ ಹೆಸರನ್ನು ಎಸ್‌ಐಟಿ ಕೈ ಬಿಟ್ಟಿದೆ.