Home Uncategorized Citroen: ನೆಕ್ಸಾನ್ ಇವಿ ಕಾರಿಗೆ ಪೈಪೋಟಿ ನೀಡಲಿದೆ ಸಿಟ್ರನ್ ಇ-ಸಿ3 ಇವಿ ಕಾರು

Citroen: ನೆಕ್ಸಾನ್ ಇವಿ ಕಾರಿಗೆ ಪೈಪೋಟಿ ನೀಡಲಿದೆ ಸಿಟ್ರನ್ ಇ-ಸಿ3 ಇವಿ ಕಾರು

18
0

ಭಾರತದಲ್ಲಿ ಹೆಚ್ಚುತ್ತಿರುವ ಇವಿ ಕಾರುಗಳಿಗೆ ಪೈಪೋಟಿಯಾಗಿ ಸಿಟ್ರನ್ ಇಂಡಿಯಾ(Citroen India) ಕೂಡಾ ಹೊಸ ಎಲೆಕ್ಟ್ರಿಕ್ ಕಾರು(Electric Car) ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಸಿ3 ಮಾದರಿಯನ್ನು ಆಧರಿಸಿರುವ ಹೊಸ ಇವಿ ಕಾರು ಟಾಟಾ ನೆಕ್ಸಾನ್ ಇವಿ ಕಾರಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿ ಸಿ3 ಮತ್ತು ಸಿ5 ಏರ್ ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಸಿಟ್ರನ್ ಕಂಪನಿಯು ಇದೀಗ ಇವಿ ಕಾರುಗಳತ್ತ ಗಮನಹರಿಸಿದ್ದು, ಹೊಸ ಇವಿ ಕಾರು ಬಿಡುಗಡೆಗಾಗಿ ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೂ ಸಹ ಚಾಲನೆ ನೀಡಿದೆ.

ಯುರೋಪ್ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಸಿಟ್ರನ್ ಕಂಪನಿಯು ಇದೀಗ ಭಾರತದಲ್ಲೂ ತನ್ನ ಹೊಸ ಕಾರು ಉತ್ಪನ್ನಗಳೊಂದಿಗೆ ಗಮನಸೆಳೆಯುತ್ತಿದೆ. ಇದರೊಂದಿಗೆ ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಾಗಿ ಸಿಟ್ರನ್ ಕಂಪನಿಯು ಪ್ರತ್ಯೇಕ ಪ್ಲ್ಯಾಟ್ ಫಾರ್ಮ್ ಸಿದ್ದಪಡಿಸುತ್ತಿದ್ದು, ಹೊಸ ಇವಿ ಕಾರುಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡಿ ಜಾಗತಿಕ ಮಾರುಕಟ್ಟೆಗಳಿಗೂ ರಫ್ತು ಮಾಡುವ ಯೋಜನೆ ಹೊಂದಿದೆ. ಹೀಗಾಗಿ ಹೊಸ ಕಾರನ್ನು ಕಂಪನಿ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಫೀಚರ್ಸ್ ನೊಂದಿಗೆ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಎಂಟ್ರಿ ಇವಿ ಕಾರುಗಳಿಂತಲೂ ಕಡಿಮೆ ಬೆಲೆಯೊಂದಿಗೆ ಹೆಚ್ಚು ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ಸಿಟ್ರನ್ ಕಂಪನಿಯು ಹೊಸ ಇವಿ ಕಾರು ಮಾದರಿಯನ್ನ ಇ ಸಿ3 ಹೆಸರಿನಿಂದ ಕರೆಯಲಿದ್ದು, ಇದು 30.2kWh ಬ್ಯಾಟರಿ ಪ್ಯಾಕ್ ಹೊಂದುವ ಸಾಧ್ಯತೆಗಳಿವೆ. ಹೊಸ ಕಾರಿನ ಬ್ಯಾಟರಿ ಪ್ಯಾಕ್ ಅನ್ನು ಸಿಟ್ರನ್ ಕಂಪನಿಯು ಚೀನಾ ಮೂಲದ ಎಸ್ ವೊಲ್ಟ್ ಕಂಪನಿಯಿಂದ ಎರವಲು ಪಡೆದುಕೊಳ್ಳುತ್ತಿದೆ. ಇದು ಪ್ರತಿ ಚಾರ್ಜ್ ಗೆ 320 ರಿಂದ 350 ಕಿ.ಮೀ ಮೈಲೇಜ್ ನೀಡಬಹುದಾಗಿದ್ದು, ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದೆ. ಫ್ರಂಟ್ ಆಕ್ಸೆಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿರುವ ಹೊಸ ಕಾರು 63 ಕೆವಿ ಪವರ್ ಉತ್ಪಾದನೆಯೊಂದಿಗೆ 143 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸದ್ಯ ಹೊಸ ಇವಿ ಬಿಡುಗಡೆ ಯೋಜನೆಯ ಕುರಿತಾಗಿ ಮಾತ್ರ ಮಾಹಿತಿ ಹಂಚಿಕೊಂಡಿರುವ ಸಿಟ್ರನ್ ಕಂಪನಿಯು ಮುಂದಿನ ತಿಂಗಳು ಜನವರಿಯಲ್ಲಿ ಹೊಸ ಕಾರನ್ನು ಅನಾವರಣಗೊಳಿಸುವ ಯೋಜನೆಯಲ್ಲಿದೆ. ಜನವರಿ 13ರಿಂದ ನಡೆಯಲಿರುವ 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಇ ಸಿ3 ಕಾರು ಅನಾವರಣಗೊಳ್ಳಲಿದ್ದು, ಹೊಸ ಕಾರು ರೂ. 10 ಲಕ್ಷ ಬಜೆಟ್ ನಲ್ಲಿ ಲಭ್ಯವಾಗುವ ನೀರಿಕ್ಷೆಯಿದೆ. ಹೊಸ ಕಾರನ್ನು ಬಜೆಟ್ ಮಾದರಿಯಾಗಿಸಲು ಕಂಪನಿಯು ಹಲವಾರು ಲೋಕಲೈಜ್ ಬಿಡಿಭಾಗಗಳನ್ನು ಬಳಕೆ ಮಾಡುತ್ತಿದ್ದು, ಎಂಟ್ರಿ ಲೆವಲ್ ಇವಿ ಕಾರುಗಳಲ್ಲಿ ಹೊಸ ಇಸಿ3 ಕಾರು ಹೊಸ ಸಂಚಲನ ಮೂಡಿಸಲಿದೆ.

LEAVE A REPLY

Please enter your comment!
Please enter your name here