ಬೆಂಗಳೂರು:
“ವಿಶ್ವಗುರು ಬಸವೇಶ್ವರ ಜಯಂತಿ” ಅಂಗವಾಗಿ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಇಂದು ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಸಂಸದರು ಪಿ.ಸಿ.ಮೋಹನ್, ಗೃಹ ಸಚಿವರು ಬಸವರಾಜ್ ಬೊಮ್ಮಾಯಿ, ಬಿಡಿಎ ಅಧ್ಯಕ್ಷರು ಎಸ್.ಆರ್.ವಿಶ್ವನಾಥ್, ಆಡಳಿತಗಾರರು ರಾಕೇಶ್ ಸಿಂಗ್, ಮುಖ್ಯ ಆಯುಕ್ತರು ಗೌರವ್ ಗುಪ್ತ ರವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬಸವ ಜಯಂತಿ ಅಂಗವಾಗಿ ಇಂದು ನಿವಾಸದಲ್ಲಿ ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪ ನಮನ ಸಲ್ಲಿಸಿ, ನಂತರ ನಗರದ ಬಸವೇಶ್ವರ ವೃತ್ತದಲ್ಲಿರುವ ಅಣ್ಣ ಬಸವಣ್ಣನವರ ಭವ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನಗಳನ್ನು ಸಲ್ಲಿಸಲಾಯಿತು.
— B.S. Yediyurappa (@BSYBJP) May 14, 2021
ಬೇಲಿ ಮಠದ ಪೂಜ್ಯ ಶ್ರೀ ಶಿವರುದ್ರ ಸ್ವಾಮೀಜಿ, ಸಚಿವರು, ಗಣ್ಯರು ಉಪಸ್ಥಿತರಿದ್ದರು. pic.twitter.com/7af76lNHHR