ಬೆಂಗಳೂರು: ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ಲ್ಯಾನ್ ಮಾಡಿದ್ದಾರೆ.
ಪಕ್ಷದ ಶಾಸಕರು, ಎಂಎಲ್ಸಿ, ಜಿಲ್ಲಾಧ್ಯಕ್ಷರು ಸಂಪರ್ಕ ಮಾಡಿರುವ ಇಬ್ರಾಹಿಂ, ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ತತ್ವ ಸಿದ್ದಾಂತಕ್ಕೆ ಧಕ್ಕೆ ಆಗಲಿದೆ. ಜಾತ್ಯಾತೀತ ಪಕ್ಷವನ್ನು ಉಳಿಸಬೇಕಿದೆ. ನಮ್ಮ ಅಭಿಪ್ರಾಯಕ್ಕೆ ಕೇಳದೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾತ್ಯಾತೀತ ತತ್ವ ಸಿದ್ದಾಂತವು ಉಳಿಸಲು ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಜೊತೆಗೆ ಜೆಡಿಎಸ್ ಪಕ್ಷ ಇರುವ ಕೇರಳ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಸೇರಿ ಹಲವು ಜೆಡಿಎಸ್ ಘಟಕ ಅಧ್ಯಕ್ಷರನ್ನು ಸಂಪರ್ಕ ಮಾಡಿ ಅ. 16 ರಂದು ಬೆಂಗಳೂರಿನಲ್ಲಿ ನಡೆಯುವ ತಮ್ಮ ಸಭೆಗೆ ಆಹ್ವಾನ ನೀಡಿದ್ದಾರೆ.
The post CM Ibrahim Plan: ಮೈತ್ರಿಗೆ ಟಕ್ಕರ್ ಕೊಡಲು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ಲ್ಯಾನ್ appeared first on Ain Live News.