
CM Siddaramaiah announced tax exemption for film 'Daredevil Musthafa'
ಬೆಂಗಳೂರು:
ಕನ್ನಡದ ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಕಥೆಯೊಂದನ್ನು ಆಯ್ದು ನಿರ್ದೇಶಕ ಶಶಾಂಕ್ ಸೋಗಲ್ ಅವರು ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾವು ನೋಡುಗರ ವಲಯದಲ್ಲಿ ಮೆಚ್ಚುಗೆ ಗಳಿಸಿದೆ. ವ್ಯಾಪಕ ವಿಮರ್ಶಗೆ ಸಹ ಒಳಗಾಗಿದೆ.
ಚಿತ್ರದ ತಂಡವು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತೆರಿಗೆ ವಿನಾಯತಿಗೆ ಮನವಿ ಮಾಡಿತ್ತು. ಕೋಮುಸಾಮರಸ್ಯ ಮತ್ತು ಭಾವೈಕ್ಯತೆಯ ಸಂದೇಶ ಸಾರುವ ಸಿನಿಮಾವನ್ನು ಇನ್ನಷ್ಟು ಜನರು ಮತ್ತು ಶಾಲಾ ಮಕ್ಕಳು ನೋಡಲು ಸಹಕಾರಿಯಾಗುವಂತೆ ಮಾಡಲು ತೆರಿಗೆ ವಿನಾಯತಿ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಚಿತ್ರತಂಡದ ಮನವಿಗೆ ಸಿಎಂ ಸ್ಪಂದಿಸಿದ್ದಾರೆ.