ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದ ಸಹಕಾರಿ ವಲಯ, ಕೃಷಿ ಸಾಲ ವಿತರಣಾ ಗುರಿ, ನಷ್ಟದಲ್ಲಿರುವ ಸಂಘಗಳು ಮತ್ತು ನಾಬಾರ್ಡ್ ಸಾಲ ಕುರಿತು ಪ್ರಮುಖ ತೀರ್ಮಾನಗಳು ಕೈಗೊಳ್ಳಲಾಯಿತು.
- ಈ ಸಾಲಿನಲ್ಲಿ 37 ಲಕ್ಷ ರೈತರಿಗೆ ₹28,000 ಕೋಟಿ ಸಾಲ ವಿತರಣೆ ಗುರಿ, ಈಗಾಗಲೇ 8.69 ಲಕ್ಷ ರೈತರಿಗೆ ₹8,362 ಕೋಟಿ ಸಾಲ ವಿತರಣೆ.
- ನಾಬಾರ್ಡ್ ಬಡ್ಡಿ ರಿಯಾಯಿತಿ ಸಾಲ ಮಿತಿ 42% ಕಡಿತ, ಆದರೂ 96% ಸಾಧನೆ; 2024-25ರಲ್ಲಿ 29.75 ಲಕ್ಷ ರೈತರಿಗೆ ₹25,939 ಕೋಟಿ ಕೃಷಿ ಸಾಲ.
- ರಾಜ್ಯದ 28,516 ಸಹಕಾರಿ ಸಂಘಗಳಲ್ಲಿ 14,670 ನಷ್ಟದಲ್ಲಿ, ಸಾಲ ವಸೂಲಿ ವಿಫಲ; 2,200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ.
- ಕನ್ನಡ ಸಾಹಿತ್ಯ ಪರಿಷತ್ ಅವ್ಯವಹಾರ ತನಿಖೆ, ಕಾನೂನು ಪ್ರಕಾರ ಕ್ರಮಕ್ಕೆ ಸಿಎಂ ಸೂಚನೆ.
- 126 ಹಿರಿಯ ನಿರೀಕ್ಷಕರ ಹುದ್ದೆ ಮತ್ತು 403 ನಿರೀಕ್ಷಕರ ಹುದ್ದೆ ಖಾಲಿ, ಶೀಘ್ರ ಭರ್ತಿ ಸೂಚನೆ.
- ಸಹಕಾರಿ ಕಚೇರಿಗಳ ಡಿಜಿಟಲೀಕರಣ ತ್ವರಿತಗೊಳಿಸಲು ನಿರ್ದೇಶನ.
- 7,074 ಗಿರವಿದಾರ ಸಂಸ್ಥೆಗಳು ಮತ್ತು 1,468 ಚೀಟಿ ಸಂಸ್ಥೆಗಳು ನೋಂದಾಯಿತ; ಅನಧಿಕೃತ ಸಂಸ್ಥೆಗಳ ವಿರುದ್ಧ ನಿಗಾ ಸೂಚನೆ.
“ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಿ, ರೈತರ ಹಿತಾಸಕ್ತಿ ಕಾಪಾಡಿ, ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.