
BJP has given government land to its organizations including RSS: Minister Dinesh Gundu Rao makes a serious allegation
ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಸರ್ಕಾರದ ಮೇಲೆ ಸಾಕಷ್ಟು ಹೊರ ಆಗುತ್ತಿದ್ದರೂ, ರಾಜ್ಯದ ಜನಸಾಮಾನ್ಯರ ಹೊರೆ ಇಳಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟರ್ ನಲ್ಲಿ ಬಿಜೆಪಿಗೆ ತಿರುಗೇಟು ನೀರುವ ಗುಂಡೂರಾವ್, ಕೇಂದ್ರ ಬಿಜೆಪಿ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ಬೆಲೆ ಏರಿಕೆ ಬಿಸಿ ಜನಸಾಮಾನ್ಯನಿಗೆ ತಟ್ಟಿದೆ. ಜನರ ಮೇಲಾಗಿರುವ ಬೆಲೆ ಏರಿಕೆಯ ಹೊರೆ ಕಡಿಮೆ ಮಾಡಲೆಂದೇ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನ ತರಬೇಕಾಯ್ತು ಎಂದು ಹೇಳಿಕೊಂಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಹಿಳೊಯೊಬ್ಬಳು ಅಕ್ಕಿ ಬೇಳೆ ಕಾಳುಗಳ ಬೆಲೆ ಏರಿಕೆ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು. ಮಹಿಳೆಯ ವಿಡಿಯೋವನ್ನ ಟ್ವೀಟ್ ಮಾಡಿದ್ದ ಬಿಜೆಪಿ ಸರ್ಕಾರದ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿತ್ತು.
ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಲೆ ಏರಿಕೆ ಕೇಂದ್ರ ಬಿಜೆಪಿ ಸರ್ಕಾರದ ಕುರುಡು ಆರ್ಥಿಕ ನೀತಿಗಳಿಂದ ಆಗಿರುವುದು. ಬೆಲೆ ಏರಿಕೆಗೆ ಮೋದಿಯವರಲ್ಲದೇ ಬೇರೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಆತ್ಮಸಾಕ್ಷಿಯಿದ್ದರೆ ಬೆಲೆ ಏರಿಕೆಗೆ ಯಾರು ಕಾರಣ ಎಂದು ತಮ್ಮನ್ನ ತಾವು ಪ್ರಶ್ನಿಸಿಕೊಳ್ಳಲಿ ಎಂದಿದ್ದಾರೆ.

ಜನಸಾಮಾನ್ಯರಿಗೆ ನೇರವಾಗಿ ಬಿಸಿತಟ್ಟುವಂಥಹ ನಾಲ್ಕು ಉತ್ಪನ್ನಗಳ ಬೆಲೆ ಏರಿಕೆಯ ಲಿಸ್ಟ್ ಟ್ವೀಟ್ ಮಾಡಿರುವ ಗುಂಡೂರಾವ್ ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. 65 ರೂ ಇದ್ದ ಪೆಟ್ರೋಲ್ 103 ಆಯ್ತು, 50 ರೂ ಇದ್ದ ಡಿಸೇಲ್ 90 ರೂಪಾಯಿಗೆ ಏರಿಸಿದ್ರು. 80 ರೂಪಾಯಿ ಇದ್ದ ಅಡುಗೆ ಎಣ್ಣೆ 170ಕ್ಕೆ, 400 ರೂ ಇದ್ದ ಸಿಲೆಂಡರ್ ಗ್ಯಾಸ್ 1150 ರೂಗೆ ಏರಿಸಿದ್ದು ನಾವಾ ಮೋದಿಯವರಾ ಎಂದು ಬಿಜೆಪಿಯನ್ನ ಪ್ರಶ್ನಿಸಿದ್ದಾರೆ.
ಇಷ್ಟೊಂದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯನ ಹೊರ ಇಳಿಸಲೆಂದೇ ಕಾಂಗ್ರೆಸ್ ಸರ್ಕಾರ ಗೃಹ ಲಕ್ಷ್ಮೀ, ಅನ್ನಭಾಗ್ಯ, ಗೃಹ ಜ್ಯೋತಿಯಂಥಹ ಕಾರ್ಯಕ್ರಮಗಳನ್ನ ತರಬೇಕಾಯ್ತು ಎಂದು ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ. ಐದು ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗಬಹುದು. ಆದರೆ, ಜನರನ್ನ ಬೆಲೆ ಏರಿಕೆಯಿಂದ ರಕ್ಷಿಸುವುದು ಮುಖ್ಯವಾಗಿದೆ ಎಂದು ಗಂಡುರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮಹಿಳೆಯರು ಬಿಜೆಪಿ ವಿರುದ್ಧ ತಿರುಗಿಬಿದ್ದು ಫಲಿತಾಂಶವನ್ನು ಕೊಟ್ಟಿದ್ದಾರೆ. ಕರ್ನಾಟಕ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬೆಲೆ ಏರಿಕೆ ವಿರುದ್ಧ ಮಹಿಳೆಯರ ಸಿಟ್ಟು ಸೆಡವು ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಿರುವಾಗ ಬಿಜೆಪಿ ಆಕಾಶಕ್ಕೆ ಉಗುಳುವ ಮೂರ್ಖತನ್ನ ಏಕೆ ಮಾಡುತ್ತಿದೆ ಎಂದು ಗುಂಡೂರಾವ್ ಬಿಜೆಪಿ ತಿರುಗೇಟು ನೀಡಿದ್ದಾರೆ.