ಬೆಂಗಳೂರು:
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾಂಗ್ರೆಸ್ ಸೋಲಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್ ಪಕ್ಷ ಮನೆಯೊಂದು ಎರಡು ಬಾಗಿಲು ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪು ಇದೆ. ಆರ್ ಆರ್ ನಗರದಲ್ಲಿ ನಮಗೆ ಲೀಡ್ ಬರಲು ಸಿದ್ದರಾಮಯ್ಯ ಕಾರಣ. ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಸೋಲಬೇಕೆಂದು ಸಿದ್ದರಾಮಯ್ಯ ಯೋಜನೆ ರೂಪಿಸಿದ್ದರು. ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಡಿ ಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದರು ಎಂದರು.
ಅಖಂಡ ಶ್ರೀನಿವಾಸ್ ಮೂರ್ತಿ ಪರಿಸ್ಥಿತಿ ನೋಡಿದರೆ ತಮಗೆ ಮರುಕ ಉಂಟಾಗುತ್ತದೆ. ಅಖಂಡ ಅವರನ್ನು ಕೊಲೆ ಮಾಡುವುದಕ್ಕೆ ಹೋದವರು, ಅಖಂಡ ಮನೆಗೆ ಬೆಂಕಿ ಹಾಕಿದ್ದರು. ಬೆಂಗಳೂರಿಗೆ ಡಿ ಜೆ ಹಳ್ಳಿ ಪ್ರಕರಣ ಕಪ್ಪು ಚುಕ್ಕೆ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪು ಇದೆ. ಸಿದ್ದರಾಮಯ್ಯ ಬಣದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಇದ್ದಾರೆ. ಡಿ ಕೆ ಶಿವಕುಮಾರ್ ಬಣದಲ್ಲಿ ಸಂಪತ್ ರಾಜ್ ಇದ್ದಾರೆ. ಹೀಗಾಗಿ ಅಖಂಡ ಶ್ರೀನಿವಾಸ್ ಮೂರ್ತಿ ಗೆ ರಕ್ಷಣೆ ಕೊಡುತ್ತಿಲ್ಲ. ಅಖಂಡ ಶ್ರೀನಿವಾಸ್ ಮೂರ್ತಿಗೆ ಸರ್ಕಾರದಿಂದ ಎಲ್ಲ ಸಹಕಾರ ಸಿಗಲಿದೆ ಎಂದು ಅಶೋಕ್ ಹೇಳಿದರು.
ಸಂಪತ್ ರಾಜ್ ಮನೆಯಲ್ಲಿ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಪೊಲೀಸರು ಅವರ ಮನೆ ಬಳಿ ಇದ್ದಾರೆ. ತಾವು ಕೂಡ ಪೊಲೀಸರಿಗೆ ಮನೆಯಲ್ಲಿ ಶೋಧಿಸಲು ಹೇಳುತ್ತೇನೆ ಎಂದರು.