Home ಬೆಂಗಳೂರು ನಗರ ಬ್ರಾಹ್ಮಣ ಸಮುದಾಯ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷ ಸಹಾಯ,ಸಹಕಾರ ನೀಡಲಿದೆ-ದಿನೇಶ್ ಗುಂಡೂರಾವ್

ಬ್ರಾಹ್ಮಣ ಸಮುದಾಯ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷ ಸಹಾಯ,ಸಹಕಾರ ನೀಡಲಿದೆ-ದಿನೇಶ್ ಗುಂಡೂರಾವ್

54
0
Congress party will provide help and cooperation for development of Brahmin community in Karnataka - Minister Dinesh Gundurao
Congress party will provide help and cooperation for development of Brahmin community in Karnataka - Minister Dinesh Gundurao

ಬಸವನಗುಡಿ (ಬೆಂಗಳೂರು):

ಎ.ಪಿ.ಎಸ್.ಕಾಲೇಜು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ವತಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಶೀಲರಾದ ವಿಪ್ರ ಶಾಸಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ದಿವ್ಯ ಸಾನಿದ್ಯ ಶ್ರೀ ಯದುಗಿರಿ ನಾರಾಯಣ ರಾಮಾನುಜ ಜೀಯರ್ ಮಹಾಸ್ವಾಮಿಗಳು, ಅಧ್ಯಕ್ಷರಾದ ಆಶೋಕ್ ಹಾರನಹಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ , ಶಾಸಕರುಗಳಾದ ಆರ್.ವಿ.ದೇಶಪಾಂಡೆ, ರವಿಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ, ಉದಯ್ ಗರುಡಾಚಾರ್, ಶ್ರೀವತ್ಸ, ವಿಶ್ವಾಸ್ ವೈದ್ಯರವರುಗಳಿಗೆ ಸನ್ಮಾನಿಸಲಾಯಿತು.

ಯದುಗಿರಿ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಗಳು ಮಾತನಾಡಿ ಕರ್ನಾಟಕ ಬ್ರಾಹ್ಮಣ ಮಹಾಸಭಾ ತ್ರಿಮತಸ್ಥ ಬ್ರಾಹ್ಮಣರನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ.

ಶಂಕರಚಾರ್ಯ, ರಾಮಾನುಜ,ಮಧ್ವಚಾರ್ಯರವರು ಸಿದ್ದಾಂತ ಪ್ರತಿಪಾದನೆಯಲ್ಲಿ ರಾಷ್ಟ್ರ ಚನ್ನಾಗಿರಲಿ ,ಮನುಕುಲ ಉದ್ದರಕ್ಕೆ ಪ್ರತಿಪಾದಿಸಿದರು.

ಶಂಕರಚಾರ್ಯರಿಂದ ವೇದ ಉದ್ದರವಾಯಿತು. ಬ್ರಾಹ್ಮಣರು ಸ್ವಾರ್ಥಿಗಳಲ್ಲ, ಪರ ಹಿತಬಯಸುವವರು. ಸಮಾಜದಲ್ಲಿ ಉತ್ತಮ, ಸೌಹರ್ದ ನಿರ್ಮಾಣಕ್ಕೆ ಪ್ರಯತ್ನ ಪಟ್ಟರು ಎಂದರು.

insi

ಸಚಿವರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ ನಮ್ಮ ಸಮಾಜದ ವಿಚಾರ ಬಂದರೆ ನಾವೆಲ್ಲರು ಒಗ್ಗಾಟಗಿ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.

ಬ್ರಾಹ್ಮಣ ಸಮುದಾಯದಲ್ಲಿ ಡೊಡ್ಡ ವ್ಯಕ್ತಿಗಳು ಬಹಳ ಜನ ಇದ್ದಾರೆ, ವಿಪ್ರ ಸಮುದಾಯದ ಅಭಿವೃದ್ದಿಗೆ ಅವರು ಕೈಜೋಡಿಸಬೇಕು ಎಂದರು.

ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿ ಅನುದಾನ ತಂದು ಅದ್ದರಿಂದ ಸಮುದಾಯದವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಐದು ವರ್ಷ ಇರುತ್ತದೆ, ಬ್ರಾಹ್ಮಣ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಸರ್ಕಾರ ಸಹಾಯ, ಸಹಕಾರ ನೀಡಲಿದೆ ಎಂದು ಹೇಳಿದರು.

ಅಶೋಕ್ ಹಾರನಹಳ್ಳಿರವರು ಮಾತನಾಡಿ ರಾಜಕಾರಣದಲ್ಲಿ ಬ್ರಾಹ್ಮಣರು ಬರುವುದು ಕಷ್ಟಕರ ಅದರು ಇಂತಹ ಪೈಪೋಟಿಯಲ್ಲಿ 11ಜನ ನಮ್ಮ ಸಮುದಾಯದವರು ಗೆದ್ದಿರುವುದು ಸಂತೋಷಕರ ಸಂಗತಿ ಎಂದರು.

ಬ್ರಾಹ್ಮಣರು ಜಾತಿ ಭೇದಬಾವ ಮಾಡುವುದಿಲ್ಲ, ವಿಶ್ವದಲ್ಲಿ ಇರುವವರು ಎಲ್ಲರು ಒಂದೇ ಎಂದು ಬಾಳುತ್ತಾರೆ. ವಿಪ್ರ ಶಾಸಕರು ಒಳ್ಳೆಯ ಕೆಲಸ ಮಾಡಿ, ನಾವು ಜಾತಿ ರಾಜಕಾರಣ ಮಾಡುವುದಿಲ್ಲ. ನಮ್ಮ ವಿಪ್ರರು ಎಲ್ಲಿ ಇದ್ದರು ಅವರ ಒಳ್ಳೆಯ ಕೆಲಸ ಮಾಡುತ್ತಾರೆ ಅದ್ದರಿಂದ ಗೌರವ ಸನ್ಮಾನ ಮಾಡಲಾಗುತ್ತಿದೆ ಎಂದರು.

ಸುದ್ದಿ ಮೂಲ: ಶೇಷ ನಾರಾಯಣ, ಪತ್ರಕರ್ತ

LEAVE A REPLY

Please enter your comment!
Please enter your name here