ಬೆಂಗಳೂರು: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ ಬ್ಯಾಂಕ್) ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಸಾಧನೆ ಮಾಡಿದ್ದು, 18 ಕ್ಷೇತ್ರಗಳಲ್ಲಿ 15 ಸ್ಥಾನಗಳನ್ನು ಗೆದ್ದಿದೆ ಎಂದು ಬಮೂಲ್ ಅಧ್ಯಕ್ಷ ಹಾಗೂ ಚಾಮರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಕೆ ಸುರೇಶ್ ಮಾಹಿತಿ ನೀಡಿದರು.
ವಿಭಾಗವಾರು ಗೆಲುವಿನ ವಿವರಗಳು
ಡಿಕೆ ಸುರೇಶ್ ನೀಡಿದ ಮಾಹಿತಿ ಪ್ರಕಾರ:
ಬೆಂಗಳೂರು ದಕ್ಷಿಣ ಜಿಲ್ಲೆ
- ರಾಮನಗರ – 2 ಸ್ಥಾನಗಳು
- ಚನ್ನಪಟ್ಟಣ – 1 ಸ್ಥಾನ
- ಕನಕಪುರ – 2 ಸ್ಥಾನಗಳು
- ಮಾಗಡಿ – 2 ಸ್ಥಾನಗಳು
ಬೆಂಗಳೂರು ಉತ್ತರ ಜಿಲ್ಲೆ
- ಹೊಸಕೋಟೆ – 2 ಸ್ಥಾನಗಳು
- ದೇವನಹಳ್ಳಿ – 1 ಸ್ಥಾನ
- ದೊಡ್ಡಬಳ್ಳಾಪುರ – 1 ಸ್ಥಾನ
- ಆನೇಕಲ್ – 1 ಸ್ಥಾನ
- ಹೆಚ್.ಎಂ. ರೇವಣ್ಣ ಸಹಕಾರದೊಂದಿಗೆ – 1 ಸ್ಥಾನ
ಇದರೊಂದಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಒಟ್ಟು 15 ಸ್ಥಾನಗಳನ್ನು ಪಡೆದಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು
- ನೆಲಮಂಗಲ – 1 ಸ್ಥಾನ
- ಸೋಲೂರು – 1 ಸ್ಥಾನ
ಈ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ತಾಂತ್ರಿಕ ಬೆಂಬಲ BJPಗೆ ಲಭಿಸಿದೆ ಎಂದು ಸುರೇಶ್ ಹೇಳಿದರು.
ಕಾಂಗ್ರೆಸ್ ನಾಯಕರ ಪಾತ್ರಕ್ಕೆ ಸುರೇಶ್ ಮೆಚ್ಚುಗೆ
ಸುರೇಶ್ ಅವರು ಸಚಿವರಾದ ರಾಮಲಿಂಗಾರೆಡ್ಡಿ, ಕೆ. ಹೆಚ್. ಮುನಿಯಪ್ಪ, ಕೃಷ್ಣ ಭೈರೇಗೌಡ ಮತ್ತು ಶಾಸಕರಾದ
ಶಿವಣ್ಣ, ಶರತ್ ಬಚ್ಚೇಗೌಡ, ಇಕ್ಬಾಲ್ ಹುಸೇನ್, ಬಾಲಕೃಷ್ಣ, ಸಿ.ಪಿ ಯೋಗೇಶ್ವರ್, ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರ ಸಹಕಾರ ಈ ಗೆಲುವಿಗೆ ಕಾರಣವಾಯಿತು ಎಂದು ಹೇಳಿದರು.
“ಪಕ್ಷದ ಮುಖಂಡರು, ಸಚಿವರು, ಶಾಸಕರು, ಅಭ್ಯರ್ಥಿಗಳು ಹಾಗೂ ಸಹಕಾರಿ ಕ್ಷೇತ್ರದ ಬಂಧುಗಳಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದರು.
ಬಿಡಿಸಿಸಿ ಬ್ಯಾಂಕ್– ಐತಿಹಾಸಿಕ ಸಂಸ್ಥೆ
“ರಾಜ್ಯದ ರಾಜಧಾನಿಯಲ್ಲಿರುವ ಪ್ರಮುಖ ಸಹಕಾರ ಬ್ಯಾಂಕ್ ಇದಾಗಿದೆ. 36 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಈ ಬ್ಯಾಂಕ್ ಅನೇಕ ಏರುಬೀರುಗಳ ನಡುವೆ ಉತ್ತಮ ಆಡಳಿತ ನಡೆಸಿಕೊಂಡು ಬಂದಿದೆ,” ಎಂದು ಸುರೇಶ್ ವಿವರಿಸಿದರು.
ಹೊಸ ಆಡಳಿತ ಮಂಡಳಿ ರೈತರು ಹಾಗೂ ನಾಗರಿಕರಿಗೆ ಹೆಚ್ಚಿನ ಗುಣಮಟ್ಟದ ಸೇವೆ ನೀಡಲು ಬದ್ಧವಾಗಿದೆ ಎಂದರು.
