Home Uncategorized Constitution Day 2022: ಸಂವಿಧಾನವೇ ಭಾರತದ ಶಕ್ತಿ; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

Constitution Day 2022: ಸಂವಿಧಾನವೇ ಭಾರತದ ಶಕ್ತಿ; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

29
0

ನವದೆಹಲಿ: ಸಂವಿಧಾನವೇ (Indian Constitution) ಭಾರತದ ಬಹುದೊಡ್ಡ ಶಕ್ತಿ. ಭಾರತವು (India) ಪ್ರಜಾಪ್ರಭುತ್ವದ ತಾಯಿ. ದೇಶದ ಸಂವಿಧಾನವು ಮುಕ್ತ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಸುಪ್ರೀಂಕೋರ್ಟ್‌ನಲ್ಲಿ (Supreme Court) ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯಕ್ತಿ ಆಗಿರಲಿ, ಸಂಸ್ಥೆ ಆಗಿರಲಿ ನಮ್ಮ ಕರ್ತವ್ಯಗಳಿಗೇ ಮೊದಲ ಆದ್ಯತೆ ನೀಡಬೇಕು ಎಂದರು.

ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಭಾರತದತ್ತ ದೃಷ್ಟಿ ನೆಟ್ಟಿದೆ. ದೇಶವು ವೇಗವಾಗಿ ಅಭಿವೃದ್ಧಿಹೊಂದುತ್ತಿದೆ. ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಹೊರಹೊಮ್ಮಿರುವುದು ಮತ್ತು ಜಾಗತಿಕವಾಗಿ ವರ್ಚಸ್ಸು ಹೆಚ್ಚುತ್ತಿರುವುದರಿಂದ ಇಡೀ ವಿಶ್ವವು ಭಾರತದ ಮೇಲಿಟ್ಟಿರುವ ನಿರೀಕ್ಷೆ ಹೆಚ್ಚಾಗಿದೆ ಎಂದು ಮೋದಿ ಹೇಳಿದರು.

ಹೊಸ ಅವಕಾಶಗಳು ಭಾರತದ ಮುಂದಿವೆ. ಎಲ್ಲ ಅಡೆತಡೆಗಳನ್ನು ಮೀರಿ ನಮ್ಮ ದೇಶ ಮುಂದಕ್ಕೆ ಸಾಗುತ್ತಿದೆ. ಇನ್ನು ಒಂದು ವಾರದಲ್ಲಿ ನಾವು ಜಿ-20 ದೇಶಗಳ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದೇವೆ. ನಾವೆಲ್ಲ ಜತೆಗೂಡಿ ವಿಶ್ವದ ಮುಂದೆ ಭಾರತದ ವರ್ಚಸ್ಸನ್ನು ಹೆಚ್ಚಿಸಬೇಕು. ಇದು ನಮ್ಮ ಸಾಮೂಹಿಕ ಕರ್ತವ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

ಮಂಬೈ ದಾಳಿ ಸಂತ್ರಸ್ತರಿಗ ನಮನ

ಇಂದು ಮುಂಬೈ ಭಯೋತ್ಪಾದಕ ದಾಳಿಗೆ 14 ವರ್ಷ. ಭಾರತವು ತನ್ನ ಸಂವಿಧಾನ ಮತ್ತು ನಾಗರಿಕರ ಹಕ್ಕುಗಳನ್ನು ಸಂಭ್ರಮಿಸುತ್ತಿರುವ ಸಂದರ್ಭದಲ್ಲೇ, ಮಾನವೀಯತೆಯ ಶತ್ರುಗಳು ಭಾರತದ ಮೇಲೆ ಅತಿದೊಡ್ಡ ದಾಳಿಯನ್ನು ನಡೆಸಿದರು. ದಾಳಿಯಲ್ಲಿ ಜೀವ ಕಳೆದುಕೊಂಡವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.

ಸಂವಿಧಾನ ಶಿಲ್ಪಿಗೆ ನಮೋ ಎಂದ ಮೋದಿ

ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವುದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಮೋದಿ, ‘ಇಂದು ಸಂವಿಧಾನ ದಿನ. ನಮಗೆ ಸಂವಿಧಾನ ರೂಪಿಸಿಕೊಟ್ಟವರಿಗೆ ಗೌರವ ಸಲ್ಲಿಸುತ್ತೇನೆ. ನಮ್ಮ ದೇಶಕ್ಕಾಗಿ ಅವರು ಹೊಂದಿದ್ದ ದೃಷ್ಟಿಕೋನವನ್ನು ಪೂರೈಸುವ ನಿಟ್ಟಿನಲ್ಲಿ ನಾವು ಬದ್ಧತೆಯನ್ನು ಪ್ರದರ್ಶಿಸಬೇಕಿದೆ’ ಎಂದು ಉಲ್ಲೇಖಿಸಿದ್ದರು.

Today, on Constitution Day, we pay homage to those greats who gave us our Constitution and reiterate our commitment to fulfil their vision for our nation. pic.twitter.com/eKVwA7NdaB

— Narendra Modi (@narendramodi) November 26, 2022

‘ಗುಜರಾತಿ ಭಾಷೆಯಲ್ಲಿ ಸಂವಿಧಾನ’

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂವಿಧಾನ ಮತ್ತು ಅದರ ನಿಬಂಧನೆಗಳನ್ನು ಸಾಮಾನ್ಯ ಜನರಿಗೆ ತಲುಪುವುಂತೆ ಮಾಡುವಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಕಾರ್ಯಪ್ರವೃತ್ತರಾಗಿದ್ದರು. 2010ರಲ್ಲಿ, ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ‘ಸಂವಿಧಾನ್ ಗೌರವ್’ ಯಾತ್ರೆಯನ್ನು ಆಯೋಜಿಸಿದ್ದರು. ಆಗಲೇ ಗುಜರಾತ್​ನ ಸುರೇಂದ್ರನಗರದಲ್ಲಿ ಸಂವಿಧಾನದ ಬೃಹತ್ ಪ್ರತಿಕೃತಿಯನ್ನು ಆನೆಯ ಮೇಲೆ ಹೊತ್ತು ಸಾಗಿದ ಐತಿಹಾಸಿಕ ಮೆರವಣಿಗೆ ನಡೆದಿತ್ತು. 2011ರಲ್ಲಿ, ಸಂವಿಧಾನದ ಗುಜರಾತಿ ಆವೃತ್ತಿಯನ್ನು ಪ್ರಾರಂಭಿಸಲಾಯಿತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

On #ConstitutionDay, a thread from the archives

“50 years of Constitution are complete. A nationwide discussion is needed on whether our Kartavya or our rights can lead the nation forward. How can nation-building become a mass movement in the next century?”

[Handwritten, 1999] pic.twitter.com/8NI88J6U3V

— Modi Archive (@modiarchive) November 26, 2022

ಈ ಮಧ್ಯೆ, 1999ರಲ್ಲಿ ಸಂವಿಧಾನಕ್ಕೆ ಸಂಬಂಧಿಸಿ ಮೋದಿ ಬರೆದಿದ್ದು ಎನ್ನಲಾದ ಕೈಬರಹದ ಪ್ರತಿಯೊಂದನ್ನು ‘ಮೋದಿ ಆರ್ಕೈವ್’ ಎಂಬ ಟ್ವಿಟರ್​ ಹ್ಯಾಂಡಲ್​ನಲ್ಲಿ ಹಂಚಿಕೊಳ್ಳಲಾಗಿದೆ. ‘ಸಂವಿಧಾನಕ್ಕೆ 50 ವರ್ಷಗಳು ಪೂರ್ಣಗೊಂಡಿವೆ. ನಮ್ಮ ಕರ್ತವ್ಯ ಅಥವಾ ನಮ್ಮ ಹಕ್ಕುಗಳು ರಾಷ್ಟ್ರವನ್ನು ಮುನ್ನಡೆಸಬಹುದೇ ಎಂಬ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯಾಗಬೇಕಾದ ಅಗತ್ಯವಿದೆ. ಮುಂದಿನ ಶತಮಾನದಲ್ಲಿ ರಾಷ್ಟ್ರನಿರ್ಮಾಣವು ಹೇಗೆ ಸಾಮೂಹಿಕ ಚಳವಳಿಯಾಗಬಹುದು?’ ಎಂದು ಮೋದಿ ಬರೆದಿದ್ದಾರೆ ಎನ್ನಲಾದ ಕೈಬರಹದ ಪ್ರತಿ ಟ್ವೀಟ್​ನಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here