Home ಅಪರಾಧ ಸೊಂಟದ ಬಳಿ ಗನ್ ಇಟ್ಟು ನಿರಂತರ ಅತ್ಯಾಚಾರ | ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ...

ಸೊಂಟದ ಬಳಿ ಗನ್ ಇಟ್ಟು ನಿರಂತರ ಅತ್ಯಾಚಾರ | ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ ಸಂತ್ರಸ್ತೆ

19
0
Prajwal Revanna

ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ದೂರು ಸಿಐಡಿ ಬಳಿ ದಾಖಲಾಗಿದೆ. 44 ವರ್ಷದ ಮಹಿಳೆಯೊಬ್ಬರ ಸೊಂಟದ ಬಳಿ ಗನ್ ಇಟ್ಟು ನಿರಂತರ ಅತ್ಯಾಚಾರವೆಸಗಿರುವ ಆರೋಪ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

ಕೆಲ ತಿಂಗಳ ಹಿಂದೆ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಕಚೇರಿ ಹಾಗೂ ಕ್ವಾರ್ಟರ್ಸ್‍ಗೆ ಹೋಗಿದ್ದೆ. ಮೊದಲ ದಿನ ಹೋದಾಗ ಸಂಸದ ಕೆಲಸ ನಿಮಿತ್ತ ಸ್ಥಳದಿಂದ ಹೊರಟು ಹೋಗಿದ್ದರು. ಮರುದಿನ ಬರುವಂತೆ ಹೇಳಿದ್ದರು. ಮರುದಿನ ಪುನಃ ಸಂಸದ ಪ್ರಜ್ವಲ್ ಕ್ವಾರ್ಟರ್ಸ್‍ಗೆ ಹೋಗಿದ್ದೆ. ಅಲ್ಲಿಂದ ಪ್ರಜ್ವಲ್ ಕಡೆಯವರು ನನ್ನನ್ನು ಮೊದಲ ಮಹಡಿಗೆ ಕಳುಹಿಸಿದ್ದರು. ಅಲ್ಲಿಯೂ ಕೆಲ ಮಹಿಳೆಯರು ಇದ್ದರು. ಸ್ಥಳಕ್ಕೆ ಬಂದಿದ್ದ ಪ್ರಜ್ವಲ್, ಇತರೆ ಮಹಿಳೆಯರನ್ನು ಮಾತನಾಡಿಸಿ ವಾಪಸು ಕಳುಹಿಸಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ನಾನು ಒಬ್ಬಳೇ ಉಳಿದುಕೊಂಡಿದ್ದೆ. ಎಲ್ಲರೂ ಹೋದ ನಂತರ, ನನ್ನ ಕೈ ಹಿಡಿದಿದ್ದ ಪ್ರಜ್ವಲ್, ಕೊಠಡಿಯೊಂದಕ್ಕೆ ಎಳೆದೊಯ್ದಿದ್ದರು. ಕೊಠಡಿ ಬಾಗಿಲು ಹಾಕಿಕೊಂಡು ಒಳಗಿನಿಂದ ಬಾಗಿಲು ಹಾಕಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ, ಏನು ಆಗೊಲ್ಲ ಎಂದಿದ್ದರು ಎಂದೂ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ನನ್ನ ಪತಿ ಬಗ್ಗೆಯೂ ಮಾತನಾಡಿದ್ದ ಪ್ರಜ್ವಲ್, ಅವರಿಂದಾಗಿ ತಮ್ಮ ತಾಯಿಗೆ ಎಂಎಲ್‍ಎ ಟಿಕೆಟ್ ತಪ್ಪಿತೆಂದು ಹೇಳಿದ್ದರು. ನಂತರ, ನನಗೆ ಬಟ್ಟೆ ಬಿಚ್ಚುವಂತೆ ಹಾಗೂ ಮಂಚದ ಮೇಲೆ ಮಲಗುವಂತೆ ಒತ್ತಾಯಪಡಿಸಿದ್ದರು. ಅದಕ್ಕೆ ಒಪ್ಪದಿದ್ದಾಗ, ನನ್ನ ಬಳಿ ಗನ್ ಇದೆ. ನಾನು ಹೇಳಿದಂತೆ ಕೇಳದಿದ್ದರೆ, ನಿನ್ನನ್ನು ಹಾಗೂ ನಿನ್ನ ಪತಿಯನ್ನು ಮುಗಿಸುತ್ತೇನೆ ಎಂದು ಪ್ರಜ್ವಲ್ ಬೆದರಿಸಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ.

ನಾನು ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಕೈಗಳನ್ನು ಬಿಗಿಯಾಗಿ ಹಿಡಿದಿದ್ದ. ನನ್ನ ಬಟ್ಟೆಗಳನ್ನು ಒತ್ತಾಯದಿಂದ ಬಿಚ್ಚಿಸಿದ್ದ. ಕೂಗುತ್ತೇನೆ ಎಂದಾಗ, ತನ್ನ ಮೊಬೈಲ್ ತೆಗೆದು ಚಿತ್ರೀಕರಣ ಮಾಡಿಕೊಂಡಿದ್ದ. ಅದೇ ವಿಡಿಯೊ ನನಗೆ ತೋರಿಸಿ, ನೀನು ನಾನು ಹೇಳಿದಂತೆ ಕೇಳದಿದ್ದರೆ, ವಿಡಿಯೊವನ್ನು ಎಲ್ಲರಿಗೂ ತೋರಿಸಿ ನಿನ್ನ ಮರ್ಯಾದೆ ಕಳೆಯುತ್ತೇನೆ ಎಂದೂ ಪ್ರಜ್ವಲ್ ಬೆದರಿಕೆವೊಡ್ಡಿದ್ದ ಎಂಬುದಾಗಿಯೂ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೊ ಮುಂದಿಟ್ಟುಕೊಂಡು ಪ್ರಜ್ವಲ್ ಹಲವು ಬಾರಿ ನನ್ನನ್ನು ಒತ್ತಾಯದಿಂದ ತಮ್ಮ ಕ್ವಾರ್ಟರ್ಸ್‍ಗೆ ಪದೇ ಪದೇ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ. ಜೊತೆಗೆ, ಆಗಾಗ ವಿಡಿಯೊ ಕರೆ ಮಾಡಿ ಬಟ್ಟೆ ಬಿಚ್ಚುವಂತೆಯೂ ಪೀಡಿಸಿದ್ದರು. ವಿಡಿಯೊ ಬ್ಲ್ಯಾಕ್‍ಮೇಲ್ ಹಾಗೂ ಪತಿಯನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದರಿಂದ, ಪ್ರಜ್ವಲ್ ಹೇಳಿದಂತೆ ಇಷ್ಟುದಿನ ಕೇಳಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.

ಇದೀಗ, ಪ್ರಜ್ವಲ್ ವಿರುದ್ಧ ಎಸ್‍ಐಟಿ ತನಿಖೆ ನಡೆಯುತ್ತಿದೆ. ಹೀಗಾಗಿ, ಎಸ್ ಐ ಟಿ ಎದುರು ಹಾಜರಾಗಿ ಹೇಳಿಕೆ ಕೊಟ್ಟು, ದೂರು ನೀಡುತ್ತಿದ್ದೇನೆ. ನನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದೂ ಮಹಿಳೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಮಹಿಳೆಯ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಪೊಲೀಸರು, ಎಫ್‍ಐಆರ್ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here