Home Uncategorized conversion: ಉತ್ತರ ಕನ್ನಡ; ಅನಾರೋಗ್ಯ ಗುಣಪಡಿಸುವ ಹೆಸರಿನಲ್ಲಿ ಪಾದ್ರಿಯಿಂದ ಮತಾಂತರ

conversion: ಉತ್ತರ ಕನ್ನಡ; ಅನಾರೋಗ್ಯ ಗುಣಪಡಿಸುವ ಹೆಸರಿನಲ್ಲಿ ಪಾದ್ರಿಯಿಂದ ಮತಾಂತರ

54
0

ಉತ್ತರ ಕನ್ನಡ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ (Anti conversion bill) ಜಾರಿಯಾಗಿದ್ದರೂ, ಮತಾಂತರ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ಮತಾಂತರ (conversion) ಪ್ರಕರಣ ವರದಿಯಾಗಿತ್ತು. ಇದೀಗ, ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಮಾತಾಂತರ ದಂಧೆ ಬೆಳಕಿಗೆ ಬಂದಿದೆ. ಅನಾರೋಗ್ಯ ಗುಣಪಡಿಸುವ ಹೆಸರಿನಲ್ಲಿ ಪಾದ್ರಿ ಮತಾಂತರ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಜೋಯಿಡಾ ತಾಲೂಕಿನ ಕುಂಬಾರವಾಡ ಮೂಲದ ಲಾರೆನ್ಸ್ ಫೆರ್ನಾಂಡಿಸ್ ಎಂಬ ಪಾದ್ರಿ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡುತ್ತಾನೆ. ಅಲ್ಲಿ ಅನಾರೋಗ್ಯ ಪೀಡಿತ ಮುಗ್ಧ ಬುಡಕಟ್ಟು ಜನರನ್ನು ಗುರಿಯಾಗಿಸಿಕೊಂಡು, ಗುಣಮುಖರಾಗಲು ಏಸುವನ್ನು ಆರಾಧಿಸುವಂತೆ ಹೇಳುತ್ತಾನೆ. ಹೀಗೆ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಕಾರ್ಯಕ್ರಮ ನಡೆಸಿ ಮುಗ್ದ ಜನರನ್ನು ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾನೆ ಎಂದು ಆರೋಪವಿದೆ.

ಇದನ್ನೂ ಓದಿ: ಹಾವೇರಿ: ಅರಣ್ಯ ಪ್ರದೇಶ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಾಗ ಪೊಲೀಸರು ಮಹಿಳೆ ಮತ್ತು ವೃದ್ಧರ ಮೇಲೆ ಮಾಡಿದ ಆರೋಪ

ಲಾರೆನ್ಸ್ ಜೋಯಿಡಾದ ಚಾಪೇಲಿ, ರಾಮನಗರ, ದಾಂಡೇಲಿ, ಭಟ್ಕಳ ಭಾಗದ ಗ್ರಾಮಗಳಲ್ಲಿ ಧರ್ಮ ಭೋದನೆಯ ಕಾರ್ಯಕ್ರಮ ಆಯೋಜಿಸಿದ್ದನು. ಲಾರೆನ್ಸ್ ಜೊಯಿಡಾದ ಚಾಪೇಲಿಯಲ್ಲಿ ಚರ್ಚ್ ನಿರ್ಮಿಸಲು ಸಿದ್ಧತೆ ಕೂಡ ಮಾಡಿಕೊಂಡಿದ್ದನು.

ಹಿಂದೂ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ ಲಾರೆನ್ಸ್​​ ನಡೆ

ಆರ್‌ಟಿಒ ಏಜೆಂಟ್ ಆಗಿದ್ದ ಲಾರೆನ್ಸ್‌ನಿಂದ ಇತ್ತೀಚೆಗೆ ಧರ್ಮ ಪ್ರಚಾರದ ಕಾರ್ಯ ಆರಂಭವಾಗಿದೆ. ಮೂಡನಂಭಿಕೆ ಹೆಸರಲ್ಲಿ ಮತಾಂತರ ಮಾಡಲಾಗುತ್ತದೆ. ಈತನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದುಹಿಂದೂ ಜಾಗರಣ ವೇದಿಕೆ ರಾಜ್ಯಾಧ್ಯಕ್ಷ ಬಿ.ಎಸ್.ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಮತಾಂತರ ವಿವಾದ; ಮತಾಂತರವಾಗುವಂತೆ ಪತ್ನಿಯಿಂದ ಪತಿಗೆ ಒತ್ತಡ

ಲಾರೆನ್ಸ್ ಫೆರ್ನಾಂಡೀಸ್ ಎಂಬಾತ ಹಿಂದೂಗಳನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾನೆ. ಕುಗ್ರಾಮಗಳಿಗೆ ಹೋಗಿ ಏಸುವಿನ ಹೆಸರಿನಲ್ಲಿ ಆರೋಗ್ಯ ಸುಧಾರಿಸುತ್ತೇನೆ ಎಂದು ಹೇಳಿ ಮತಾಂತರ ಮಾಡಿಸುತ್ತಿದ್ದಾನೆ. ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಕ್ಯಾಂಪ್ ನಡೆಸಿದ್ದಾನೆ ಎಂದು ಗಮನಕ್ಕೆ ಬಂದಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಪ್ರವೃತ್ತರಾಗಿ ಎಲ್ಲಾ ಮಾಹಿತಿ ಸಂಗ್ರಹಿಸುತ್ತಿದೆ. ಆತ ಹಣ, ಭೂಮಿ ಹಾಗೂ ಒತ್ತಾಯಪೂರ್ವಕ ಮತಾಂತರ ಮಾಡುತ್ತಿದ್ದಾನೆಯೇ ಎಂದು ತನಿಖೆ ಮಾಡಬೇಕು. ಆತನ ಪೂರ್ಣ ಚರಿತ್ರೆಯನ್ನೇ‌ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here