Home ಬೆಂಗಳೂರು ನಗರ MLC Sudhama Das | ಗ್ಯಾರೆಂಟಿ ಯೋಜನೆಗಳು ಸಾಮಾಜಿಕ ಕಲ್ಯಾಣ ಯೋಜನೆ ಎಂದು ಬಣ್ಣಿಸಿದ ಪರಿಷತ್...

MLC Sudhama Das | ಗ್ಯಾರೆಂಟಿ ಯೋಜನೆಗಳು ಸಾಮಾಜಿಕ ಕಲ್ಯಾಣ ಯೋಜನೆ ಎಂದು ಬಣ್ಣಿಸಿದ ಪರಿಷತ್ ಸದಸ್ಯ ಸುಧಾಮದಾಸ್

12
0
MLC Sudhama Das

ಬೆಂಗಳೂರು, ಮಾರ್ಚ್ 21, (ಕರ್ನಾಟಕ ವಾರ್ತೆ) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ 16 ನೇ ಬಜೆಟ್ ರಾಜ್ಯದ ಸಾಮಾಜಿಕ ಸಾರ್ವತ್ರಿಕ ಕಲ್ಯಾಣ ಯೋಜನೆಗಳನ್ನು ಒಳಗೊಂಡಿದೆ ಎಂದು ಪರಿಷತ್ ಸದಸ್ಯ ಸುಧಾಮದಾಸ್ ಬಣ್ಣಿಸಿದರು.

ಪ್ರತಿ ಬಾರಿ ಯಾವುದೇ ಸರ್ಕಾರಗಳಿರಲಿ ಆಯವ್ಯಯ ಮಂಡಿಸಿದಾಗ ಆಡಳಿತ ಪಕ್ಷಗಳು ಸ್ವಾಗತಿಸುವುದು, ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುವುದು ಸರ್ವೇ ಸಾಮಾನ್ಯ ವಿಷಯ. ಟೀಕೆ ಟಿಪ್ಪಣಿ ಇದ್ದಲ್ಲಿ ಯಾವುದರಲ್ಲಿ ಲೋಪವಿದೆ ಎಂಬುದರ ಬಗ್ಗೆ ಪರಿಶೀಲಿಸಲು ಸರ್ಕಾರಗಳು ಮುಂದಾಗುತ್ತವೆ. ಹಾಗೂ ಸಮಸ್ಯೆ – ಲೋಪಗಳನ್ನು ಸರಿಪಡಿಸಿಕೊಂಡು ಸರಿ ದಾರಿಯಲ್ಲಿ ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರಿಂದ ಹಾಗೂ ಮಾಧ್ಯಮದವರ ವಿಶ್ವಾಸಾರ್ಹತೆಯನ್ನು ಗಳಿಸುತ್ತವೆ.

ಗ್ಯಾರೆಂಟಿ ಯೋಜನೆ ಸಾಮಾಜಿಕ ಕಲ್ಯಾಣ ಯೋಜನೆ : ಮಾನ್ಯ ಮುಖ್ಯಮಂತ್ರಿಗಳು 16ನೇ ಆಯವ್ಯಯ ಮಂಡಿಸಿದ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಳಿಗೇನಾದರೂ ಅಪಾಯವಿದೆಯೇ ಎಂದು ನನಗೆ ಬಹಳ ಆತಂಕ ಇತ್ತು. ಆದರೆ ಮಾನ್ಯ ಮುಖ್ಯ ಮಂತ್ರಿಗಳು ಆಯವ್ಯಯ ಮಂಡಿಸಿದ ನಂತರ ಆ ಆತಂಕ ದೂರವಾಯಿತು. ಗ್ಯಾರೆಂಟಿ ಯೋಜನೆಗಳ ಬಹು ದೊಡ್ಡ ಪ್ರಯೋಗ ನಮ್ಮಲ್ಲಿ ನಡೆಯುತ್ತಿದೆ. ಇದು ಕೇವಲ ಗ್ಯಾರೆಂಟಿ ಯೋಜನೆಗಳಲ್ಲ. ಇದು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಎಂದು ತಿಳಿಸಿದರು.

ಇಂತಹ ಗ್ಯಾರೆಂಟಿ ಯೋಜನೆಗಳ ಒತ್ತಡದ ನಡುವೆಯೂ ಹೊಸ ತೆರಿಗೆಯನ್ನು ಪ್ರಸ್ತಾಪ ಮಾಡದಿರುವುದು ಬಜೆಟ್‍ನ ಹೆಗ್ಗಳಿಕೆಯಾಗಿದೆ. ಇಂತಹ ಜವಾಬ್ದಾರಿ ಹೊತ್ತವರಿಗೆ ಅದರ ಕಷ್ಟ – ಸುಖ ತಿಳಿಯುತ್ತದೆ. ಮುಂದಿನ ಆಯವ್ಯಯ ಮಂಡನೆಯ ಸಮಯಕ್ಕೆ ರಾಜ್ಯವು ಸಾಲದಿಂದ ಹೊರಗೆ ಬರುವ ಭರವಸೆ ನನಗಿದೆ ಎಂದರು.

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಶೋಷಿತರು, ಸಾಮಾಜಿಕ ದುರ್ಬಲವಾದ ಸಮುದಾಯಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಇರುವ ಬದ್ಧತೆಯನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಅವರ ಶ್ರೇಯೋಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳು / ಯೋಜನೆಗಳನ್ನು 2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಕೇವಲ ಎಸ್.ಸಿ / ಎಸ್.ಟಿ ಸಮುದಾಯದವರ ಅಭಿವೃದ್ಧಿಗಾಗಿ ಕಾನೂನುಗಳನ್ನು ರೂಪಿಸಿಲ್ಲ. ಎಲ್ಲರಿಗೂ ರಕ್ಷಣೆ / ಕಲ್ಯಾಣ ನೀಡುವಂತೆ “ಸರ್ವರಿಗೂ ಸಮ ಪಾಲು – ಸರ್ವರಿಗೂ ಸಮಬಾಳು” ಎಂಬ ದೃಷ್ಠಿಯಿಂದ ಆಯವ್ಯಯ ಮಂಡಿಸಿದ್ದಾರೆ.

ಪರಿಶಿಷ್ಟ ಸಮುದಾಯಕ್ಕೆ ಎಸ್ ಸಿ ಎಸ್ ಪಿ – ಟಿಎಸ್ ಪಿ ಹಣ ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಅರ್ಹರಿಗೆ ಯೋಜನೆಗಳು ತಲುಪುತ್ತಿಲ್ಲ. ಕಳೆದ ಸಾಲಿನಲ್ಲಿ ಕೇವಲ ಶೇಕಡ 54 ರಷ್ಟು ಮಾತ್ರ ಅನುದಾನ ಖರ್ಚಾಗಿದೆ ಎಂದರು.

ಎಸ್ ಸಿ ಎಸ್ ಪಿ – ಟಿಎಸ್ ಪಿ ಹಣ ಸಮರ್ಪಕವಾಗಿ ವಿನಿಯೋಗವಾಗಬೇಕೆಂದರೆ ಸಮಾಜ ಕಲ್ಯಾಣ ಇಲಾಖೆಯನ್ನು ಆರ್ಥಿಕ ಇಲಾಖೆಯಿಂದ ಹೊರತರಬೇಕು. ಆಗ ಆದಲ್ಲಿ ಸಂಪೂರ್ಣ ಹಣ ಬಳಕೆಯಾಗಿ ಆ ಸಮುದಾಯದ ಕಲ್ಯಾಣ ಆಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎಸ್ ಸಿ ಎಸ್ ಪಿ – ಟಿಎಸ್ ಪಿ ಹಣ ಸಮರ್ಪಕವಾಗಿ ವಿನಿಯೋಗ ಮಾಡಿ, ಕಾರ್ಯಕ್ರಮಗಳನ್ನು ಅನುμÁ್ಠನ ಮಾಡದ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ಅಂತಹ ಅಧಿಕಾರಿಗಳನ್ನು ಕೂಡಲೇ ಗುರುತಿಸಿ ಕ್ರಮ ಕೈಗೊಂಡಲ್ಲಿ ಉಳಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸುತ್ತಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here