ಗೋಕಾಕ (ಬೆಳಗಾವಿ): ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಖದೀಮರ ಜಾಲವನ್ನು ಗೋಕಾಕ ಪೊಲೀಸರು ಪತ್ತೆಹಚ್ಚಿ ಭಾರೀ ಹೊಡೆತ ನೀಡಿದ್ದಾರೆ.
ಕಳೆದ 29/06/24 ರಂದು ಗೋಕಾಕ ನಗರದ ಕಡಬಗಟ್ಟಿ ಗುಡ್ಡದಲ್ಲಿ ಒಂದು ಕಾರರನ್ನು ವಶಪಡಿಸಿಕೊಂಡ ನಂತರ ಈ ಜಾಲವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಕಾರಿನಲ್ಲಿ 100 ಮುಖಬೆಲೆಯ 305 ನೋಟುಗಳು ಮತ್ತು 500 ಮುಖಬೆಲೆಯ 6792 ನೋಟುಗಳು ತುಂಬಿದ ಬ್ಯಾಗ್ ಪತ್ತೆಯಾಯಿತು. ತಕ್ಷಣವೇ ಕಾರಿನಲ್ಲಿದ್ದವರನ್ನು ಪಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಈ ಖದೀಮರಿಂದ ಅವರ ಜಾಲದ ಬಗ್ಗೆ ಮಹತ್ವದ ಮಾಹಿತಿಗಳನ್ನು ಹೊರತೆಗೆದರು.
ವಿಚಾರಣೆ ವೇಳೆ, ಈ ಖದೀಮರು ತಮ್ಮ ಕಾರ್ಯಚಟುವಟಿಕೆಗಳು ಹಿಂದಿ ಫರ್ಜಿ ವೆಬ್ ಸಿರೀಜ್ ಕಥೆಯಂತೆ ತಮಾಷೆಯಾಗಿರುವುದಾಗಿ ತಿಳಿಸಿದರು. ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ನೋಟುಗಳನ್ನು ಮುದ್ರಿಸಿ, 1 ಲಕ್ಷ ಹಣಕ್ಕೆ 6 ಲಕ್ಷ ಡೂಪ್ಲಿಕೇಟ್ ನೋಟುಗಳನ್ನು ಮಾರಾಟ ಮಾಡುತ್ತಿದ್ದರು.
ಪೊಲೀಸರು 523,900 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರು ಜನರನ್ನು ಬಂಧಿಸಲಾಗಿದೆ: ಅನ್ವರ್ ಯಾದವಾಡ, ಸದ್ದಾಂ ಯಡಳ್ಳಿ, ರವಿ ಹ್ಯಾಗಾಡಿ, ದುಂಡಪ್ಪ ಒಣಶೆಣವಿ, ವಿಠ್ಠಲ್ ಹೊಸತೋಟ, ಹಾಗು ಮಲ್ಲಪ್ಪ ಕುಂದಾಳಿ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಗೋಕಾಕ ನಗರ ಠಾಣಾ ಪೊಲೀಸರು ಮತ್ತು ಗೋಕಾಕ ಎಸ್‌ಪಿ ಭೀಮಾಶಂಕರ್ ಗುಳೇದ ಅವರ ಕೆಲಸವನ್ನು ಎಲ್ಲರು ಮೆಚ್ಚಿದ್ದಾರೆ. ಗೋಕಾಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸ್ಥಳೀಯ ಜನರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಪತ್ತೆಯಿಂದ ಭರವಸೆ ಮೂಡಿದ್ದು, ಪೋಲಿಸರ ಶ್ರೇಯಸ್ಸು ಹೆಚ್ಚಾಗಿದೆ.