Home ಕರ್ನಾಟಕ ರಾಜ್ಯದಲ್ಲಿ ಕೋವಿಡ್ ನ ಹೊಸ 8,249 ಪ್ರಕರಣಗಳು, 159 ಮಂದಿ ಸಾವು ವರದಿ

ರಾಜ್ಯದಲ್ಲಿ ಕೋವಿಡ್ ನ ಹೊಸ 8,249 ಪ್ರಕರಣಗಳು, 159 ಮಂದಿ ಸಾವು ವರದಿ

42
0

ಬೆಂಗಳೂರು:

ರಾಜ್ಯದಲ್ಲಿ ಕಳೆದ 24 ತಾಸಿನಲ್ಲಿ ಕೋವಿಡ್ ನ ಹೊಸ 8,249 ಪ್ರಕರಣಗಳು ವರದಿಯಾಗುವುದರೊಂದಿಗೆ ಈವರೆಗೆ ಸಾಂಕ್ರಾಮಿಕ ರೋಗಕ್ಕೆ ಒಳಗಾದವರ ಒಟ್ಟು ಸಂಖ್ಯೆ 27,47,539ಕ್ಕೆ ಏರಿದೆ.

ಕಳೆದ 24 ತಾಸಿನಲ್ಲಿ ಮಾರಕ ಸೋಂಕಿಗೆ 159 ಮಂದಿ ಬಲಿಯಾಗುವುದರೊಂದಿಗೆ ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 32,644ಕ್ಕೆ ಏರಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು 44 ಮಂದಿ, ಮೈಸೂರಿನಲ್ಲಿ 20, ಹಾವೇರಿಯಲ್ಲಿ 10, ಬಳ್ಳಾರಿ ಮತ್ತು ಧಾರವಾಡದಲ್ಲಿ ತಲಾ 9 ಹಾಗೂ ಶಿವಮೊಗ್ಗದಲ್ಲಿ 7 ರೋಗಿಗಳು ಇದೇ ಅವಧಿಯಲ್ಲಿ ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here