Home ಬೆಂಗಳೂರು ನಗರ ಕೊರೋನಾ-ಎಚ್ಚರ ತಪ್ಪಿದರೆ ಅನಾಹುತ ಸಚಿವ ಅರವಿಂದ ಲಿಂಬಾವಳಿ

ಕೊರೋನಾ-ಎಚ್ಚರ ತಪ್ಪಿದರೆ ಅನಾಹುತ ಸಚಿವ ಅರವಿಂದ ಲಿಂಬಾವಳಿ

131
0

ಬೆಂಗಳೂರು:

ಕೊರೋನಾ ಇನ್ನೂ ಪೂರ್ಣಪ್ರಮಾಣದಲ್ಲಿ ಮರೆಯಾಗಿಲ್ಲ, ಎಚ್ಚರ ತಪ್ಪಿದರೆ ಅನಾಹುತ ಆಗುತ್ತದೆ ಹಾಗಾಗಿ ಇನ್ನೂ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಅವರು ಇಂದು ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿಯ ತಮ್ಮ ಕಛೇರಿಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಕೋವಿಡ್ -19 ಲಸಿಕೆ ವ್ಯವಸ್ಥೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಎಲ್ಲ ವೈದ್ಯರಿಗೆ ಶುಭಾಶಯಗಳನ್ನು ತಿಳಿಸಿದ ಸಚಿವ ಅರವಿಂದ ಲಿಂಬಾವಳಿ ವೈದ್ಯರ ಸೇವೆ ಶ್ಲಾಘನೀಯ. ಎಲ್ಲ ಆರೋಗ್ಯ ಅಧಿಕಾರಿಗಳು ತಮ್ಮ ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ, ಮೂರನೇ ಅಲೆಯನ್ನು ತಡೆಯಲು ಸಿದ್ಧರಾಗಿ ಎಂದು ತಿಳಿಸಿ, ವೈದ್ಯರ ಬಿಡುವಿಲ್ಲದ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

Covid 19 Minister Arvind Limbavali says People still need to be cautious

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹದೇವಪುರ ಕ್ಷೇತ್ರದ ಹೂಡಿ, ದೊಡ್ಡನೆಕ್ಕುಂದಿ, ಹಗದೂರು ವರ್ತೂರು ಗಳಲ್ಲಿ ಕೋವಿಡ್ ಪ್ರಕರಣಗಳು ವರದಿ ಆಗುತ್ತಿದ್ದು, ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಕಂಟೋನ್ಮೆಂಟ್ ಜೋನ್ ಗಳನ್ನು ನಿರ್ಮಿಸಿ ನಿಯಂತ್ರಿಸಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಕೆಲ ಆರೋಗ್ಯ ಅಧಿಕಾರಿಗಳು ಲಸಿಕೆ ಕಡಿಮೆ ಬರುತ್ತಿದ್ದು, ಹೆಚ್ಚು ಲಸಿಕೆ ನೀಡಲು ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದು ಮನವಿ ಮಾಡಿದರು, ಅದಕ್ಕೆ ಸ್ಪಂದಿಸಿದ ಸಚಿವರು ಮೇಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ದುಡ್ಡಿಗೆ ಲಸಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ, ಹೀಗಾಗಿ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ಡಿಎಚ್ಓ ಅವರಿಗೆ ತಿಳಿಸಿದರು.

ಮಹದೇವಪುರ ಕ್ಷೇತ್ರದಲ್ಲಿ ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ಶೇ 61 ರಷ್ಟು ಜನರಿಗೆ ನೀಡಲಾಗಿದೆ, ಎರಡನೇ ಡೋಸ್ ಲಸಿಕೆಯನ್ನು ಶೇ. 17 ರಷ್ಟು ಜನರಿಗೆ ನೀಡಲಾಗಿದ್ದು, ಬಿಟ್ಟು ಹೋದ ಕೋರೊನಾ ವಾರಿಯರ್ಸ್‌ ಹಾಗೂ ಫ್ರಂಟ್ ಲೈನ್ ವಾರಿಯರ್ಸ್‌ ಗಳಿಗೆ ಲಸಿಕೆ ನೀಡಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ಸೂಚಿಸಿದರು.

ವಾರ್ಡ್ ಡೇಟಾರ್ ಕಮೀಟಿ ವತಿಯಿಂದ ನೀಡುವ ಮಾಹಿತಿ ಅನುಸಾರವಾಗಿ, ಎಲ್ಲ ಗ್ರಾಮಗಳಲ್ಲಿ ಕ್ಯಾಂಪ್ ಮಾಡಿ ಲಸಿಕೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here