Home ಆರೋಗ್ಯ ಯುಗಾದಿ ಹಬ್ಬವಾಗಲಿ, ರಂಜಾನ್ ಆಗಲಿ ಯಾವುದಕ್ಕೂ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆಯಿಲ್ಲ: ಡಾ.ಕೆ.ಸುಧಾಕರ್

ಯುಗಾದಿ ಹಬ್ಬವಾಗಲಿ, ರಂಜಾನ್ ಆಗಲಿ ಯಾವುದಕ್ಕೂ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆಯಿಲ್ಲ: ಡಾ.ಕೆ.ಸುಧಾಕರ್

21
0
Sudhakar

ಬೆಂಗಳೂರು:

ಯುಗಾದಿ ಹಬ್ಬವಾಗಲಿ, ರಂಜಾನ್ ಆಗಲಿ ಯಾವುದಕ್ಕೂ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆಯಿಲ್ಲ,ಯಾವುದೇ ವಿನಾಯಿತಿಯೂ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಕಳೆದ ಬುಧವಾರ ಒಂದೇ ದಿನ ಬೆಂಗಳೂರಿನಲ್ಲಿ 5 ಸಾವಿರ ಸೇರಿದಂತೆ ರಾಜ್ಯದಲ್ಲಿ ಒಟ್ಟು 7 ಸಾವಿರ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ಆಯುಕ್ತರು, ನಗರಾಡಳಿತ ತಜ್ಞರ ಜೊತೆ ಸಭೆ ಮಾಡುತ್ತೇನೆ.ಬಿಬಿಎಂಪಿ ಯಿಂದ ಕೋವಿಡ್ ಗಾಗಿ ಎಂಟು ವಲಯಗಳನ್ನು ರಚನೆ ಮಾಡಿದ್ದು, ಕ್ಯಾಬಿನೆಟ್ ಮಂತ್ರಿ ನೇಮಿಸಿ ಎಲ್ಲರನ್ನೊಳಗೊಂಡ ನಿಯೋಗ ಮಾಡಿದ್ದಾರೆ.ಸೋಂಕು ನಿಯಂತ್ರಣಕ್ಕೆ ಆಡಳಿತಾತ್ಮಕವಾಗಿ ಯಾವ ಕ್ರಮಕೈಗೊಳ್ಳಬೇಕು ಅದೆಲ್ಲವನ್ನು ಚರ್ಚಿಸುತ್ತೇವೆ ಎಂದರು.

ಈಶಾನ್ಯ ರಾಜ್ಯದ ಆರೇಳು ರಾಜ್ಯ ಸೇರಿದರೂ ಸಹ ಕಡಿಮೆ ಸೋಂಕಿದೆ.ಆದರೆ ಮಹಾರಾಷ್ಟ್ರ ರಾಜ್ಯದಲ್ಲಿ ಐವತ್ತು, ಅರವತ್ತು ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಎಲ್ಲದಕ್ಕೂ ಸೇರಿ ಸಮಾನವಾಗಿ ಮಾರ್ಗಸೂಚಿ ಮಾಡಲು ಸಾಧ್ಯವಿಲ್ಲ.ಆದ್ದರಿಂದ ಎಲ್ಲವನ್ನು ನೋಡಿಕೊಂಡು ಸಿಎಂ ರಾಜ್ಯ ಸರ್ಕಾರಕ್ಕೆ ಕ್ರಮಕೈಗೊಳ್ಳುವಂತೆ ಕೇಂದ್ರ ಸೂಚಿಸಿದೆ.ಆದ್ದರಿಂದ ಮಾರ್ಗಸೂಚಿ ಸಂಬಂಧ ಮತ್ತೊಮ್ಮೆ ಸಿಎಂ ಜೊತೆ ಸಮಾಲೋಚಿಸಿ ಬಳಿಕ ವಿವರಿಸುವುದಾಗಿ ಸುಧಾಕರ್ ಹೇಳಿದರು.

ಪ್ರಧಾನಮಂತ್ರಿಗಳು ಇಂದು ದೇಶದ ಎಲ್ಲಾ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸಿಕೋವಿಡ್ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ.ಎರಡನೇ ಅಲೆ ನಿಯಂತ್ರಣ, ಮಾರ್ಗಸೂಚಿ ಬಗ್ಗೆ ಅನುಷ್ಠಾನ ಬಗ್ಗೆ ಚರ್ಚೆ ಮಾಡಲಿದ್ದಾರೆ.ಸಿಎಂ ಯಡಿಯೂರಪ್ಪ ಸಹ ಇದರಲ್ಲಿ ಭಾಗವಹಿಸಿ ಪ್ರಧಾನಿಗೆ ರಾಜ್ಯದ ಸ್ಥಿತಿಗತಿ ಬಗ್ಗೆ ವಿವರಿಸಲಿದ್ದಾರೆ.ರಾಜ್ಯದಲ್ಲಿ ಐವತ್ತು ಲಕ್ಷಕ್ಕೂ ಅಧಿಕ ಲಸಿಕೆ ಕೊಡುವ ಕೆಲಸ ಆಗಲಿದೆ.ಸೋಂಕಿನ ಪ್ರಮಾಣ ಹೆಚ್ಚಾಗಿರುವ 13 ಜಿಲ್ಲೆಗಳ ಜಿಲ್ಲಾಡಳಿತ ಜೊತೆ ನಿನ್ನೆ ವೀಡಿಯೋ ಸಂವಾದ ಮಾಡಲಾಗಿದೆ.13 ಜಿಲ್ಲೆಗಳಿಗೆ ನಿರ್ದಿಷ್ಟ ಮಾರ್ಗಸೂಚಿ ನೀಡಲಾಗಿದ್ದು, ಪ್ರತಿ ಜಿಲ್ಲೆಗಳಲ್ಲಿ ವಾರ್ ರೂಮ್, ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ.ಲಸಿಕೆ ಯಾವುದೇ ಕಾರಣಕ್ಕೂ ಕಡಿಮೆ ಆಗದಂತೆ ಸಮರ್ಪಕ ಮಾಹಿತಿ ಒದಗಿಸುವಂತೆ ಸೂಚಿಸಿದ್ದು, ಎರಡನೇ ಅಲೆ ಹೆಚ್ಚು ಹರಡದಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here