ರಾಜ್ಯಕ್ಕೆ ಕೋವಿಶೀಲ್ಡ್ ಬಂದಿಲ್ಲ ಎಂದ ಆರೋಗ್ಯ ಸಚಿವ ಸುಧಾಕರ್
ಬೆಂಗಳೂರು:
ಕರ್ನಾಟಕದಲ್ಲಿ ಹದಿನೆಂಟು ವರ್ಷ ಮೇಲ್ಪಟ್ಟ ಜನರಿಗೆ ಮೇ 1ರಿಂದ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರ ಜತೆಗೆ ಶುಕ್ರವಾರ ಮಾತನಾಡಿದ ಅವರು, ’18 ರಿಂದ 44 ವರ್ಷದವರಿಗೆ ಲಸಿಕೆ ಒದಗಿಸುವ ಸಂಬಂಧ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಇನ್ನೂ 1 ಕೋಟಿ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ ಪೂರೈಕೆ ಮಾಡಿಲ್ಲ. ಹಾಗಾಗಿ, ಮೇ 1 ರಿಂದ ವಿತರಣೆ ನಡೆಯುವುದಿಲ್ಲ ‘ ಎಂದು ತಿಳಿಸಿದರು.
ಆದರೆ, ’44 ವರ್ಷ ಮೇಲ್ಪಟ್ಟ ವರಿಗೆ ಲಸಿಕೆ ವಿತರಣೆ ಮುಂದುವರೆಯಲಿದೆ. ರಾಜ್ಯಕ್ಕೆ ಈವರೆಗೆ 99.5 ಲಕ್ಷ ಡೋಸ್ ಲಸಿಕೆ ಬಂದಿದೆ. ಅದರಲ್ಲಿ 95 ಲಕ್ಷ ಡೋಸ್ ವಿತರಿಸಲಾಗಿದೆ ‘ ಎಂದು ಹೇಳಿದರು.